ಡಿ.ಕೆ ಶಿವ ಕುಮಾರ್
ರಾಜಕೀಯ
ಗುಜರಾತ್ ಶಾಸಕರ ಕರ್ನಾಟಕ ಪ್ರವಾಸಕ್ಕಾಗಿ ರಾಹುಲ್ ಗಾಂಧಿ ಅನುಮತಿ ಕೋರಿಕೆ: ಡಿ.ಕೆ ಶಿವಕುಮಾರ್
ನಗರದ ಹೊರವಲಯದ ಬಿಡದಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರನ್ನು ಪ್ರವಾಸ ಕರೆದೊಯ್ಯುವ ಸಂಬಂಧ ಇಂಧನ ಸಚಿವ...
ಬೆಂಗಳೂರು: ನಗರದ ಹೊರವಲಯದ ಬಿಡದಿಯ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಗುಜರಾತ್ ಶಾಸಕರನ್ನು ಪ್ರವಾಸ ಕರೆದೊಯ್ಯುವ ಸಂಬಂಧ ಇಂಧನ ಸಚಿವ ಶಿವಕುಮಾರ್, ರಾಹುಲ್ ಗಾಂಧಿ ಜೊತೆ ಚರ್ಚಿಸಲಿದ್ದಾರೆ.
ಸದ್ಯ ದೆಹಲಿಯಲ್ಲಿರುವ ಶಿವಕುಮಾರ್, ಗುಜರಾತ್ ನ 43 ಶಾಸಕರನ್ನು ಕರ್ನಾಟಕದ ಪ್ರಸಿದ್ಧ ಸ್ಥಳಗಳಿಗೆ ಪ್ರವಾಸ ಕರೆದೊಯ್ಯಲು ರಾಹುಲ್ ಗಾಂಧಿ ಅನುಮತಿ ಕೋರಿದ್ದಾರೆ.
ಕರ್ನಾಟಕ, ಗುಜರಾತ್ ರಾಜ್ಯ ಸಭೆ ಚುನಾವಣೆ ಸಂಬಂಧ ಚರ್ಚಿಸಲು ಅಧಿಕೃತ ಭೇಟಿಗಾಗಿ ದೆಹಲಿಗೆ ತೆರಳಿರುವ ಶಿವಕುಮಾರ್ ಶಾಸಕರ ಪ್ರವಾಸದ ಬಗ್ಗೆಯೂ ಚರ್ಚಿಸಲಿದ್ದಾರೆ. ಎಐಸಿಸಿಎ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ ಪಟೇಲ್ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿಯಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗಿದೆ.
ಕಳೆದ ನಾಲ್ಕು ದಿನಗಳಿಂದ ಗುಜರಾತ್ ಕಾಂಗ್ರೆಸ್ ಶಾಸಕರು ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಮಡಿಕೇರಿ ಶ್ರವಣಬೆಳಗೊಳ ನೋಡುವ ಆಸೆ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ