ಬ್ರಾಹ್ಮಣರು ಗೋಮಾಂಸ ತಿನ್ನುತ್ತಿದ್ದರು: ಬಿಜೆಪಿ ವಕ್ತಾರ ವಾಮನ ಆಚಾರ್ಯ; ಹೇಳಿಕೆ ವಾಪಸ್!

ಭಾರತ ಮೊದಲು ಕೃಷಿ ಪ್ರಧಾನ ದೇಶವಾಗುವ ಮುನ್ನ ಬ್ರಾಹ್ಮಣರು ಗೋಮಾಂಸ ಸೇವನೆ ಮಾಡುತ್ತಿದ್ದರು ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ವಕ್ತಾರ ...
ವಾಮನ ಆಚಾರ್ಯ
ವಾಮನ ಆಚಾರ್ಯ
ಬೆಂಗಳೂರು:  ಭಾರತ ಮೊದಲು ಕೃಷಿ ಪ್ರಧಾನ ದೇಶವಾಗುವ ಮುನ್ನ ಬ್ರಾಹ್ಮಣರು ಗೋಮಾಂಸ ಸೇವನೆ ಮಾಡುತ್ತಿದ್ದರು ಎಂದು ಹೇಳುವ ಮೂಲಕ ರಾಜ್ಯ ಬಿಜೆಪಿ ವಕ್ತಾರ ವಾಮನ್ ಆಚಾರ್ಯ ವಿವಾದದ ಕಿಡಿ ಹೊತ್ತಿಸಿದ್ದಾರೆ.
ವಾಮನ ಆಚಾರ್ಯ ಅವರ ಹೇಳಿಕೆಗೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಭಾರತದಲ್ಲಿ ಕೃಷಿ ಆರಂಭಕ್ಕು ಮನ್ನ ಬ್ರಾಹ್ಮಣರು ಸೇರಿದಂತೆ ಎಲ್ಲಾ ಸಮುದಾಯದವರು ಹಸುವಿನ ಮಾಂಸವನ್ನು ಸೇವಿಸುತ್ತಿದ್ದರು ಎಂದು ಕನ್ನಡ ಚಾನಲ್ ವೊಂದರ ಕಾರ್ಯಕ್ರದಲ್ಲಿ ಹೇಳಿದ್ದಾರೆ.
ಗೋಮಾರಾಟದ ಬಗ್ಗೆ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಿದ ನಂತರ ಟಿವಿ ಚಾನೆಲ್ ವೊಂದು ಏರ್ಪಡಿಸಿದ್ದ  ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಬ್ರಾಹ್ಮಣರೂ ಗೋಮಾಂಸ ಸೇವಿಸುತ್ತಿದ್ದರು ಎಂದು ಹೇಳಿದ್ದರು.
ನಂತರ ಸಿ.ಟಿ ರವಿ, ಗೋಮಧುಸೂದನ್ ಸೇರಿದಂತೆ ಹಲವು ಬಿಜೆಪಿ ನಾಯಕರು ಈ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಶಾಸಕ ಸುರೇಶ್ ಕುಮಾರ್, ಈ ಹೇಳಿಕೆ ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರೋಧವಾಗಿದೆ ಎಂದು ಫೇಸ್ ಬುಕ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. 
ಆದರೆ ಸಾಮಾಜಿಕ ಮಾಧ್ಯಮದಲ್ಲಿ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ನಂತರ ಪ್ರತಿಕ್ರಿಯಿಸಿದ್ದ ವಾಮನ್ ಆಚಾರ್ಯ ಇದು ನನ್ನ ವಯಕ್ತಿಕ ಹೇಳಿಕೆ, ನನ್ನ ಹೇಳಿಕೆಯಿಂದ ಪಕ್ಷಕ್ಕೆ ನೋವು ಮಾಡಲು ನಾನು ಬಯಸುವುದಿಲ್ಲ , ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸುತ್ತೇನೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com