ಜುಲೈ 4ರಂದು ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಖಚಿತಪಡಿಸಿದ ಪುತ್ರ ಪೂರ್ವಜ್

ಅತ್ಯಂತ ನೋವಿನಿಂದಲೇ ಕಾಂಗ್ರೆಸ್ ತೊರೆದಿರುವ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು ಜುಲೈ 4ರಂದು ಜೆಡಿಎಸ್...
ಎಚ್ ವಿಶ್ವನಾಥ್ ಹಾಗೂ ಅವರ ಪುತ್ರ ಪೂರ್ವಜ್
ಎಚ್ ವಿಶ್ವನಾಥ್ ಹಾಗೂ ಅವರ ಪುತ್ರ ಪೂರ್ವಜ್
Updated on
ಬೆಂಗಳೂರು: ಅತ್ಯಂತ ನೋವಿನಿಂದಲೇ ಕಾಂಗ್ರೆಸ್ ತೊರೆದಿರುವ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು ಜುಲೈ 4ರಂದು ಜೆಡಿಎಸ್ ಸೇರ್ಪಡೆಯಾಗುತ್ತಿರುವುದಾಗಿ ಅವರ ಪುತ್ರ ಪೂರ್ವಜ್ ಅವರು ಬುಧವಾರ ಫೇಸ್ ಬುಕ್ ನಲ್ಲಿ ಖಚಿತಪಡಿಸಿದ್ದಾರೆ.
ಜುಲೈ 4ರಂದು ಕರ್ನಾಟಕದ ರಾಜಕೀಯ ಕರ್ಣ ವಿಶ್ವನಾಥ್ ಅವರು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರಲಿದ್ದಾರೆ ಎಂದು ಪೂರ್ವಜ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಆತ್ಮೀಯ ಗೆಳೆಯರೆ, ಕರ್ನಾಟಕದ ರಾಜಕೀಯ ಕರ್ಣನ ನಡೆ ಬಗ್ಗೆ ಒಂದು ಮಾಹಿತಿ... ಜೂನ್ 23ರಂದು 40 ವರ್ಷಗಳ ಕಾಂಗ್ರೆಸ್ ಪಕ್ಷದ ಸಂಬಂಧವನ್ನು ಒಲ್ಲದ ಮನಸಿನಿಂದ ಕಡಿದುಕೊಂಡ ಬಳಿಕ ಸುಮಾರು ಒಂದು ವಾರಗಳ ಕಾಲ ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ ಅಂತಿಮವಾಗಿ ಕರ್ನಾಟಕದ ನೆಲ ಜಲ ಹಾಗೂ ರೈತರ ಕಷ್ಟಕ್ಕೆ ಸ್ಪಂದಿಸುವ ಹಾಗೂ ತಮ್ಮನ್ನು ನಂಬಿರುವ ಮುಸ್ಲಿಂ ಗೆಳೆಯರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ನಮ್ಮ ತಂದೆಯವರು ಜುಲೈ 4ರಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯುತ್ತಿದ್ದಾರೆ. ಅಂದು ಸಾಹೇಬರ ಅಭಿಮಾನಿಗಳು, ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅವರ ಕೈ ಬಲಪಡಿಸುವಂತೆ ಪೂರ್ವಜ್ ಫೇಸ್ ಬುಕ್ ನಲ್ಲಿ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com