ಉದ್ದೇಶಪೂರ್ವಕವಾಗಿ ಎಲ್ಲಾ ಅಧಿಕಾರದಿಂದ ಕಾಂಗ್ರೆಸ್ ನನ್ನನ್ನು ದೂರ ಇಟ್ಟಿತ್ತು: ಕುಮಾರ್ ಬಂಗಾರಪ್ಪ

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಮಾರ್ಚ್ 8 ರಂದು ಅಧಿಕೃತವಾಗಿ ...
ಕುಮಾರ್ ಬಂಗಾರಪ್ಪ
ಕುಮಾರ್ ಬಂಗಾರಪ್ಪ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಮಾರ್ಚ್ 8 ರಂದು ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ.

ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಕುಮಾರ್ ಬಂಗಾರಪ್ಪ ಮೂರು ಬಾರಿ ಸೊರಬ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2004 ರಿಂದ ನನಗೆ ಯಾವುದೇ ಅಧಿಕಾರ ಕೊಡದೇ ಕಾಂಗ್ರೆಸ್ ಉದ್ದೇಶಪೂರ್ವಕವಾಗಿಯೇ ನನ್ನನ್ನು ದೂರ ಇಟ್ಟಿತ್ತು ಎಂದು ಅವರು ಆರೋಪಿಸಿದ್ದಾರೆ.

ಈಡಿಗ ಸಮುದಾಯದ ಪ್ರಬಲ ನಾಯಕನಾಗಿರುವ ನನ್ನ ಸಾಮರ್ಥ್ಯ, ಅನುಭವ, ಶಕ್ತಿ ಮತ್ತು ವರ್ಚಸ್ಸಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೆ ಬೆಳಸಬಹುದಿತ್ತು. ಆದರೆ ಪಕ್ಷದಿಂದ ನನ್ನನ್ನೂ ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಯಿತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ನನ್ನನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂಜ ಸೊರಬದ ಎಪಿಎಂಸಿ ಸಮಿತಿ ಹಾಗೂ ಬಗರ್ ಹುಕುಂ ಸಮಿತಿಗಳಿಗೆ ಜೆಡಿಎಸ್ ಕಾರ್ಯಕರ್ತರನ್ನು ನೇಮಿಸಲಾಯಿತು ಎಂದು ಆಪಾದಿಸಿದ ಕುಮಾರ್ ಬಂಗಾರಪ್ಪ ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮಾರ್ಚ್ 8 ರಂದು ಕುಮಾರ್ ಬಂಗಾರಪ್ಪ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸೇರಿದಂತೆ ಹಲವರು ಬಿಜೆಪಿ ಸೇರಲಿದ್ದಾರೆ.

ಇನ್ನೂ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ರಾಜಕಾರಣಿಗಳು ಪಕ್ಷ ತೊರೆಯುವುದು ಸರ್ವೇ ಸಾಮಾನ್ಯ, ಕುಮಾರ್ ಬಂಗಾರಪ್ಪ ಪಕ್ಷ ತೊರೆಯುತ್ತಿರುವುದರಿಂದ ಕಾಂಗ್ರೆಸ್ ಮೇಲೆ ಯಾವುದೇ ಅಡ್ಡ ಪರಿಣಾಮವಾಗುವುದಿಲ್ಲ ಎಂದು ಹೇಳಿದ್ದಾರೆ. ಬೇರೆ ಪಕ್ಷಗಳಿಂದ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com