
ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ವಿದೇಶ ಪ್ರವಾಸ ಸಂಬಂಧ ಬಿಜೆಪಿ ವಕ್ತಾರ ಸಿ.ಟಿ.ರವಿ ಟ್ವೀಟ್ ಕಾಂಗ್ರೆಸ್ ವಲಯದಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.
ಸಿ. ಟಿ.ರವಿ ಮಾತು ಬೇಜವಾಬ್ದಾರಿತನದಿಂದ ಕೂಡಿದೆ. ಸೋನಿಯಾ ಗಾಂಧಿ ಬಗ್ಗೆ ಹೇಳಿಕೆ ನೀಡುವಾಗ ಜವಾಬ್ದಾರಿಯುತ ರಾಜಕಾರಣಿಯಾಗಿ ಮಾತನಾಡಬೇಕು ಅವರ ಮಾತುಗಳಲ್ಲಿ ಒಳ್ಳೆಯ ಅಭಿರುಚಿಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಿ.ಟಿ.ರವಿ ಅವರನ್ನು ನಿಮಾನ್ಸ್‌ಗೆ ಶಿಫ್ಟ್ ಮಾಡಬೇಕು. 2 ಬಾರಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಮಹಿಳೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡುವಾಗ ಆಲೋಚನೆ ಮಾಡಬೇಕೆಂದು ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರು ದಶಕಗಳ ಕಾಲ ದೇಶವನ್ನು ಆಳಿದ ಗಾಂಧಿ ಕುಟುಂಬಕ್ಕೆ ಭಾರತದಲ್ಲಿ ಒಂದು ಉತ್ತಮ ಆಸ್ಪತ್ರೆ ನಿರ್ಮಿಸಲು ಸಾಧ್ಯವಾಗಿಲ್ಲ, ಹೀಗಾಗಿ ಸೋನಿಯಾಗಾಂಧಿ ವಿದೇಶಕ್ಕೆ ಹೋಗುತ್ತಾರೆ. ಈ ಬಾರಿಯೂ ಹೋಗಿದ್ದಾರೆ, ಅವರು ಚಿಕಿತ್ಸೆಗೆ ಹೋಗಿದ್ದಾರೋ ಅಥವಾ ಬ್ಯಾಂಕ್ ಅಕೌಂಟ್ ನಿರ್ವಹಣೆ ಮಾಡಲು ಹೋಗಿದ್ದಾರೋ? ಹೇಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದೆ, ಏಕೆ ಸೋನಿಯಾ ಗಾಂಧಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಬಾರದು, ಇಲ್ಲಿ ಅವರಿಗೆ ಉತ್ತಮ ಟ್ರೀಟ್ ಮೆಂಟ್ ಸಿಗುತ್ತದೆ ಎಂದು ಟ್ವೀಟ್ ಮಾಡಿದ್ದರು.
Advertisement