ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ತರಬೇತಿ ಮೈದಾನವಾಯ್ತು ಉಪಚುನಾವಣೆ ಕಣ

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಜೊತೆಗೆ ಅವರ ಪುತ್ರ ಡಾ. ಯತೀಂದ್ರ...
ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ
ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ
Updated on

ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಜೊತೆಗೆ ಅವರ ಪುತ್ರ ಡಾ. ಯತೀಂದ್ರ ಗೆ  ಉಪಚುನಾವಣಾ ಕಣ ರಾಜಕೀಯ ತರಬೇತಿ ಮೈದನಾವಾಗಿ ಬದಲಾಗಿದೆ,

ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದ ಡಾ. ಯತೀಂದ್ರ ಸದ್ಯ  ಪ್ರಮುಖ ಚುನವಣಾ ಪ್ರಚಾರಕರಾಗಿದ್ದಾರೆ. ತಮ್ಮ ತಂದೆ ಬಜೆಟ್ ಅಧಿವೇಶನದಲ್ಲಿ ಕಾರ್ಯ ನಿರತರಾಗಿರುವುದರಿಂದ ಯತೀಂದ್ರ ಉಪ ಚುನಾವಣೆ ಪ್ರಚಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಬೆಳಗ್ಗೆ 8 ಗಂಟೆಗೆ ಸ್ಥಳೀಯ ಮುಖಂಡರೊಡನೆ ನಂಜನಗೂಡಿನ ಹಲವು ಗ್ರಾಮಗಳಿಗೆ ತೆರಳುವ ಯತೀಂದ್ರ ಸಂಜೆಯವರೆಗೂ ಪ್ರಚಾರ ನಡೆಸುತ್ತಾರೆ. ತನ್ನ ತಂದೆ ಸರ್ಕಾರ ಹಾಗೂ ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿದ್ದ  ಜನಪರ ಯೋಜನೆಗಳನ್ನು ಪಟ್ಟಿ ಮಾಡಿಕೊಂಡು ಜನರಿಗೆ ವಿವರಿಸುತ್ತಾರೆ.

ದಿ ನ್ಯೀ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಡಾ. ಯತೀಂದ್ರ, ರಾಜಕೀಯ ಎಂಬುದು ಬಹಳ ಕಷ್ಟಕರವಾದ ಕೆಲಸ, ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವಂತಹದ್ದು, ನಾನು ಈ ಕ್ಷೇತ್ರಕ್ಕೆ ಹೊಸೂಬನಾದ್ದರಿಂದ ಆರಂಭದಲ್ಲಿ ನನಗೆ ಸ್ವಲ್ಪ ಕಷ್ಟವಾಯಿತು. ನಮ್ಮ ತಾಳ್ಮೆ ಮತ್ತಿ ಸಮರ್ಪಣೆಯಿಂದ ಮಾತ್ರ ಜನರ ಮನಸ್ಸು ಗೆಲ್ಲಲು ಸಾಧ್ಯ,  ಅವರ ಕುಂದು ಕೊರತೆಗಳನ್ನು ಆಲಿಸಿ ಅವುಗಳನ್ನು ತನ್ನ ತಂದೆಯ ಬಳಿ ಹೇಳುತ್ತೇನೆ, ಅವರು ಅದನ್ನು ಬಗೆಹರಿಸುತ್ತಾರೆ ಎಂದು ಹೇಳಿದ್ದಾರೆ.

2018ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಬಗ್ಗೆ ತನ್ನ ಮೈಂಡ್ ಸೆಟ್ ಆಗಿಲ್ಲ, ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ತನ್ನ ತಂದೆ ಮತ್ತು ತಾಯಿ, ತನ್ನ ಹೋದರ ರಾಕೇಶ್ ಅಕಾಲಿಕ ಸಾವಿನ ಆಘಾತದಿಂದ ಇನ್ನೂ ಹೊರಬಂದಿಲ್ಲ ಎಂದು ಹೇಳಿದ್ದಾರೆ.

ನನ್ನ ಸಹೋರದ ರಾಕೇಶ್ , ರಾಜಕೀಯದಲ್ಲಿ ಏನಾದರೂ ಸಾಧಿಸುತ್ತಾನೆ ಎಂದು ನನ್ನ ತಾಯಿ ಅಪಾರ ಭರವಸೆ ಹೊಂದಿದ್ದರು, ನಾನು ರಾಜಕೀಯಕ್ಕೆ ಬರುವುದು ಬೇಡ ಎಂಬುದು ನನ್ನ ತಂದೆಯವರ ಸಲಹೆಯಾಗಿತ್ತು, ಆದರೆ ವರುಣಾ ಕ್ಷೇತ್ರದ ಜನರ ಸೇವೆ ಮಾಡಬೇಕೆಂಬುದು ನನ್ನ ತಾಯಿಯ ಆಸೆಯಾಗಿದೆ . ರಾಜಕೀಯಕ್ಕೆ ನಾನು ಪ್ರವೇಶಿಸಿರುವುದು ಆಘಾತದಲ್ಲಿರುವ ನನ್ನ ಪೋಷಕರನ್ನು ಅದರಿಂದ ಹೊರತರುವುದೇ ಆಗಿದೆ ಎಂದು ಯತೀಂದ್ರ ಹೇಳಿದ್ದಾರೆ,  ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ದಿಸಬೇಕೆ ಅಥವಾ ಬೇಡವೇ ಎಂಬುದನ್ನು ನನ್ನ ಪೋಷಕರ ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com