ತಣ್ಣಗಾಗದ ಭಿನ್ನಮತದ ಬೇಗುದಿ: ಎಲ್ಲವೂ ಸರಿಯಿದೆ ಎಂದು ತಿಪ್ಪೆ ಸಾರಿಸಿದ ಬಿಜೆಪಿ ನಾಯಕರು

ನಗರದಲ್ಲಿ ನಡೆದ ಬಿಜೆಪಿಯ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಭಿನ್ನಮತ ಶಮನಗೊಳಿಸುವಲ್ಲಿ ವಿಫಲವಾಗಿದೆ. 2018ರ ವಿಧಾನ ಸಬೆ ಚುನಾವಣೆಯನ್ನು ಎಲ್ಲರೂ ...
ಬಿಜೆಪಿ ಕಾರ್ಯಕಾರಿಣಿಯಲ್ಲಿ ಈಶ್ವರಪ್ಪ
ಬಿಜೆಪಿ ಕಾರ್ಯಕಾರಿಣಿಯಲ್ಲಿ ಈಶ್ವರಪ್ಪ
ಮೈಸೂರು: ನಗರದಲ್ಲಿ ನಡೆದ ಬಿಜೆಪಿಯ ಎರಡು ದಿನಗಳ ರಾಜ್ಯ ಕಾರ್ಯಕಾರಿಣಿ ಭಿನ್ನಮತ ಶಮನಗೊಳಿಸುವಲ್ಲಿ ವಿಫಲವಾಗಿದೆ. 2018ರ ವಿಧಾನ ಸಬೆ ಚುನಾವಣೆಯನ್ನು ಎಲ್ಲರೂ ಒಟ್ಟಾಗಿ ಎದುರಿಸೋಣ ಎಂಬ ಸಂದೇಶವೂ ಸಿಗಲಿಲ್ಲ, ಜೊತೆಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಸ್ಯ ಬಗೆಹರಿಸುವಲ್ಲಿ ಯಶಸ್ವಿಯಾಗಲಿಲ್ಲ.
ಆದರೆ ಕೆಲ ಬಿಜೆಪಿ ನಾಯರು ಎಲ್ಲವೂ ಸರಿಯಿದೆ ಎಂದು ಹೇಳಿದ್ದಾರೆ, ಇಬ್ಬರು ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ಹೇಳಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಷ್ಯಕ್ಕೆ ಕಡಿವಾಣ ಹಾಕಿ ಪಕ್ಷದ ಹೈಕಮಾಂಡ್ ಕಠಿಣ ಸಂದೇಶ ನೀಡುತ್ತಾರೆ ಎಂದು ಹಲು ಮಂದಿ ನಿರೀಕ್ಷಿಸಿದ್ದರು,  ಆದರೆ ಇದ್ಯಾವುದು ನಡೆಯಲ್ಲಿಲ್ಲ, ಇಬ್ಬರು ನಾಯಕರು ತಮ್ಮನ ಅಹಂಕಾರ ಪ್ರತಿಷ್ಠೆಯನ್ನು ಬದಿಗೊತ್ತಿ ಪರಸ್ಪರ ಮಾತನಾಡಲಿಲ್ಲ. ಹೆಗಲಿಗೆ ಹೆಗಲು ಕೊಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಶಪಥ ಮಾಡುವ ಔದಾರ್ಯವನ್ನು ಇಬ್ಬರು ನಾಯಕರು ತೋರಲಿಲ್ಲ ಎಂದು ಕೆಲ ನಾಯಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 
ಎರಡು ಕ್ಷೇತ್ರಗಳ ಉಪ ಚುನಾವಣೆ ಸೋಲಿನಿಂದ ಕಾರ್ಯಕರ್ತರು ನಿರಾಶರಾಗಿದ್ದಾರೆ. ಉಪ ಚುನಾವಣೆ ಗೆಲುವಿನಿಂದ ಪಾಠ ಕಲಿತಿರುವ ಕಾಂಗ್ರೆಸ್ ನಾಯಕರು ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲು ತಯಾರಾಗುತ್ತಿದ್ದಾರೆ. ಬಿಜೆಪಿ ಸೋಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಮೇಲಾಗುವಂತೆ ಮಾಡಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಇಬ್ಬರು ನಾಯಕರು ಒಂದಾಗಿ ಚುನಾವಣೆಗೆ ಸಿದ್ಧರಾಗದೇ ಹೋದರೇ ಮುಂದಿನ ಚುನಾವಣೆಯಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಬಿಪ್ರಾಯ ಪಟ್ಟಿದ್ದಾರೆ.
ಸಭೆಯಲ್ಲಿ ವಿಷಯ ಮಂಡಿಸಿದ ಈಶ್ವರಪ್ಪ, ರೈತ ನಾಯಕರಾದ ಯಡಿಯೂರಪ್ಪ ನನ್ನ ಹಿರಿಯಣ್ಣನಿದ್ದಂತೆ, ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದರು. ಗೋಷ್ಠಿಯ ಕೊನೆಗೆ ಮಾತನಾಡಿದ ಯಡಿಯೂರಪ್ಪ, ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿರುವ ಕುರಿತು ಪರಿಣಾಮಕಾರಿ ಹೋರಾಟ ನಡೆಸಬೇಕು ಎಂದು ಈಶ್ವರಪ್ಪ ನೀಡಿದ ಸಲಹೆಯನ್ನು ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನ ಮಾಡಬೇಕು ಎಂದು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com