ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿ
ರಾಜಕೀಯ
ಕೇಂದ್ರ ಸಚಿವ ಸಂಪುಟ ಪುನಾರಚನೆ: ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿಗೆ ಸ್ಥಾನ?
ಭಾನುವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯದ ಇಬ್ಬರು ಸಂಸದರಿಗೆ ಮಂತ್ರಿಗಿರಿ ದೊರಕುವ ಸಾಧ್ಯತೆಯಿದೆ ..
ಹುಬ್ಬಳ್ಳಿ: ಭಾನುವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯದ ಇಬ್ಬರು ಸಂಸದರಿಗೆ ಮಂತ್ರಿಗಿರಿ ದೊರಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ವಿಧನಾಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಸಂಸದ ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿ ಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಈ ಸುದ್ದಿಯನ್ನು ಪ್ರಹ್ಲಾದ್ ಜೋಶಿ ನಿರಾಕರಿಸಿದ್ದಾರೆ. ಒಂದು ವೇಳೆ ಜೋಶಿಗೆ ಸಚಿವ ಸ್ಥಾನ ದೊರಕಿದರೇ 4 ದಶಕಗಳ ನಂತರ ಧಾರವಾಡದಿಂದ ಮತ್ತೊಬ್ಬ ಸಂಸದ ಕೇಂದ್ರ ಸಚಿವರಾಗಲಿದ್ದಾರೆ.
ಬೆಳಗಾವಿ ಸಂಸದ ಸುರೇಶ್ ಅಂಗಡಿ ಮತ್ತು ಪ್ರಹ್ಲಾದ್ ಜೋಶಿ ಹೆಸರುಗಳು ಸಂಪುಟ ವಿಸ್ತರಣೆಯಲ್ಲಿ ಕೇಳಿ ಬರುತ್ತಿವೆ ಎಂದು ದೆಹಲಿಯ ರಾಷ್ಟ್ರೀಯ ಆಂಗ್ಲ ಭಾಷೆ ಚಾನೆಲ್ ಗಳಲ್ಲಿ ಸುದ್ದಿ ಬಿತ್ತರವಾಗುತ್ತಿತ್ತು. ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಮೋದಿ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಚು ಮನ್ನಣೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾನು ಯಾವುದೇ ಸಚಿವ ಸ್ಥಾನ ನಿರೀಕ್ಷಿಸುತ್ತಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ. ಈ ಸಂಬಂಧ ಪಕ್ಷದಿಂದಾಗಲಿ ಅಥವಾ ಸರ್ಕಾರದಿಂದಾಗಲಿ ನನಗೆ ಯಾವುದೇ ಸಂದೇಶ ಬಂದಿಲ್ಲ, ಅದು ಪ್ರಧಾನಿ ಮೋದಿ ಅವರಿಗೆ ಬಿಟ್ಟ ವಿಚಾರ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟ ಪಡಿಸಿದ್ದಾರೆ.
ಜೋಶಿ ಅವರಿಗೆ ಈ ವಿಷಯದ ಬಗ್ಗೆ ಮಾಹಿತಿಯಿಲ್ಲ, ಅವರು ಯಾವುದೇ ಒಂದು ನಿರ್ಧಿಷ್ಟ ಸಮುದಾಯದಿಂದ ಬಂದವರಲ್ಲ, ಮಂತ್ರಿಗಿರಿಗೆ ಲಾಬಿ ಮಾಡುವಷ್ಟು ಹಣ ಅವರ ಬಳಿಯಿಲ್ಲ, ಒಂದು ವೇಳೆ ಅವರು ಮಂತ್ರಿಯಾದರೇ ಅದು ಅವರ ಸ್ವ ಸಾಮರ್ಥ್ಯದಿಂದ. ಮೋದಿ ಮತ್ತು ಅಮಿತ್ ಶಾ ಅವರ ಕಾರ್ಯ ಕ್ಷಮತೆಗುರುತಿಸಿದರೇ ಮಾತ್ರ ಅವರಿಗೆ ಮೋದಿ ತಂಡದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂದು ಸಂಸದರ ಆಪ್ತರು ತಿಳಿಸಿದ್ದಾರೆ.
ಜೋಶಿ ಬ್ರಾಹ್ಮಣ ಸಮುದಾಯಕ್ಕೆ ಹಾಗೂ ಸುರೇಶ್ ಅಂಗಡಿ ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಜೋಶಿ ಮತ್ತು ಅಂಗಡಿ ಅವರನ್ನು ಪಡಿಸಿದರೇ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ