ನನ್ನ ಪಾಲಿಗೆ ಮಂಡ್ಯ-ಮೈಸೂರು ಒಂದೇ: ಸಕ್ಕರೆ ನಾಡಿನ ಮತದಾರನ ಓಲೈಕೆಯಲ್ಲಿ ಸಿದ್ದು

ವಿಧಾನ ಸಭೆ ಚುನಾವಣೆ ಗುಂಗಿನಲ್ಲಿರುವ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಮಂಡ್ಯ ಮತದಾರನ ಓಲೈಕೆಗೆ ..
ಸಿದ್ದರಾಮಯ್ಯ
ಸಿದ್ದರಾಮಯ್ಯ
ಮೈಸೂರು/ ಮಂಡ್ಯ: ವಿಧಾನ ಸಭೆ ಚುನಾವಣೆ ಗುಂಗಿನಲ್ಲಿರುವ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಮಂಡ್ಯ ಮತದಾರನ ಓಲೈಕೆಗೆ ಮುಂದಾಗಿದ್ದಾರೆ. 
ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗಾಗಿ ಹಾಗೂ ನೀರಾವರಿ ಕಾಮಗಾರಿಗಳಿಗಾಗಿ 800 ಕೋಟಿ ರು ಹಣ ಬಿಡುಗಡೆ ಮಾಡಿದ್ದಾರೆ.
ಜೊತೆಗೆ ಕಾವೇರಿ ನದಿ ಪಾತ್ರ ನೀರಾವರ ಕಾಮಗಾರಿಗಳಿಗೆ 2,200 ಕೋಟಿ ರು ಹಣ ಹಾಗೂ ಮಂಡ್ಯ ಜಿಲ್ಲೆಯೊಂದರ 1,16,434 ರೈತರಿಗೆ ಸಾಲ ಮನ್ನಾ ಮಾಡುವ ಮೂಲಕ ಅನುಕೂಲ ಕಲ್ಪಿಸಿದ್ದಾರೆ.
ಶುಕ್ರವಾರ ಮಂಡ್ಯದಲ್ಲಿ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,  ತಾವು ವಿದ್ಯಾರ್ಥಿಯಾಗಿದ್ದಾಗ ಮಂಡ್ಯ ಜಿಲ್ಲೆಯೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧದ ಬಗ್ಗೆ ಹಂಚಿಕೊಂಡರು. ನಾನು ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ನಡುವೆ ಯಾವತ್ತೂ ತಾರತಮ್ಯ ಮಾಡಿಲ್ಲ,  ಮೈಸೂರು ಮತ್ತು ಮಂಡ್ಯ ಎರಡು ನನ್ನ ಹೃದಯಕ್ಕೆ ಹತ್ತಿರ.  ಮಂಡ್ಯದ ಮೇಲೆ ನನಗೆ ವಿಶೇಷ ಪ್ರೀತಿ ಹಾಗೂ ವಿಶ್ವಾಸವಿದೆ,  ಹೀಗಾಗಿ ನಾನು ಹಣಕಾಸು ಸಚಿವನಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂದು ನೆನಪಿಸಿಕೊಂಡರು.
ಚುನಾವಣೆ ಸಮೀಪವಾಗುತ್ತಿರುವುದರಿಂದ ನಾನು ಈ ಎಲ್ಲಾ ಕೆಲಸಗಳನ್ನು ನಾನು ಮಾಡಿದ್ದೇನೇಯೆ ಎಂದು ಸಂಸದ ಸಿ.ಎಸ್ ಪುಟ್ಟರಾಜು ಅವರಿಗೆ ಪ್ರಶ್ನಿಸಿದರು. ಕೇಂದ್ರ ಸರ್ಕಾರದ ನಿರ್ಧರಿಸಿದ ಬೆಲೆಯಂತೆ ರಾಜ್ಯ ಸರ್ಕಾರ ಕಬ್ಬಿನ ಬೆಲೆ ನಿರ್ಧರಿಸಿದೆ ಎಂದು ಹೇಳಿದರು. 
ರಾಜ್ಯ ಸರ್ಕಾರ ಮುಂದಿನ 15 ದಿನಗಳಲ್ಲಿ 16 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ವಿತರಿಸಲಿದೆ, ಇದರಿಂದಾಗಿ 4 ಕೋಟಿ ಜನ ಅನ್ನ ಭಾಗ್ಯ ಯೋಜನೆಗೆ ಒಳಪಡಲಿದ್ದಾರೆ,  ಇದನ್ನು ಹೊರತು ಪಡಿಸಿ ರಾಜ್ಯದ ಹಾಲು ಉತ್ಪಾದಕರಿಗೆ ಸರ್ಕಾರ ಬೆಂಬಲ ಬೆಲೆ ನೀಡುತ್ತಿದೆ ಎಂದರು.
ಇನ್ನೂ ಮಹಾದಾಯಿ ನದಿ ನೀರಿನ ಸಮಸ್ಯೆ ಬಗೆಹರಿಸಲು ಬಿಜೆಪಿ ನಾಯಕರು ಗೋವಾ ಸಿಎಂ ಜೊತೆ ನಡೆಸಿದ ಮಾತುಕತೆಯಿಂದ ಯಾವುದೇ ಪಾಸಿಟಿವ್ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಮಹಾದಾಯಿ ಸಮಸ್ಯೆ ಬಗೆಹರಿಸಲು ಮದ್ಯ ಪ್ರವೇಶಿಸಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com