ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಜೆಡಿಎಸ್ ಬಲವರ್ಧನೆಗೆ ಶ್ರಮಿಸದಿದ್ದರೇ ಮುಲಾಜಿಲ್ಲದೇ ಪಕ್ಷದಿಂದ ಕಿತ್ತು ಹಾಕುತ್ತೇನೆ: ದೇವೇಗೌಡ

ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷದ ಬಲವರ್ಧನೆಗಾಗಿ ಶ್ರಮಿಸಬೇಕು, ಇಲ್ಲದಿದ್ದರೇ ಕಠಿಣ ಕ್ರಮ ಅನುಭವಿಸಲು ಸಿದ್ಧರಾಗಿ...
Published on
ಬೆಂಗಳೂರು: ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರೂ ಪಕ್ಷದ ಬಲವರ್ಧನೆಗಾಗಿ ಶ್ರಮಿಸಬೇಕು, ಇಲ್ಲದಿದ್ದರೇ ಕಠಿಣ ಕ್ರಮ ಅನುಭವಿಸಲು ಸಿದ್ಧರಾಗಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಹೊಸ ಪದಾಧಿಕಾರಿಗಳು ಮತ್ತಿ ಶಾಸಕರ  ಸಭೆಯಲ್ಲಿ  ಮಾತನಾಡಿದ ಅವರು,  ಕೆಲಸ ಮಾಡದೇ ಸುಮ್ಮನೇ ಓಡಾಡಿಕೊಂಡು ಇರುವವರನ್ನು ಮುಲಾಜಿಲ್ಲದೇ ಪಕ್ಷದಿಂದ ಕಿತ್ತು ಹಾಕುತ್ತೇನೆ ಎಂದು ಗುಡುಗಿದ್ದಾರೆ.
ಪಕ್ಷದ ಇವತ್ತಿನ ನಾಯಕತ್ವ ಕಳಪೆ ಆಗಿಲ್ಲ. ಎಲ್ಲರೂ ಮೈ ಕೊಡವಿಕೊಂಡು ಕೆಲಸ ಮಾಡಿದರೆ ಅಧಿಕಾರ ಹಿಡಿಯಬಹುದು. ನಮ್ಮ ಪಕ್ಷದಲ್ಲಿ ದೊಡ್ಡ ನಾಯಕರು ಇಲ್ಲದೇ ಇರಬಹುದು. ಇದ್ದವರನ್ನೇ ನಾಯಕರನ್ನಾಗಿ ಮಾಡಿ ಶಕ್ತಿ ತುಂಬಲು ಸಾಧ್ಯವೇ ಎಂಬುದನ್ನು ಪ್ರಯೋಗ ಮಾಡುತ್ತೇನೆ ಎಂದು ತಿಳಿಸಿದ ಅವರು,  ಪಕ್ಷವನ್ನು ಅಧಿಕಾರಕ್ಕೆ ತರುವ ತನಕ ನಿದ್ದೆ ಮಾಡುವುದಿಲ್ಲ’ ಎಂದು ದೇವೇಗೌಡ ಹೇಳಿದರು.
‘ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲೇಬೇಕು ಎಂಬ ಹಟವಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರಿಗೆ ಇನ್ನೊಂದು ಅವಕಾಶ ನೀಡಬೇಕು ಎಂಬ ಅಪೇಕ್ಷೆ ಎಲ್ಲ ಜಿಲ್ಲೆಗಳಲ್ಲಿದೆ. ಏಕತೆಯಿಂದ ಕೆಲಸ ಮಾಡಿದರೆ ಭವಿಷ್ಯವಿದೆ’ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com