ಉತ್ತರ ಕರ್ನಾಟಕದಿಂದ ಬಿಎಸ್ ವೈ ಸ್ಪರ್ಧೆ: ಶಿಕಾರಿಪುರದೊಂದಿಗಿನ 4 ದಶಕಗಳ ರಾಜಕೀಯ ಒಡನಾಟ ಅಂತ್ಯ?

ಒಂದೆಡೆ ವೀರಶೈವ ಲಿಂಗಾಯತ ಮತಗಳು ಬಿಜೆಪಿಗೆ ಸಿಗದಂತೆ ಕಾಂಗ್ರೆಸ್ ಯತ್ನಿಸುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ...
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ಒಂದೆಡೆ ವೀರಶೈವ ಲಿಂಗಾಯತ ಮತಗಳು ಬಿಜೆಪಿಗೆ ಸಿಗದಂತೆ ಕಾಂಗ್ರೆಸ್ ಯತ್ನಿಸುತ್ತಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಕಣಕ್ಕಿಳಿಸಲು ಅಮಿತ್ ಶಾ ತಂತ್ರ ನಡೆಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಕರ್ನಾಟಕ ಭಾಗದ ಯಾವುದಾದರೊಂದು ಕ್ಷೇತ್ರದಿಂದ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಆದೇಶಿದ್ದಾರೆ, ಇದರಿಂದ ಮಾಜಿ ಸಿಎಂ ಯಡಿಯೂರಪ್ಪನವರ ರಾಜಕೀಯ ತವರಾಗಿದ್ದ ಶಿಕಾರಿಪುರ ಕ್ಷೇತ್ರದ ಒಡನಾಟ ಅಂತ್ಯವಾಗುವ ಸಾಧ್ಯತೆಯಿದೆ.
ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಕಾಂಗ್ರೆಸ್ ಮುಖಂಡರು ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ತನ್ನ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಹೀಗಾಗಿ ಬಿಜೆಪಿ ಉತ್ತರ ಕರ್ನಾಟಕದತ್ತ ತನ್ನ ಗಮನ ಕೇಂದ್ರಿಕರಿಸುತ್ತಿದೆ. ಸಮುದಾಯದ ನಡುವೆ ನಡೆಯುತ್ತಿರುವ ಜಗಳದಲ್ಲಿ ಬಿಜೆಪಿ ಮೂಗು ತೂರಿಸದೇ ಮೌನವಾಗಿದೆ. ಪಕ್ಷದ ಸಾಂಪ್ರಾದಾಯಿಕ ಭದ್ರಕೋಟೆ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬಹುಮತ ಪಡೆಯದಿದ್ದರೇ ಮಿಷನ್-150 ಸಾಧ್ಯವಿಲ್ಲ ಎಂದು ಅಮಿತ್ ಶಾ ಸಂದೇಶ ರವಾನಿಸಿದ್ದಾರೆ, ಯಡಿಯೂರಪ್ಪ ಅವರು ಉತ್ತರ ಕರ್ನಾಟಕದಿಂದ ಸ್ಪರ್ಧಿಸಿದರೇ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗುತ್ತದೆ ಎಂದು ಸೂಚಿಸಿದ್ದಾರೆ.
ನಾನು ಸಿದ್ದನಿದ್ದೇನೆ: ಯಡಿಯೂರಪ್ಪ 
ಉತ್ತರ ಕರ್ನಾಟಕದಿಂದ ಸ್ಪರ್ದಿಸಬೇಕೆಂಬುದು ನಮ್ಮ ಪಕ್ಷದ ವರಿಷ್ಠರ ಆಶಯವಾಗಿದೆ. ಇದರ ಬಗ್ಗೆ ಚಿಂತಿಸಿ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ,
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 10-12 ಸೀಟು ಪಡೆಯಬೇಕೆಂಬ ನಿರೀಕ್ಷೆಯಲ್ಲಿ ಬಿಜೆಪಿಯಿದೆ, ಯಡಿಯೂರಪ್ಪ ಇಲ್ಲಿಂದ ಸ್ಪರ್ದಿಸಿದರೇ,  ಟಿಕೆಟ್ ಆಕಾಂಕ್ಷಿಗಳಿಗೆ ಪ್ರಬಲ ಸಂದೇಶ ರವಾನಿಸಿದಂತಾಗುತ್ತದೆ.  ಹೀಗಾಗಿ ಅವರು ಟಿಕೆಟ್ ಹಂಚಿಕೆ ವೇಳೆ ಯಾವುದೇ ತ್ಯಾಗ ಮಾಡಲು ಸಿದ್ಧರಾಗಿರುತ್ತಾರೆ.ಹೀಗಾಗಿ ಯಡಿಯೂರಪ್ಪ ತಮ್ಮ ತವರು ಕ್ಷೇತ್ರವನ್ನು ಅನಿವಾರ್ಯವಾಗಿ ಬಿಟ್ಟುಕೊಡಬೇಕಿದೆ.
2018ರ ವಿಧಾನ ಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ ಎಂದು ಹೇಳಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಹೊರಬಂದು ಯಡಿಯೂರಪ್ಪ ಮೊದಲ ಬಾರಿಗೆ ಹೊರಗಿನ ಜಿಲ್ಲೆಯಲ್ಲಿ ಸ್ಪರ್ದಿಸಬೇಕಾಗುತ್ತದೆ. ಶಿಕಾರಿಪುರ ವಿಧಾನ ಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿರುವ ಯಡಿಯೂರಪ್ಪ ಸದ್ಯ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com