ಪ್ರಧಾನಿ ಮೋದಿಯವರ ವಿದೇಶಿ ನೀತಿ ಕುರಿತು ರಾಹುಲ್ ಗಾಂಧಿ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅದಕ್ಷ ಎಂದು ಕರೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತದ ಗಡಿ ...
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ರಾಹುಲ್ ಗಾಂಧಿ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ ರಾಹುಲ್ ಗಾಂಧಿ

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅದಕ್ಷ ಎಂದು ಕರೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತದ ಗಡಿ ರಾಷ್ಟ್ರಗಳು ದೋಕ್ಲಾಮ್ ವಿಷಯವನ್ನು ಹೆಚ್ಚು ಪ್ರಸ್ತಾಪಿಸಿ ಚೀನಾ ಜೊತೆ ಅನಿಶ್ಚಿತ ಪರಿಸ್ಥಿತಿಯಲ್ಲಿವೆ ಎಂದು ಟೀಕಿಸಿದ್ದಾರೆ.

ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ಸಭೆಯೊಂದರಲ್ಲಿ ಅವರು ಮಾತನಾಡಿ, ನಮ್ಮ ಪ್ರಧಾನಿ ಚೀನಾ ಅಧ್ಯಕ್ಷರ ಜೊತೆ ಸಲುಗೆಯಿಂದ ವರ್ತಿಸುತ್ತಿರುವಾಗ ಚೀನಾ ಭಾರತ ಪ್ರಾಂತ್ಯದೊಳಗೆ ಹೆಲಿಪ್ಯಾಡ್ ಮತ್ತು ರಸ್ತೆಗಳನ್ನು ನಿರ್ಮಿಸುತ್ತಿದೆ, ಆದರೆ ಮೋದಿಯವರು ಇವೆಲ್ಲವುಗಳನ್ನು ನೋಡಿ ಸುಮ್ಮನೆ ಕುಳಿತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ನಮ್ಮ ಗಡಿ ಭಾಗಗಳು ದುರ್ಬಲವಾಗುವಾಗ ಪ್ರಧಾನಿಯವರು ಏನೂ ಮಾತನಾಡುವುದಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿಯವರು ಭರವಸೆ ನೀಡಿರುವುದು ಹಾಗೆಯೇ ಉಳಿದುಕೊಂಡಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮತ್ತು ಎಲ್ಲಾ ನಾಗರಿಕರ ವೈಯಕ್ತಿಕ ಖಾತೆಗಳಿಗೆ ತಲಾ 15 ಲಕ್ಷ ರೂಪಾಯಿ ಒದಗಿಸುವ ಭರವಸೆಗಳೆಲ್ಲವೂ ಈಡೇರದೆ ಹಾಗೆಯೇ ಉಳಿದುಕೊಂಡಿದೆ ಎಂದರು.

ವೇದಿಕೆಯಲ್ಲಿ ಭಾಷಣ ಮಾಡುವಾಗ ಪ್ರಧಾನಿ ಮೋದಿಯವರ ಪಕ್ಕ ಭ್ರಷ್ಟಾಚಾರವೆಸಗಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪನವರು ಕುಳಿತಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ಕೇಂದ್ರ ಸರ್ಕಾರ ತನ್ನ ಭ್ರಷ್ಟ ಆಡಳಿತದ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತನಾಡಬೇಕೆಂದು ಹೇಳಿದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮಗ ರಾತ್ರಿ ಕಳೆದು ಹಗಲು ಆಗುವುದರೊಳಗೆ ಶ್ರೀಮಂತರಾಗಿದ್ದಾರೆ. ಜಯ್ ಶಾ ಅವರ ಸಂಪತ್ತು 50 ಸಾವರಗಳಿಂದ 80 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಮೋದಿಯವರು ಮೌನವಾಗಿದ್ದಾರೆ. ರಫೆಲ್ ಒಪ್ಪಂದದಲ್ಲಿ ಪ್ರಧಾನಿಯವರು ಖುದ್ದಾಗಿ ಒಪ್ಪಂದವನ್ನು ತಿದ್ದುಪಡಿ ಮಾಡಿ ಅದರ ಲಾಭವನ್ನು ತನ್ನ ಸ್ನೇಹಿತನಿಗೆ ಮಾಡಿಕೊಟ್ಟರು. ಹೆಚ್ಎಎಲ್ ನ್ನು ನಷ್ಟಕ್ಕೆ ತಳ್ಳಿ ಯುಪಿಎ ಸರ್ಕಾರ ಅವಧಿಯಲ್ಲಿ ಮಾಡಲಾಗಿದ್ದ ಒಪ್ಪಂದದ ಮೂರು ಪಟ್ಟು ಅಧಿಕ ಮಾಡಲಾಯಿತು
ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಪುತ್ರಿ ಜೊತೆಗೆ ಉದ್ಯಮಿ ನೀರವ್ ಮೋದಿ ಸಂಪರ್ಕ ಹೊಂದಿದ್ದರಿಂದ ದೇಶ ಬಿಟ್ಟು ಹೋಗಲು ಸರ್ಕಾರ ನೀರವ್ ಮೋದಿಗೆ ಸಹಾಯ ಮಾಡಿತು. ಉದ್ಯಮಿಗಳ ಪರವಾಗಿರುವ ಮೋದಿ ಸರ್ಕಾರ ರೈತರು ಸಾಲ ಮನ್ನಾಕ್ಕೆ ಒತ್ತಾಯಿಸುವಾಗ ಮೋದಿಯವರು ನಿರಾಕರಿಸುತ್ತಾರೆ. ಇದು ಬಿಜೆಪಿಯ ರೈತ ವಿರೋಧಿ ಧೋರಣೆಯನ್ನು ತಿಳಿಸುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com