'ಅನುಭವ ಮಂಟಪ'ದಲ್ಲಿ 10 ನಿಮಿಷ ಇದ್ದ ಮಾತ್ರಕ್ಕೆ ಮತ ಪಡೆದು ಗೆಲ್ಲಲಾಗದು!

ಸಮಾಜ ಸುಧಾರಕ ಬಸವಣ್ಣ ಶರಣರೊಂದಿಗೆ ಸಂವನಹ ನಡೆಸುತ್ತಿದ್ದ ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪ ರಾಜಕೀಯವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬಸವಕಲ್ಯಾಣ: ಸಮಾಜ ಸುಧಾರಕ ಬಸವಣ್ಣ  ಶರಣರೊಂದಿಗೆ ಸಂವನಹ ನಡೆಸುತ್ತಿದ್ದ ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪ ರಾಜಕೀಯವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. 
ಇತ್ತೀಚೆಗೆ  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಬಿಜೆಪಿ ಅಧ್ಯಕ್ಷ  ಅಮಿತ್ ಶಾ ಬಸವ ಕಲ್ಯಾಣಕ್ಕೆ ಭೇಟಿ ನೀಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಬಸವಣ್ಣ ಅವರ ಕೊಡುಗೆಗಳ ಬಗ್ಗೆ ಸ್ಮರಿಸಿದ್ದರು.
ಅನುಭವ ಮಂಟಪದಲ್ಲಿ 770 ಶರಣರು ಸಮಾವೇಶ ನಡೆಸಿದ್ದರು, ಸಮಾಜದ ಒಳಿತಿಗಾಗಿ ವಚನಗಳನ್ನು ಬರೆದಿದ್ದಾರೆ, ರಾಜಕಾರಣಿಗಳು ಅನುಭವ ಮಂಟಕ್ಕೆ ಭೇಟಿ ನೀಡಿದ ಕೂಡಲೇ ಅದು ರಾಜಕೀಯವಾಗಿ ಪ್ರೇರಿತಗೊಳ್ಳುವುದಿಲ್ಲ, ಹಲವು ರಾಜಕಾರಣಿಗಳು ಅನುಭವ ಮಂಟಪದ ಭಕ್ತರು ಕೂಡ ಆಗಿದ್ದಾರೆ.
ರಾಜಕಾರಣಿಗಳ ಈ  ಭೇಟಿಯ ಹಿಂದೆ ರಾಜಕೀಯ ಉದ್ದೇಶವಿರುವುದನ್ನು ನಾನು ಇಲ್ಲ ಎಂದು ಹೇಳಲಾರ, ಆದರೆ ಇಂದಿನ ಮತದಾರರು ಮೂರ್ಖರಲ್ಲ ಎಂದು ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಹಿರೇಮಠ್ ಶ್ರೀ ಬಸವನಲಿಂಗ ಪಟ್ಟದ ದೇವರು ಹೇಳಿದ್ದಾರೆ. ಜೊತೆಗೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನ-ಮಾನ ನೀಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಸ್ವಾಗತಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಅಮಿತ್ ಶಾ ತಮ್ಮ ರಾಜಕೀಯ ಲಾಭಗಳಿಗಾಗಿ ಇಲ್ಲಿಗೆ ಭೇಟಿ ನೀಡಿದ್ದರು, ಆದರೆ ಕೇವಲ 10 ನಿಮಿಷ ಅನುಭವ ಮಂಟಪದಲ್ಲಿ ಸಮಯ ಕಳೆದ ಮಾತ್ರಕ್ಕೆ, ಮತಗಳನ್ನು ಪಡೆಯಲು ಸಾಧ್ಯವಿಲ್ಲ, ಈ ಇಬ್ಬರು ಬಸವಣ್ಣವರಿಗೆ ಹೆಚ್ಚಿನ ಭಕ್ತಿ ತೋರಬೇಕು ಎಂದು ಬರಹಗಾರ ಮಹಾಂತೇಷ್ ಕುಂಬಾರ್ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com