ಯಾವ ಪಕ್ಷದ ಪರವಾಗಿಯೂ ನಿಲ್ಲದೇ ಮೌನ ತಾಳಿವೆ ಚಿತ್ರದುರ್ಗದ ಪ್ರಭಾವೀ ಮಠಗಳು!

ಕೋಟೆಗಳ ನಗರಿ ಚಿತ್ರದುರ್ಗಗಲ್ಲಿ ಹಲವು ಜಾತಿಯ ಮಠಗಳಿವೆ, ಅವುಗಳಲ್ಲಿ ಕೆಲವು ಮತದಾರರ ಮೇಲೆ ತಮ್ಮ ಪ್ರಭಾವ ಬೀರುತ್ತವೆ...
ಮುರುಗಾ ಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಮುರುಗಾ ಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಚಿತ್ರದುರ್ಗ: ಕೋಟೆಗಳ ನಗರಿ ಚಿತ್ರದುರ್ಗಗಲ್ಲಿ ಹಲವು ಜಾತಿಯ ಮಠಗಳಿವೆ, ಅವುಗಳಲ್ಲಿ ಕೆಲವು ಮತದಾರರ ಮೇಲೆ ತಮ್ಮ ಪ್ರಭಾವ ಬೀರುತ್ತವೆ, ಆದರೆ ಅದರ ಮುಖ್ಯಸ್ಥರು ಮಾತ್ರ  ಮುಕ್ತವಾಗಿ ಯಾವುದೇ ಒಂದು ರಾಜಕೀಯ ಪಕ್ಷದ ಪರವಾಗಿ ಮಾತನಾಡುವುದಿಲ್ಲ, 
ಅತಿ ಪ್ರಭಾವಶಾಲಿ ಮಠಗಳಲ್ಲಿ ಒಂದಾದ ಸಾಧು ಲಿಂಗಾಯತರ ಸಿರಿಗೆರೆ ಮಠ, ದಾವಣಗೆರೆ,ಶಿವಮೊಗ್ಗ ಮತ್ತು ಚಿತ್ರದುರ್ಗಗಳಲ್ಲಿ  ಅತಿ ಹೆಚ್ಚಿನ ಪ್ರಮಾಣದಲ್ಲಿ ಸಮುದಾಯದ ಜನರನ್ನು ಹೊಂದಿದೆ, ಈ ಭಾಗದ ಮತದಾರರ ಬೆಂಬಲದ ಆಧಾರದ ಮೇಲೆ ಸಾಮಾನ್ಯವಾಗಿ ಭವಿಷ್ಯದ ಸರ್ಕಾರ ರಚನೆಯಾಗುತ್ತದೆ.
ತರಳಬಾಳು ಮಠದ ಡಾ. ಶಿವಮೂರ್ತಿಶಿವಾಚಾರ್ಯ ಸ್ವಾಮಿ ಚುನಾವಣೆಯನ್ನು ಪಾರದರ್ಶಕವಾಗಿಸಲು ಹಾಗೂ ರೈತರಿಗೆ ಸಹಾಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಈ ಭಾಗದ ಜನರ ಮೇಲೆ ಅತಿ ಹೆಚ್ಚಿನ ಹಿಡಿತವಿದ್ದು ಪ್ರಭಾವಶಾಲಿ ಸ್ವಾಮೀಜಿಯಾಗಿದ್ದಾಕೆ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಇಲ್ಲಿಗೆ ಭೇಟಿ ನೀಡುತ್ತಾರೆ, ಇತ್ತೀಚೆಗೆ ಅಮಿತ್ ಶಾ ಕೂಡ ಈ ತರಳಬಾಳು ಮಠಕ್ಕೆ ಭೇಟಿ ನೀಡಿದ್ದರು.
ಇನ್ನೂ ಹೈದರಾಬಾದ್ ಕರ್ನಾಟಕ, ಮುಂಬಯಿ -ಕರ್ನಾಟಕ  ಭಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯ ಮುರುಘಾ ಮಠದ ಭಕ್ತರಾಗಿದ್ದಾರೆ, ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ವಿಷಯದ ಪ್ರಸ್ತಾಪ ಹಿನ್ನೆಲೆಯಲ್ಲಿ ಈ ಮಠ ಕಾಂಗ್ರೆಸ್ ಗೆ ಬೆಂಬಲ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ ಮಠದ ಡಾ. ಶಿವಮೂರ್ತಿ ಮುರುಗಾ ಸ್ವಾಮಿಗಳು ಯಾರೋಬ್ಬರ ಪರವಾಗಿಯೂ ಎಲ್ಲಿಯೂ ಬಹಿರಂಗ ವಾಗಿ ಬೆಂಬಲ ಘೋಷಿಸಿಲ್ಲ,
ಕಾಂಗ್ರೆಸ್ ಗೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿಗಳ ಬೆಂಬಲವಿದೆ, ಕುರುಬ ಸಮುದಾಯದ ಪ್ರಮುಖ ಮಠಾಧೀಶರಾಗಿರುವ ಸ್ವಾಮೀಜಿ ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು.ಸಿದ್ದರಾಮಯ್ಯ ಅವರಿಗೆ ತಮ್ಮ ಮತ ನೀಡುವಂತೆ ತಮ್ಮ ಕುರುಬ ಸಮುದಾಯಕ್ಕೆ ಬಹಿರಂಗವಾಗಿ ಆಗ್ರಹಿಸಿದ್ದಾರೆ. 
ಕೆಲವು ಭಕ್ತಾದಿಗಳು ಕೆಲ ಮಠಗಳ ಮಠಾದೀಶರನ್ನು ರಾಜಕೀಯದಿಂದ ದೂರವಿರುತ್ತವೆ ಮನವಿ ಮಾಡಿದ್ದಾರೆ. ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗಗಳಲ್ಲಿ ಬಹುಸಂಖ್ಯಾತ ಭಕ್ತರನ್ನು  ಮಾದಿಗ ಮಠ ಹೊಂದಿದೆ.
ಮಾದಾರ ಚನ್ನಯ್ಯ ಗುರುಪೀಠದ  ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕೆಲ ತಿಂಗಳುಗಳ ಹಿಂದೆ ರಾಜಕೀಯಕ್ಕೆ ಬರುವ ಕುರಿತು ಆಸಕ್ತಿ ವ್ಯಕ್ತ ಪಡಿಸಿದ್ದರು, ಭಕ್ತಾದಿಗಳು ಅವರ ಪರವಾಗಿ ಪ್ರಚಾರ ಕೂಡ ಆರಂಭಿಸಿದ್ದರು. ಆದರೆ ಈಗ ಚುನಾವಣೆ ಆರಂಭವಾಗಿದ್ದರೂ ತಟಸ್ಥವಾಗಿದ್ದಾರೆ.
ಇಲ್ಲಿನ ಇಮ್ಮಡಿ ಸಿದ್ದೇಶ್ವರ ಸ್ವಾಮಿಯಂತ ಅತ್ಯಂತ ಹೆಚ್ಚು ಪ್ರಭಾವಶಾಲಿ ಮಠಾಧೀಶರಿದ್ದು, ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com