ಕಾಂಗ್ರೆಸ್ ಪುನರುತ್ಥಾನಕ್ಕೆ ಕರ್ನಾಟಕ ಪ್ರಮುಖ ಪಾತ್ರ ವಹಿಸಲಿದೆ: ಕೆ.ಬಿ. ಕೋಳಿವಾಡ

ಇತಿಹಾಸದುದ್ದಕ್ಕೂ ಕರ್ನಾಟಕವು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪುನರುತ್ಥಾನಕ್ಕೆ ಪ್ರಮುಖ ಪಾತ್ರವನ್ನು ವಹಿಸಿದೆ. ಕಾಂಗ್ರೆಸ್ ಅನ್ನು ಪುನರುಜ್ಜೀವನದ ಹಾದಿಗೆ ತರುವಲ್ಲಿ ಕರ್ನಾಟಕ............
ಕೆ ಬಿ ಕೋಳಿವಾಡ
ಕೆ ಬಿ ಕೋಳಿವಾಡ
ಬೆಂಗಳೂರು: ಇತಿಹಾಸದುದ್ದಕ್ಕೂ ಕರ್ನಾಟಕವು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಪುನರುತ್ಥಾನಕ್ಕೆ ಪ್ರಮುಖ ಪಾತ್ರವನ್ನು ವಹಿಸಿದೆ. ಕಾಂಗ್ರೆಸ್ ಅನ್ನು ಪುನರುಜ್ಜೀವನದ ಹಾದಿಗೆ ತರುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಬಿ.  ಕೋಳಿವಾಡ ಹೇಳಿದ್ದಾರೆ.
ಮೇ 12ರ ವಿಧಾನಸಭೆ ಚುನಾವಣೆಯಲ್ಲಿ ಇದು ಇನ್ನೊಮ್ಮೆ ಮರುಕಳಿಸಲಿದೆ ಎಂದು ಪ್ರಸಕ್ತ  ವಿಧಾನಸಭೆಯ ಸ್ಪೀಕರ್ ಆಗಿರುವ ಕೋಳಿವಾಡ ಯುಎನ್ಐಗೆ ತಿಳಿಸಿದ್ದಾರೆ.
"ಕಾಂಗ್ರೆಸ್ ಪಕ್ಷ ತೊಂದರೆಯಲ್ಲಿದ್ದಾಗಲೆಲ್ಲ ಕರ್ನಾಟಕ ಅದಕ್ಕೆ ಪುನರುಜ್ಜೀವನ ನಿಡಿದೆ. ಇತಿಹಾಸದಲ್ಲಿ ಇದು ದಾಖಲಾಗಿದೆ .1977 ರಲ್ಲಿ ಇಂದಿರಾ ಗಾಂಧಿ ಸೋಲನುಭವಿಸಿದ್ದಾಗ ಸಹ ಕರ್ನಾಟಕವೇ ಅವರಿಗೆ ಮತ್ತೆ ಅಧಿಕಾರ ದಕ್ಕಿಸಿಕೊಟ್ಟಿದೆ. ಈ ಬಾರಿ ಸಹ ಇದೇ ರೀತಿ ಆಗಲಿದೆ. ಈ ಬಾರಿಯ ಚುನಾವಣೆ ಬಹಳ ನಿರ್ಣಾಯಕ ಎನಿಸಲಿದೆ" ಅವರು ಹೇಳಿದ್ದಾರೆ.
"ಕಾಂಗ್ರೆಸ್ ಈ ಬಾರಿ ಸಂಪೂರ್ಣ ಬಹುಮತದೊಡನೆ ಸರ್ಕಾರ ರಚಿಸಲಿದೆ. ನಾವು 2013 ರಲ್ಲಿ ಪಡೆದಿರುವುದಕ್ಕೂ ಹೆಚ್ಚು ಸ್ಥಾನಗಳನ್ನು ಈ ಬಾರಿ ಗಳಿಸಲಿದ್ದೇವೆ." ಕೋಳಿವಾಡ ಹೇಳಿದರು.
ಕರ್ನಾಟಕ ಚುನಾವಣೆಯ ಫಲಿತಾಂಶವು ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆ. ಕಾಂಗ್ರೆಸ್ ಪಕ್ಷವು ಜಾತ್ಯತೀತ ಪಕ್ಷ, ಹಿಂದುಳಿದ, ಕೆಳವರ್ಗದವರ ಪರವಾಗಿರುವ ಪಕ್ಷ. ಸಾಮಾಜಿಕ ನ್ಯಾಯ ನಮ್ಮ ಪಕ್ಷದ ಮೂಲಭೂತ ತತ್ವವಾಗಿದೆ.ಹೀಗಾಗಿ ನಾವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ’ಹೊರಗಿನವರು’ ಎನ್ನುವುದಾಗಿ ಪಕ್ಷದಲ್ಲೇ ಕೆಲವರು ಹುಯಿಲೆಬ್ಬಿಸಲು ನೋಡುತ್ತಿದ್ದಾರೆ. ಇದು ಅನಧಿಕೃತ ಆರೋಪ ಹಾಗೂ ಹೆಚ್ಚು ಪರಿನಾಮ ಬೀರುವುದಿಲ್ಲ. 
"ಒಬ್ಬ ವ್ಯಕ್ತಿಯು ಪಕ್ಷದ ತತ್ವಗಳನ್ನು ಸ್ವೀಕರಿಸಿ ನಮ್ಮ ಜತೆ ಸೇರಿದಾಗ ಅವರು ನಮ್ಮವರೇ ಆಗುತ್ತಾರೆ.ಸಿದ್ದರಾಮಯ್ಯ ಅವರು ಕಾಂಗ್ರೆಸ್ ತತ್ವಗಳನ್ನು ಅನುಸರಿಸದಿದ್ದರೆ ಅಥವಾ ಪಕ್ಷಗಳ ತತ್ವಗಳಿಗೆ ದ್ರೋಹ ಬಗೆದಿದ್ದರೆ ಆಗ ಸಮಸ್ಯೆ ಆಗುತ್ತಿತ್ತು. ಆದರೆ ಮುಖ್ಯಮಂತ್ರಿಗಳು ಹಾಗೇನೂ ಮಾಡುತ್ತಿಲ್ಲ. ಕೆಲವರು ಏನೂ ಹೇಳಬಹುದು, ಆದರೆ ತಾತ್ವಿಕವಾಗಿ ಯಾವ ಕಾಂಗ್ರೆಸ್ ಮುಖಂಡರೂ ಮುಖ್ಯಮಂತ್ರಿಗಳನ್ನು ವಿರೋಧಿಸುವುದಿಲ್ಲ." ಅವರು ವಿವರಿಸಿದ್ದಾರೆ.
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೋಳಿವಾಡ "ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆರಂಭದಿಂದಲೂ, ಎರಡೂ ಪಕ್ಷಗಳ ಗುರಿ ಒಂದೇ ಆಗಿರುತ್ತದೆ. ಕಾಂಗ್ರೆಸ್ ಕ್ರಮೇಣ ಗುರಿಯನ್ನು ಸಾಧಿಸಲು ಬಯಸುತ್ತದೆ; ಆದರೆ "ಕಮ್ಯುನಿಸ್ಟರು ಶೀಘ್ರವಾಗಿ, ತಕ್ಷಣ ತಮ್ಮ ಗುರಿಗಳನ್ನು ಸಾಧಿಸಲು ಬಯಸುತ್ತಾರೆ. ಆದರೆ ಅಂತಿಮ ಗುರಿ ಇಬ್ಬರದೂ ಒಂದೇ ಆಗಿರುತ್ತಾರೆ" ಎಂದರು.
ವೀರಪ್ಪ ಮೊಯ್ಲಿ ಟ್ವೀಟ್ ನಂತಹಾ ವಿವಾದಗಳನ್ನು ಪ್ರಸ್ತಾಪಿಸಿದ ಕೋಳಿವಾಡ ಪಕ್ಷದಲ್ಲಿ ಇಂತಹಾ ಚಿಕ್ಕ ವಿವಾದಗಳಿದ್ದೇ ಇದೆ, ಇವುಗಳನ್ನು ಪಕ್ಷದೊಳಗಿನ ನಾಯಕರಿಂದಲೇ ಬಗೆಹರಿಸಲಾಗುವುದು. ಎಂದರು.
"ನಾನು ಕರ್ನಾಟಕದ ಹಿರಿಯ ಕಾಂಗ್ರೆಸಿಗನಾಗಿದ್ದೇನೆ. 1972 ರಲ್ಲಿ 26 ನೇ ವಯಸ್ಸಿನಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೆ. ಈಗ 74 ವರ್ಷ ವಯಸ್ಸಾಗಿದೆ.ನಾನು ನೋಡಿದಂತೆ ’ಹೊರಗಿನವರು’ ಎನ್ನುವ ಯಾವ ಭೇಧವೂ ನಮ್ಮ ಪಕ್ಷದಲ್ಲಿಲ್ಲ ಎಂದರು.
ನರೇಂದ್ರ ಮೋದಿ  ಅವರ ಕೇಂದ್ರ ಸರ್ಕಾರದ ಕಾರ್ಯಗಳು ಅತೃಪ್ತಿಕರ ಎಂದು ಆರೋಪಿಸಿದ ಕೋಳಿವಾಡ "ಪ್ರಧಾನಿ ಕಚೇರಿ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಅದಾಗ್ಯೂ ನರೇಂದ್ರ ಮೋದಿ ಏನನ್ನು ಹೇಳುತ್ತಾರೆಯೋ ಅದನ್ನು ಕಾರ್ಯಗತ ಮಾಡುತ್ತಿಲ್ಲ. ಅವರು ಕೇವಲ ಭರವಸೆಯನ್ನಷ್ಟೇ ನೀಡುತ್ತಾರೆ. ಕೆಲಸ ಮಾಡುವುದಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ರೂಪಿಸಿದ ಯಾವುದೇ ಒಂದು ಜನೋಪಕಾರಿ ಯೋಜನೆಯನ್ನು ತೋರಿಸಿ ಎಂದು ಅವರು ಸವಾಲೆಸೆದರು.
ಕೇಂದ್ರ ಸರ್ಕಾರ ಜಾರಿಗೆ ತಂದ ಅನಾಣ್ಯೀಕರಣದಿಂದ ರಾಷ್ಟ್ರದ ಆರ್ಥಿಕತೆಗೆ ಅಪಾರ ಹಾನಿಯಾಗಿದೆ. ನೋಟು ವಿನಿಮಯಕ್ಕಾಗಿ ಸರತಿಯಲ್ಲಿ ನಿಂತ ಸುಮಾರು 180 ಕ್ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಕೋಳಿವಾಡ ಹೇಳಿದ್ದಾರೆ.
"ಇದು ಕೇವಲ ಒಬ್ಬರ ನಿರ್ಣಯವಾಗಿದ್ದು ಇದಕ್ಕಾಗಿ ಸಚಿವ ಸಂಪುಟದ ಜತೆ ಚರ್ಚಿಸಿರಲಿಲ್ಲ, ಭಾರತೀಯ ರಿಸರ್ವ್ ಬ್ಯಾಂಕ್ ನೊಡನೆ ಸಹ ಸಮಾಲೋಚನೆ ನಡೆಇಸಿಲ್ಲ. ಎಂದು ಅವರು ಹೇಳಿದರು.
"ನನ್ನ ಕ್ಷೇತ್ರದಲ್ಲಿ ಲಿಂಗ್ಯಾತ ಮತದಾರರು ಪ್ರಬಲರಾಗಿದ್ದಾರೆ ಎನ್ನುವುದನ್ನು ನಾನು ಹೇಳಲಾಗುವುದಿಲ್ಲ" ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಹೇಳಿದ್ದಾರೆ. ರಾಣಿಬೆನ್ನೂರು ಕ್ಷೇತ್ರದಲ್ಲಿ 2.23 ಲಕ್ಷ ಮತದಾರರಿದ್ದು ಅದರಲ್ಲಿ ಸುಮಾರು 80,000 ಲಿಂಗಾಯತರಿದ್ದಾರೆ.
"ನನ್ನ ಕ್ಷೇತ್ರದಲ್ಲಿ ಲಿಂಗಾಯತರು ಪ್ರಬಲರಾಗಿದ್ದಾರೆ ಎಂದೇ ಆದರೂ 1972 ರಿಂದ ನಾನು ಆ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ನಾನು ಒಬ್ಬ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದು ನನ್ನ ಸಮುದಾಯದ ಜನರು ನನ್ನಕ್ಷೇತ್ರದಲ್ಲಿ ಸುಮಾರು 10 ಸಾವಿರದಷ್ಟಿದ್ದರೆ ಅದರಲ್ಲಿ ಸುಮಾರು 7000 ಮಂದಿ ಮತ ಚಲಾಯಿಸಬಹುದು. ನಾನು ಇದುವರೆಗೆ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಲಿಂಗಾಯತರು ನನಗೆ ಬೆಂಬಲ ಸೂಚಿಸಿದ್ದಾರೆ" 
"ಜಾತಿಯೊಂದೇ ಎಲ್ಲಾ ಸನ್ನಿವೇಶದಲ್ಲಿ ಮುಖ್ಯವಾಗುವುದಿಲ್ಲ. ಕೆಲವೊಮ್ಮೆ ಇದು ಸಹಾಯ ಮಾಡಬಹುದು. ರಾಜಕೀಯದಲ್ಲಿ  ಮತದಾರರೊಂದಿಗಿನ ಅಭ್ಯರ್ಥಿಗಳ ಸಂಬಂಧವು ಅತ್ಯಂತ ಮಹತ್ವದ್ದಾಗಿದೆ".ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com