ಪೌರ ಕಾರ್ಮಿಕರ ಜೊತೆ ಸಂವಾದ: ಶಿಷ್ಟಾಚಾರ ಮುರಿದ ರಾಹುಲ್ ಗಾಂಧಿ

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿಧಾನಸಭೆ ಕ್ಷೇತ್ರ ಗಾಂಧಿನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪೌರ ಕಾರ್ಮಿಕರ ಜೊತೆ...
ಪೌರ ಕಾರ್ಮಿಕರ ಜೊತೆೆ ರಾಹುಲ್ ಗಾಂಧಿ
ಪೌರ ಕಾರ್ಮಿಕರ ಜೊತೆೆ ರಾಹುಲ್ ಗಾಂಧಿ
ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿಧಾನಸಭೆ ಕ್ಷೇತ್ರ ಗಾಂಧಿನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದರು, ಸುಮಾರು 15 ನಿಮಿಷಗಳ ಕಾಲ ನಡೆದ ಸಂವಾದದಲ್ಲಿ ರಾಹುಲ್ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ.
ಪೌರ ಕಾರ್ಮಿಕರ ಜೊತೆಗಿನ ಸಂವಾದದಲ್ಲಿ ವೇದಿಕೆ ಬಳಿ ತೆರಳದ ರಾಹುಲ್ ಸಭೆ ಅಂತ್ಯವಾಗುವವರೆಗೂ ನಿಂತುಕೊಂಡೇ ಮಾತನಾಡಿದರು.
ರಾಹುಲ್ ಗಾಂಧಿಗೆ ಕೈಕುಲುಕಿದ ಪೌರ ಕಾರ್ಮಿಕರು ಅವರ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡರು, ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಬಿಬಿಎಂಪಿ ಮೇಯರ್ ಸಂಪತ್ ಕುಮಾರ್ ಈ ವೇಳೆ ಹಾಜರಿದ್ದರು. 
ಕರ್ನಾಟಕ  ಸರ್ಕಾರ ಮಧ್ಯವರ್ತಿಗಳು ಮತ್ತು ಗುತ್ತಿಗೆದಾರರನ್ನು ದೂರ ಇಡುವ ವ್ಯವಸ್ಥೆ ಮಾಡಿದೆ, ಪೌರ ಕಾರ್ಮಿಕರ ಕೆಲಸವನ್ನು ಕಾಯಂ ಗೊಳಿಸಲಾಗುವುದು ಎಂದು ಭರವಸೆ ನೀಡಿದರು. 
ನಮ್ಮ ಕೆಲಸವನ್ನು ಖಾಯಂಗೊಳಿಸುವಂತೆ ರಾಹುಲ್ ಗಾಂಧಿ ಅವರಲ್ಲಿ ಮನವಿ ಮಾಡಿದ್ದೇವೆ ಎಂದು ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯ ಒಬಳೇಶ್ ಎಂಬುವರು ಹೇಳಿದ್ದಾರೆ.
ನಾವು ಖುದ್ದಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ತಿಳಿಸಲು ಬಯಸಿದ್ದೇವು, ಆದರೆ ಸಮಯವಕಾಶದಿಂದ ನಮಗೆ ಈ ಅವಕಾಶ ಸಿಗಲಿಲ್ಲ. ಪೌರ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರುವ ನೀತಿ ನಿಯಮಗಳು ಕೇವಲ ಕಾಗದದ ಮೇಲಷ್ಟೆ ಇದೆ ಎಂದು ತಿಳಿಸಿದ್ದಾರೆ. 
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನೂ ಗುತ್ತಿಗೆ ಆಧಾರದಲ್ಲೇ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಕೆಲಸವನ್ನು ಕಾಯಂಗೊಳಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com