'ಅಂದುಕೊಂಡಷ್ಟು ಸುಲಭವಾಗಿಲ್ಲ ಜ್ಯೂನಿಯರ್ ಖರ್ಗೆ ಗೆಲುವು'!

ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಕೋರಿದ್ದಾರೆ, ..
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on
ಕಲಬುರಗಿ: ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಕೋರಿದ್ದಾರೆ, ಆದರೆ ಈ ಕ್ಷೇತ್ರ ಪ್ರಿಯಾಂಕ್ ಗೆ ಕಠಿಣ ಯುದ್ದವಾಗಲಿದೆ.
1957 ರಲ್ಲಿ ಮೊದಲ ಬಾರಿಗೆ ಚುನಾವಣೆ ಆರಂಭವಾದಾಗಿನಿಂದಲೂ ಚಿತ್ತಾಪುರ ಕ್ಷೇತ್ರವನ್ನು ಕಾಂಗ್ರೆಸ್ ಅಭ್ಯರ್ಥಿಗಳೇ ಪ್ರತಿನಿಧಿಸುತ್ತಿದ್ದಾರೆ, ಬಾಬೂರಾವ್ ಚಿಂಚನಸೂರ್ ಮೂರು ಬಾರಿ ಇದೇ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ. 
ಇನ್ನೂ 2008 ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ 8 ಬಾರಿ ಗುರುಮಿಟ್ಕಲ್ ಕ್ಷೇತ್ರದಿಂದ ಗೆದ್ದು ಬಂದಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರ ಕ್ಷೇತ್ರಕ್ಕೆ ಸ್ಥಳಾಂತರಗೊಂಡರು, 2008ರ  ಚುನಾವಣೆಯಲ್ಲಿ  ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯ ವಾಲ್ಮಿಕಿ ಕಮಲು ನಾಯಕ್ ಅವರನ್ನ 17,442 ಮತಗಳ ಅಂತರದಿಂದ ಸೋಲಿಸಿದರು. ಇನ್ನೂ 2009ರ ಉಪ ಚುನಾವಣೆಯಲ್ಲಿ ವಾಲ್ಮಿಕಿ ಕಮಲು ಪ್ರಿಯಾಂಕ್ ಖರ್ಗೆ ಅವರನ್ನು 1,606 ಮತಗಳಿಂದ ಸೋಲಿಸಲ್ಪಟ್ಟರು. 
ಆದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಕಮಲು ನಾಯಕ್ ಅವರನ್ನು ಪ್ರಿಯಾಂಕ್ ಖರ್ಗೆ 31,191 ಮತಗಳ ಅಂತರದಿಂದ ಸೋಲಿಸಿದರು.2008 ರ ನಂತರ ಜೆಡಿಎಸ್ ಹಿರಿಯ ನಾಯಕರುಗಳಾದ ವಿಶ್ವನಾಥ ಪಾಟೀಲ್ ಹೆಬ್ಬಾರ್ಸ ಲಿಂಗಾರೆಡ್ಡಿ ಭಾಷಾರೆಡ್ಡಿ, ಶ್ರೀನಿವಾಸ್ ಸಾಗರ ಮಕ್ಕು ರವೀಂದ್ರ ಸಜ್ಜನಶೆಟ್ಟಿ ಅವರಿಂದ ಪ್ರಯೋಜನ ಪಡೆಯಿತು. 
ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತ ಮತ್ತು ರೆಡ್ಡಿ ಸಮುದಾಯದ ಬೆಂಬಲ ದೊರಕಿತ್ತು, ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ  ಅಲ್ಲಿನ ಪರಿಸ್ಥಿತಿಯೂ ಬದಲಾಗಿದೆ, 2008ರಲ್ಲಿ ಕಾಂಗ್ರೆಸ್ ಸೇರಿದ್ಜ ಜೆಡಿಎಸ್ ನಾಯಕರು ಸದ್ಯ ಬಿಜೆಪಿ ಸೇರಿದ್ದಾರೆ. 
ಚಿತ್ತಾಪುರ ಶಾಸಕ ಪ್ರಿಯಾಂಕ್ ಹಿರಿಯ ನಾಯಕರಿಗೆ ಗೌರವ ನೀಡುತ್ತಿಲ್ಲ, ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಜಾತಿವಾದ ತಾಂಡವವಾಡುತ್ತಿದೆ,  ಹೀಗಾಗಿ ಜನ ತಮ್ಮ ನಿಷ್ಠೆಯನ್ನು ಬಿಜೆಪಿಗೆ ಬದಲಾಯಿಸಿದ್ದಾರೆ ಎಂದು ಲಿಂಗಾರೆಡ್ಡಿ ತಿಳಿಸಿದ್ದಾರೆ. ಮೊದಲು ಕಾಂಗ್ರೆಸ್ ನಲ್ಲಿದ್ದ ಸೋಮಶೇಖರ್ ಪಾಟೀಲ್, ಹಿರಿಯ ನಾಯಕ ರವಿಂದ್ರ ಸಜ್ಜನಶೆಟ್ಟಿ ಅವರಿಗೆ  ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಹೇಳಿದ್ದರು, ಆದರೆ ಪ್ರಿಯಾಂಕ್ ತಾವು ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿಲ್ಲ, ಪ್ರಿಯಾಂಕ್ ಹೇಗೆ ಹಿರಿಯರನ್ನು ನಿರ್ಲಕ್ಷ್ಸಿಸುತ್ತಾರೆ ಎಂಬುದು ಇದರಿಂದ ತಿಳಿದು ಬರುತ್ತಿದೆ ಎಂದು ಹೇಳಿದ್ದಾರೆ,
ಚಿತ್ತಾಪುರ ತಾಲೂಕಿನ ತರ್ಕಾಸ್ ಪೇಟೆ ಮತದಾರರು ಕೂಡ ಅಸಮಾಧಾನಗೊಂಡಿದ್ದಾರೆ. ಈ ಗ್ರಾಮದ ಮತದಾರರು ಚುನಾವಣೆ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ ತಾವು ಈ ಕ್ಷೇತ್ರದಿಂದ ಜಯ ಸಾಧಿಸುವುದಾಗಿ ಪ್ರಿಯಾಂಕ್ ಖರ್ಗೆ ವಿಶ್ವಾಸದಿಂದಿದ್ದಾರೆ, ಚಿತ್ತಾಪೂರದಲ್ಲಿ ಶಿಕ್ಷಣ, ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ, 282 ಎಕರೆ ಜಮೀನಿನಲ್ಲಿ ನಾಗವಿ ಎಜುಕೇಶನ್ ಹಬ್ ಸ್ಠಾಪನೆಗಾಗಿ 30 ಕೋಟಿ ರು ಬಿಡುಗಡೆ ಮಾಡಲಾಗಿದೆ.ಈ ಜಾಗದಲ್ಲಿ ವಸತಿ ಶಾಲೆಸ ನಾಲ್ಕು ಹಾಸ್ಟೆಲ್ ಮತ್ತು ಮತ್ತಿತರ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರನ್ನು ಕಲಬುರಗಿ ಗ್ರಾಮಾಂತರ ಕ್ಷೇತ್ರಕ್ಕೆ ಶಿಫ್ಟ್ ಮಾಡಿ, ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಚಿತ್ತಾಪುರ ಕ್ಷೇತ್ರದಿಂದ ಸ್ಪರ್ದಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ,
ಬಿಜೆಪಿಯಿಂದಗ ಮಾಜಿ ಶಾಸಕ ವಾಲ್ಮಿಕಿ ಕಮಲು ನಾಯಕ್ ಅಥವಾ ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್ ಕಣಕ್ಕಿಳಿಯಲಿದ್ದು ಇನ್ನೆರಡು ದಿನಗಳಲ್ಲಿ ಪಟ್ಟಿ ಪ್ರಕಟವಾಗಲಿದೆ. ಚಿತ್ತಾಪುರ ಕ್ಷೇತ್ರವನ್ನು ಬಿಎಸ್ ಪಿ ಗೆ ಬಿಟ್ಟುಕೊಡುವುದಾಗಿ ಜೆಡಿಎಸ್ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com