'ಗೆಲ್ಲುವ ಕನಸು ಕಾಣುತ್ತಿಲ್ಲ, ಸೋಲಬೇಕೆಂಬ ನಿರೀಕ್ಷೆ ಇಲ್ಲ, ಮತದಾರರೇ ಕಿಂಗ್ ಮೇಕರ್ ಗಳು'

ನಾನು ಗೆಲ್ಲುವ ಕನಸು ಕಾಣುತ್ತಿಲ್ಲ, ಅಥವಾ ಸೋಲನ್ನು ನಿರೀಕ್ಷಿಸುತ್ತಿಲ್ಲ, ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು, ಒಂದು ವೇಳೆ ಸೋತರೆ ಪಕ್ಷವನ್ನು ...
ಅನುಪಮಾ ಶೆಣೈ
ಅನುಪಮಾ ಶೆಣೈ
Updated on
ಬೆಂಗಳೂರು: ನನ್ನ ಇಲಾಖೆಯನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಆದರೆ ರಾಜಿನಾಮೆ ನೀಡಿದ್ದಕ್ಕೆ ನನಗೆ ಬೇಸರವಿಲ್ಲ, ಭ್ರಷ್ಟಾಚಾರ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಡಬೇಕು ಅದಕ್ಕಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಅನುಪಮಾ ಶೆಣೈ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.2013ರ ವಿಧಾನಸಭೆ ಚುನಾವಣೆ ವೇಳೆ  ಪ್ರೊಬೆಷನರಿ ಅಧಿಕಾರಿಯಾಗಿದ್ದ ಅನುಪಮಾ ಅವರನ್ನು ಟಿ, ನರಸಿಪುರಕ್ಕೆ ಎಲೆಕ್ಷನ್ ಡ್ಯೂಟಿಗೆ ಹಾಕಲಾಗಿತ್ತು, ಅಂದು ನಾನು ಕರ್ತವ್ಯದಲ್ಲಿದ್ದೆ, ಇಂದು ನಾನೇ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ, ನನಗೆ ಮಿಶ್ರ ಅನುಭವವಾಗುತ್ತಿದೆ, ನಾನು  ರಾಜಕೀಯಕ್ಕೆ ಸೇರಲು ರಾಜಿನಾಮೆ ನೀಡಬೇಕಿತ್ತು ಅಥವಾ ವಿಆರ್ ಎಸ್ ತೆಗೆದುಕೊಳ್ಳಬೇಕಿತ್ತು, ಆಧರೆ ಆ ಸಮಯ ಇಷ್ಟು ಬೇಗ ಬರುತ್ತದೆ ಎಂದು ನಾನು ಎಣಿಸಿರಲಿಲ್ಲ ಎಂದು ಹೇಳಿದ್ದಾರೆ.
2016 ರಲ್ಲಿ ಕೂಡ್ಲಿಗಿಯಿಂದ ಬಳ್ಳಾರಿಗೆ ವರ್ಗಾವಣೆ ಮಾಡಿದ ನಂತರ ಶೆಣೈ ಬೆಳಕಿಗೆ ಬಂದರು, ಜಿಲ್ಲಾ ಉಸ್ತುವಾರಿ  ಸಚಿವ ಪರಮೇಶ್ವರ್ ನಾಯಕ್ ಅವರ ದೂರವಾಣಿ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ ವರ್ಗಾವಣೆಯಾಯಿತು ಎಂದ ಅನುಪಮಾ ಆರೋಪಿಸಿದ್ದರು,  ಸಾರ್ವಜನಿಕರ ಪ್ರತಿಭಟನೆಯ ನಂತರ ಅನುಪಮಾ ಅವರ ವರ್ಗಾವಣೆಯನ್ನು ರದ್ದುಗೊಳಿಸಲಾಯಿತು, ಆದರೆ ನಂತರ ಅವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದರು. 
ನವೆಂಬರ್ 2017 ರಲ್ಲಿ ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷವನ್ನು ಘೋಷಿಸಿದರು, ತಮ್ಮ ಪಕ್ಷದಿಂದ 30 ಮಂದಿ ಅಭ್ಯರ್ಥಿಗಳು ಕಣಕ್ಕಿಳಿಯುವುದಾಗಿ ತಿಳಿಸಿದರು. ಉಡುಪಿಯ ಕಾಪು ಕ್ಷೇತ್ರದಿಂದ ಸ್ಪರ್ಥಿಸುತ್ತಿರುವುದಾಗಿ ಹೇಳಿರುವ ಅವರು, ಪಕ್ಷದ ಕೆಲವು ಕಾರ್ಯಕರ್ತರ ಜೊತೆ ಪ್ರಚಾರ ಆರಂಭಿಸುವುದಾಗಿ ತಿಳಿಸಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಸಾಂಪ್ರದಾಯಿಕ ವಿಧಾನದಲ್ಲಿ ನನಗೆ ಹೆಚ್ಚು ನಂಬಿಕೆಯಿದೆ ಎಂದು ಹೇಳಿದ್ದಾರೆ.
ನನ್ನ ರಾಜಕೀಯ ಜೀವನ ಪ್ರವೇಶಕ್ಕೆ ನನ್ನ ಕುಟುಂಬ ನನ್ನ ಬೆನ್ನೆಲುಬಾಗಿ ನಿಂತಿದೆ. ನನ್ನ ಸಹೋದರ ನನ್ನ ಜೊತೆಗಿದ್ದಾನೆ, ನನ್ನಜೊತೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾನೆ, ಅವರೆಲ್ಲರ ಬೆಂಬಲದಿಂದ ನಾನು ಮತ್ತಷ್ಟು ಸ್ಟ್ರಾಂಗ್ ಅಗಿದ್ದೇನೆ ಎಂದು ಹೇಳಿದ್ದಾರೆ.
ಮತದಾರರೇ ಕಿಂಗ್ ಮೇಕರ್ ಆಗಬೇಕು ಎಂಬುದು ನನ್ನ ಭಾವನೆ, ನೀವು ಗೆಲ್ಲುವ ಸಾಧ್ಯತೆಯಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು 50:50 ಗೆಲ್ಲುವ ಸಾಧ್ಯತೆ ಎಂದು ಹೇಳಿದ್ದಾರೆ. ನಾನು ಗೆಲ್ಲುವ ಕನಸು ಕಾಣುತ್ತಿಲ್ಲ, ಅಥವಾ ಸೋಲನ್ನು ನಿರೀಕ್ಷಿಸುತ್ತಿಲ್ಲ, ಪ್ರಜಾಪ್ರಭುತ್ವದಲ್ಲಿ ಏನು ಬೇಕಾದರೂ ಆಗಬಹುದು, ಒಂದು ವೇಳೆ ಸೋತರೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುತ್ತೇನೆ, ಮುಂದಿನ ಲೋಕಸಭೆ ಚುನಾವಣೆಗಾಗಿ ಸಿದ್ಧತೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.ಇನ್ನೂ ಬಿಹಾರದಲ್ಲೂ ಕೂಡ ತಮಗೆ ಅಹ್ವಾನ ಬಂದಿದೆ ಎಂಗು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com