ಕಾವೇರಿ ನೀರು ಹಂಚಿಕೆಗೆ ಕರಡು ಯೋಜನೆ ರಾಜ್ಯ ಬಿಜೆಪಿಗೆ ಹಿನ್ನಡೆಯೇ?

ಕೇಂದ್ರ ಸರ್ಕಾರ ಮೇ 3ರಂದು ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ತಯಾರಿಸುವ ಕರಡು ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೇಂದ್ರ ಸರ್ಕಾರ ಮೇ 3ರಂದು ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ತಯಾರಿಸುವ ಕರಡು ಯೋಜನೆ ಕರ್ನಾಟಕದಲ್ಲಿ ಚುನಾವಣೆಯ ಹೊಸ್ತಿಲಿನಲ್ಲಿರುವ ಸಂದರ್ಭದಲ್ಲಿ ಬಿಜೆಪಿಗೆ ದುಸ್ವಃಪ್ನದಂತೆ ಕಾಡಲಿದೆಯೇ? ಕಾವೇರಿ ಜಲ ಹಂಚಿಕೆ ಕುರಿತು ಕರಡು ಯೋಜನೆ ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಬಿಜೆಪಿಗೆ ಛೀಮಾರಿ ಹಾಕಿರುವುದು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮೇ 3ರಂದು ಕಾವೇರಿ ನೀರು ಹಂಚಿಕೆ ಬಗ್ಗೆ ಕರಡು ಯೋಜನೆ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ. ಇದು ಆಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇರುವುದು ಕೇವಲ 9 ದಿನಗಳು. ಕಾವೇರಿ ನಿರ್ವಹಣಾ ಸಮಿತಿ ರಚನೆ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ತನ್ನ ಸ್ಪಷ್ಟ ನಿಲುವು ಹೇಳಿದ್ದು ಕರಡು ಯೋಜನೆ ಸಿದ್ದಪಡಿಸುವಿಕೆ ರಾಜ್ಯ ಬಿಜೆಪಿಯಲ್ಲಿ ಅನಿಶ್ಚಿತತೆ ತಂದೊಡ್ಡುವ ಸಾಧ್ಯತೆಯಿದೆ.

ಕರಡು ಯೋಜನೆ ಮತದಾರರ ಮೇಲೆ ಪರಿಣಾಮ ಬೀರಬಹುದು ಎಂದು ನನಗನಿಸುತ್ತಿಲ್ಲ. ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಗೆ ಒಂದು ಸೀಟು ಕೂಡ ಹೆಚ್ಚಿಗೆ ಸಿಗುವುದಿಲ್ಲ. ಇದು ರಾಜ್ಯದ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವೇ ಹೊರತು ರಾಜಕೀಯವಲ್ಲ ಎನ್ನುತ್ತಾರೆ ಕಾಂಗ್ರೆಸ್ ನಾಯಕ ಮತ್ತು ಕಾವೇರಿ ವಿಷಯದಲ್ಲಿ ಕರ್ನಾಟಕದ ವಕೀಲ ಬ್ರಿಜೇಶ್ ಕಾಳಪ್ಪ.

ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಬೇಕಾಗಿದ್ದರಿಂದ ಮತದಾರರ ಮೇಲೆ ಕರಡು ಯೋಜನೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ ಎಂದು ಕಾಂಗ್ರೆಸ್ ಕೂಡ ಭಾವಿಸಿದೆ. ಕರ್ನಾಟಕಕ್ಕೆ 14.5 ಟಿಎಂಸಿ ನೀರು ಹೆಚ್ಚು ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ ನ ಆದೇಶವಿರುವಾಗ ಅದುವೇ ಜನಸಾಮಾನ್ಯರಲ್ಲಿ ಉತ್ತಮ ಅಭಿಪ್ರಾಯವನ್ನುಂಟುಮಾಡಿದೆ ಎನ್ನುತ್ತಾರೆ ಬ್ರಿಜೇಶ್ ಕಾಳಪ್ಪ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಗೊಂದಲ ಸೃಷ್ಟಿಸಿರುವುದು ಸಿದ್ದರಾಮಯ್ಯ ಸರ್ಕಾರ. ಸುಪ್ರೀಂ ಕೋರ್ಟ್ ನ ಆದೇಶದಲ್ಲಿ ನಿರ್ವಹಣಾ ಮಂಡಳಿ ರಚನೆ ಕುರಿತು ಹೇಳಿಲ್ಲ. ಬದಲಾಗಿ ಬರಗಾಲ ಸಂದರ್ಭದಲ್ಲಿ ಎರಡೂ ರಾಜ್ಯಗಳ ಮಧ್ಯೆ ನೀರು ಹಂಚಿಕೆ ಕುರಿತು ಯೋಜನೆಯನ್ನು ನೋಡಿಕೊಳ್ಳಬೇಕೆಂದು ಮಾತ್ರ ಒತ್ತಾಯಿಸಿದೆ. ಸಿದ್ದರಾಮಯ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳದೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಮ್ಮ ವಿರೋಧವಿದೆ ಎಂದು ಹೇಳಿದೆ. ಇದು ಅನಗತ್ಯವಾಗಿ ಸೃಷ್ಟಿಸಿರುವ ಗೊಂದಲ ಎಂದು ಹೇಳಿದ್ದಾರೆ.

ಅಂತೂ ಕೊನೆಗೆ ಕೇಂದ್ರ ಸರ್ಕಾರ ರಚಿಸುವ ಕರಡು ಯೋಜನೆಯಲ್ಲಿ ಏನಿರುತ್ತದೆ, ಅದು ರಾಜ್ಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ನಾವು ನೋಡಬೇಕಿದೆ ಎನ್ನುತ್ತಾರೆ ಬಿಜೆಪಿ ಶಾಸಕ ಸುರೇಶ್ ಕುಮಾರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com