ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ ಮೊಮ್ಮಗಳಿಗೆ ಕಾಂಗ್ರೆಸ್ ಟಿಕೆಟ್?

ಅವಿಭಜಿತ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ ರೆಡ್ಡಿ ಅವರ ಮೊಮ್ಮಗಳು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು ...
ವಸಂತ ಕವಿತಾ ಶ್ರೀಕರ್ ಕೆ.ಸಿ ರೆಡ್ಡಿ,
ವಸಂತ ಕವಿತಾ ಶ್ರೀಕರ್ ಕೆ.ಸಿ ರೆಡ್ಡಿ,
Updated on
ನವದೆಹಲಿ: ಅವಿಭಜಿತ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದ ಕೆ.ಸಿ ರೆಡ್ಡಿ ಅವರ ಮೊಮ್ಮಗಳು ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು ರಾಷ್ಚ್ರ ರಾಜಧಾನಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿರುವ ವಸಂತ ಕವಿತಾ ಶ್ರೀಕರ್ ಕೆ.ಸಿ ರೆಡ್ಡಿ, ಕಾಂಗ್ರೆಸ್ ಪಕ್ಷದ ವಾರ್ ರೂಮ್  ಬಳಿ ಬೀಡುಬಿಟ್ಟಿದ್ದಾರೆ. 
ಕೆ.ಸಿ ರೆಡ್ಡಿ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದು, ಭಾರತದ ಸಂವಿಧಾನ ಸಭೆಯ ಸದಸ್ಯರು ಆಗಿದ್ದರು. ವಸಂತ ಪತಿ ಉದ್ಯಮಿಯಾಗಿದ್ದು,  ಕೆ.ಸಿ ರೆಡ್ಡಿ ನಂತರ ರಾಜಕೀಯಕ್ಕೆ ಬರುತ್ತಿರುವ ಮೊದಲಿಗರಾಗಿದ್ದಾರೆ.
ತಮ್ಮ ಕುಟುಂಬದ ಯಾವುದೇ ಸದಸ್ಯರು ರಾಜಕೀಯಕ್ಕೆ ಬರುವುದಕ್ಕೆ ಬಿಟ್ಟಿರಲಿಲ್ಲ, ಅವರ ವಂಶವಾಹಿಯನ್ನು ಮುಂದುವರಿಸಿಕೊಂಡು ಹೋಗಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ, ಏಪ್ರಿಲ್ 13 ರಂದು ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ ಆಗಲಿದೆ.
ಬೆಂಗಳೂರಿನಲ್ಲಿ ಉಪನ್ಯಾಸಕಿಯಾಗಿದ್ದ ವಸಂತ 4 ವರ್ಷಗಳ ಹಿಂದೆ ತಮ್ಮ ಕೆಲಸಕ್ಕೆ ರಾಜನಾಮೆ ನೀಡಿ, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ, ವಿಜಯಾಪುರ ಜಿಲ್ಲೆಯಿಂದ 27 ಕಿಮೀ ದೂರದಲ್ಲಿರುವ ದೇವರ ಹಿಪ್ಪರಗಿ ಕ್ಷೇತ್ರದ 
ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ರೆಡ್ಡಿ ಅವರ ಬಗ್ಗೆ ಕೇವಲ ಕೆಲವು ಮಂದಿ ಮಾತ್ರ ತಿಳಿದಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಸಿ ರೆಡ್ಡಿ ಅವರಿಗೆ ಸರ್ಕಾರ ಏನನ್ನೂ ಮಾಡಿಲ್ಲ, ಮರೆತು ಹೋದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಬಯಸಿರುವುದಾಗಿ ತಿಳಿಸಿದ್ದಾರೆ.
ರೆಡ್ಡಿ ಅವರು ಮೊದಲ ಮುಖ್ಯಮಂತ್ರಿ ಮಾತ್ರವಲ್ಲದೇ ಮಧ್ಯಪ್ರದೇಶ ರಾಜ್ಯಪಾಲರಾಗಿದ್ದರು. ಹಾಗೂ ವಿಧಾನಸೌಧದ ಸಂಸ್ಥಾಪಕಕರು ಕೂಡ. ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಅವರಿಗೆ ವಿಧಾನಸೌಧದ ನೀಲಿನಕ್ಷೆ  ಸಿದ್ಧಗೊಳಿಸಿ ಕಳುಹಿಸಿದ್ದರು.
1951 ಜುಲೈ 13 ರಂದು ವಿಧಾನಸೌಧಕ್ಕೆ ಶಂಕು ಸ್ಥಾಪನೆ ಮಾಡಲಾಯಿತು. ಅದರಲ್ಲಿ ರೆಡ್ಡಿ ತಮ್ಮ ಹೆಸರು ಹಾಕಿಸಿಲ್ಲ, ಇದು ಅವರ ವಿನಮ್ರತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ, 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com