ಶುಕ್ರವಾರ ದೇವೇಗೌಡ, ಕೆಸಿಆರ್ ಭೇಟಿ ನಿಗದಿ, ತೃತೀಯ ರಂಗ ರಚನೆ ಕುರಿತು ಚರ್ಚೆ ಸಾಧ್ಯತೆ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬೆಂಗಳೂರಿನಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಮತ್ತು ಜಾತ್ಯಾತೀತ ಜನತಾ ದಳ-(ಜೆಡಿಎಸ್) ಮುಖ್ಯಸ್ಥ ಎಚ್ ಡಿ ದೇವೇಗೌಡರನ್ನು ಭೇಟಿಯಾಗಲಿದ್ದಾರೆ
ಚಂದ್ರಶೇಖರ್ ರಾವ್
ಚಂದ್ರಶೇಖರ್ ರಾವ್
ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬೆಂಗಳೂರಿನಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಮತ್ತು ಜಾತ್ಯಾತೀತ ಜನತಾ ದಳ-(ಜೆಡಿಎಸ್) ಮುಖ್ಯಸ್ಥ ಎಚ್ ಡಿ ದೇವೇಗೌಡರನ್ನು ಭೇಟಿಯಾಗಲಿದ್ದಾರೆ.
 ವಾರದ ಹಿಂದೆ ರಾವ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಸ್ಪರ್ಧೆಯೊಡ್ಡಲು ತೃತೀಯ ರಂಗ ರಚಿಸುವ ಕುರಿತಂತೆ ಚರ್ಚಿಸಿದ್ದರು.
"ತೃತೀಯ ರಂಗ ರಚನೆ ಕುರಿತಂತೆ ಚರ್ಚಿಸುವುದು ಶುಕ್ರವಾರದ ಸಭೆಯ ಮೂಲ ಉದ್ದೇಶವಾಗಿದೆ.ಮ್ಮ ನಾಯಕ (ಕೆ.ಸಿ.ಆರ್) 2019 ರಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಯಾಗಿ ತೃತೀಯ ಶಕ್ತಿಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಚ್ ಡಿ ದೇವೇಗೌಡ ಈ ರಂಗಕ್ಕೆ ಬೆಂಬಲ ನೀಡಬಲ್ಲ ಶ್ರೇಷ್ಠ ನಾಯಕರಾಗಿದ್ದಾರೆ." ತೆಲಂಗಾಣ ರಾಷ್ಟ್ರ ಸಮಿತಿಯ ಅಧಿಕೃತ ಹೇಳಿಕೆ ತಿಳಿಸಿದೆ.
ಶುಕ್ರವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರು ಪದ್ಮನಾಭನಗರದ ದೇವೇಗೌಡ ನಿವಾಸದಲ್ಲಿ ಚಂದ್ರಶೇಖರ ರಾವ್ ಹಾಗೂ ದೇವೇಗೌಡ ಭೇಟಿಯಾಗಲಿದ್ದಾರೆ.
"ದೇವೇಗೌಡರು ಈ ಮುನ್ನ ತೃತೀಯ ರಂಗದ ವಿಚಾರ ಮಾತನಾಡುವಾಗ ಕೆ.ಸಿ.ಆರ್ ಅವರಿಂದ ಈ ಪ್ರಸ್ತಾವನೆಯ ನಿರೀಕ್ಷೆ ಮಾಡಿದ್ದರು. ಅದರಂತೆ ಈಗ ಭೇಟಿ ನಿಗದಿಯಾಗಿದೆ"ದೇವೇಗೌಡ ಅವರ ಕಚೇರಿ ಮೂಲಗಳು ತಿಳಿಸಿದೆ.
1996ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾದ ಪ್ರಾದೇಶಿಕ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಫ್ರಂಟ್ ಬೆಂಬಲದಿಂದ ಪ್ರಧಾನಿಗಳಾಗಿದ್ದ ದೇವೇಗೌಡ ತೃತೀಯ ರಂಗದಲ್ಲಿ ಪ್ರಮುಖರಾಗಿ ಗುರುತಿಸಲ್ಪಡುವವರು. ಇದೇ ರೀತಿ ತೆಲಂಗಾಣ ಮುಖ್ಯಮಂತ್ರಿ ರಾವ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ತೃತೀಯ ರಂಗದ ರಚನೆಗೆ ಆಸಕ್ತಿ ತಾಳಿದ್ದಾರೆ.
ತೃತೀಯ ರಂಗಕ್ಕೆ ಜೆಡಿಎಸ್ ಬೆಂಬಲ ಪಕ್ಷಕ್ಕೆ ಯಾವ ರೀತಿಯಲ್ಲಿ ಅನುಕೂಲ ಕಲ್ಪಿಸಲಿದೆ ಎನ್ನುವುದನ್ನು ನೋಡಬೇಕಿದೆ.ಕರ್ನಾಟಕದ ವಿಧಾನಸಭೆ ಚುನಾವಣೆಗ ಬಳಿಕ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಜೆಡಿಎಸ್ ಬೆಂಬಲ ಅಗತ್ಯವಾಗಲಿದೆ. ಬಿಜೆಪಿ ಅಥವಾ ಕಾಂಗ್ರೆಸ್ ಗೆ ಪಕ್ಷವು ಬೆಂಬಲ ನೀಡುವುದೆ? ಕಾದು ನೋಡಬೇಕು.
ದೇವೇಗೌಡರ ಜತೆಗಿನ ರಾವ್ ಭೇಟಿಯು ಮುಂದಿನ ಲೋಕಸಭೆ ಚುನಾವಣೆ ಮೇಲೆಯೂ ಪರಿಣಾಮ ಬೀರುವುದು ಮಾತ್ರ ನಿಶ್ಚಿತವಾಗಿದ್ದು ದೇವೇಗೌಡ ಯಾವ ಬಗೆಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವುದು ಪಕ್ಷದ ಒಳಗೆ ಸಾಕಷ್ಟು ಕುತೂಹಲ ಉಂಟುಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com