'ಚಾಮುಂಡೇಶ್ವರಿ'ಯಲ್ಲಿ ಒಗ್ಗಟ್ಟಾದ ವಿರೋಧ ಪಕ್ಷಗಳು: ಕಾಂಗ್ರೆಸ್ ನಲ್ಲಿ ಮನೆಮಾಡಿದ ಆತಂಕ

ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಜಿ,ಟಿ ದೇವೇಗೌಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ, ಜೊತೆಗೆ ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರ ಸ್ವಾಮಿ ಅವರು ಜಿ.ಟಿ ದೇವೇಗೌಡ ..
ಸಿದ್ದರಾಮಯ್ಯ ಮತ್ತು ಜಿ.ಟಿ ದೇವೇಗೌಡ
ಸಿದ್ದರಾಮಯ್ಯ ಮತ್ತು ಜಿ.ಟಿ ದೇವೇಗೌಡ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿರುವುದು ಕಾಂಗ್ರೆಸ್ ಗೆ ಆತಂಕ ಉಂಟು ಮಾಡಿದೆ.
ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಜಿ,ಟಿ ದೇವೇಗೌಡ  ಪ್ರಬಲ ಅಭ್ಯರ್ಥಿಯಾಗಿದ್ದಾರೆ, ಜೊತೆಗೆ ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರ ಸ್ವಾಮಿ ಅವರು ಜಿ.ಟಿ ದೇವೇಗೌಡ ಬೆನ್ನಿಗೆ ನಿಂತಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ಬಿಜೆಪಿ ತೆರೆಮರೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದರೇ , ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಅವರನ್ನು ಹಿಮ್ಮೆಟ್ಟಿಸಲು ವಿರೋಧ ಪಕ್ಷಗಳು ರಣ ತಂತ್ರ ಹೂಡಿವೆ. 
ಸಿದ್ದರಾಮಯ್ಯ ಅವರ ಈ ನಿಲುವು ಹಳೇ ಮೈಸೂರು ಭಾಗದ ಮತದಾರರಿಗೆ ತಪ್ಪು ಸಂದೇಶ ಸಾರುವ ಸಾದ್ಯತೆಗಳಿವೆ. ಜೊತೆಗೆ ಪಕ್ಷದ ಪ್ರಾಬಲ್ಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಂಭವವಿದೆ. 
ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗುರುವಾರ ಪಕ್ಷದ ಹೈಕಮಾಂಡ್ ಭೇಟಿ ಮಾಡಿ, ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಿಕೊಂಡು ದೆಹಲಿಯಿಂದ ತೆರಳಿದ್ದಾರೆ, ಈ ವಾರದ ಅಂತ್ಯದೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ.ಟಿಕೆಟ್ ಆಕಾಂಕ್ಷಿಗಳು ಅಂತಿಮ ಕ್ಷಣದಲ್ಲಿ ಲಾಬಿ ಮಾಡಲು ಸಿಎಂ ಸಿದ್ದರಾಮಯ್ಯ ಅವರ ಮನೆ ಮುಂದೆ ಕಾದು ಕುಳಿತಿದ್ದಾರೆ.
ಲೋಕೋಪಯೋಗಿ ಸಚಿವ ಎಚ್,ಸಿ ಮಹಾದೇವಪ್ಪ ತಮ್ಮ ಪುತ್ರನಿಗಾಗಿ ಟಿಕೆಟ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ಅಹಮದ್ ಅಖಂಡ ಶ್ರೀನಿವಾಸ್ ಮೂರ್ತಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಟಿಕೆಟ್ ಆಕಾಂಕ್ಷಿಗಳು ಸಿಎಂ ನಿವಾಸದೆದರು ಬೀಡು ಬಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com