ಮತದಾರರ ಓಲೈಕೆಗೆ ಪಕ್ಷಗಳ ಆನ್ ಲೈನ್ ಶಾಪಿಂಗ್, ಕ್ಯಾಶ್ ಬ್ಯಾಕ್ ಆಫರ್

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ  ರಾಜಕೀಯ ನಾಯಕರಿಗೆ ಇದು ಅತ್ಯಂತ ಕಷ್ಟದ ದಿನಗಳೆಂದೇ ಹೇಳಬಹುದು. ಚುನಾವಣಾ ಆಯೋಗ ಖರ್ಚುವೆಚ್ಚಗಳ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಮತದಾನಕ್ಕೆ ಮೊದಲು ತಂತ್ರಜ್ಞಾನವನ್ನು ಬಳಸಿಕೊಂಡು ಆನ್ ಲೈನ್ ಖರೀದಿ ಮಾಡುವವರಿಗೆ ಆಫರ್ ಗಳ ಸುರಿಮಳೆಯನ್ನು ಹರಿಸಿ ಮತದಾರರನ್ನು ಓಲೈಸಲು ಮುಂದಾಗಿವೆ.

ಹಲವು ಶಾಸಕರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಕಾರ್ಯಕರ್ತರು ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಪರೋಕ್ಷವಾಗಿ ಮತದಾರರಿಗೆ ಲಂಚ ನೀಡುವ ಮೂಲಕ ಓಲೈಕೆಗೆ ಮುಂದಾಗಿದ್ದಾರೆ. ಅಭ್ಯರ್ಥಿಗೆ ಕನಿಷ್ಠ 15 ಮತಗಳನ್ನು ಸಂಗ್ರಹಿಸಬಹುದೆಂದು ಭರವಸೆ ನೀಡುವ ಮತದಾರರಿಗೆ ರಾಡಕೀಯ ಪಕ್ಷಗಳು ಆನ್ ಲೈನ್ ಶಾಪಿಂಗ್ ಅವಕಾಶಗಳನ್ನು ನೀಡಿದೆ. ಹಲವು ಇ-ಕಾಮರ್ಸ್ ವೆಬ್ ಸೈಟ್ ಗಳ ಮೂಲಕ ಆನ್ ಲೈನ್ ಶಾಪಿಂಗ್ ಮಾಡಿದರೆ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತದೆ. ಹತ್ತಿರದ ಪಕ್ಷದ ಕಚೇರಿಯಿಂದ ಕ್ಯಾಶ್ ಬ್ಯಾಕ್ ನ್ನು ಸಂಗ್ರಹಿಸಬೇಕು. ಕೆಲವು ಪ್ರಕರಣಗಳಲ್ಲಿ ಪಕ್ಷದ ಕಾರ್ಯಕರ್ತರು ಗ್ಯಾಜೆಟ್ ಗಳು ಮತ್ತು ಇತರ ಇ-ಕಾಮರ್ಸ್ ಸಾಧನಗಳನ್ನು ಬಳಸಿ ಮತದಾರರ ಮನೆಗಳಿಗೆ ವಸ್ತುಗಳನ್ನು ಪೂರೈಸುತ್ತದೆ.

ಅನೇಕ ರಾಜಕೀಯ ಪಕ್ಷಗಳು ಸ್ಥಳೀಯ ಪೂರೈಕೆದಾರರ ಜೊತೆ ಕೈಜೋಡಿಸಿದ್ದು ಮತದಾರರು ಉತ್ಪನ್ನಗಳ ಮೇಲೆ ಶೇಕಡಾ 70ರಷ್ಟು ಮರುಪಾವತಿ ಮಾಡುತ್ತದೆ ಎನ್ನುತ್ತಾರೆ ಕಳೆದ ಕೆಲ ವರ್ಷಗಳಿಂದ ಹಲವು ವಿಧಾನಸಭೆ ಮತ್ತು ಸಂಸತ್ ಚುನಾವಣೆಯಲ್ಲಿ ಕೆಲಸ ಮಾಡುತ್ತಿರುವ ಅಭಿಯಾನ ವ್ಯವಸ್ಥಾಪಕರು.

ಪಕ್ಷದ ಕಾರ್ಯಕರ್ತರು ಮತದಾರರನ್ನು ಓಲೈಸಲು ಆನ್ ಲೈನ್ ಶಾಪಿಂಗ್ ಮಾಡುವುದು ಹೊಸ ಟ್ರೆಂಡ್ ಆಗಿದೆ. ವ್ಯಾಪಕ ಪ್ರಚಾರವಿರದ ಕ್ಷೇತ್ರಗಳಲ್ಲಿ ಆನ್ ಲೈನ್ ಶಾಪಿಂಗ್ ಜಾಸ್ತಿಯಾಗಿದೆ. ಪಕ್ಷಕ್ಕೆ ಕನಿಷ್ಠ 15 ಮತಗಳನ್ನು ಕೊಡಿಸುವುದಾಗಿ ಭರವಸೆ ನೀಡಿದವರಿಗೆ ಈ ಸೌಲಭ್ಯ ಸಿಗುತ್ತದೆ.

ಮತದಾರರು ಆನ್ ಲೈನ್ ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು. ನಂತರ ಬಿಲ್ ನ್ನು ಪಕ್ಷದ ಕಚೇರಿಗೆ ತೆಗೆದುಕೊಂಡು ಹೋಗಿ ಶೇಕಡಾ 60ರಿಂದ 70ರಷ್ಟು ಮರುಪಾವತಿ ಪಡೆಯಬಹುದು. ಇನ್ನು ಕೆಲವು ಪಕ್ಷಗಳು ಕ್ಷೇತ್ರಗಳ ಮತದಾರರಿಗೆ ಏನೇನು ವಸ್ತುಗಳು ಬೇಕೆಂಬುದನ್ನು ಪಟ್ಟಿ ಮಾಡುತ್ತಿವೆ ಎನ್ನುತ್ತಾರೆ ವ್ಯವಸ್ಥಾಪಕರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com