ಕರಾವಳಿ ಭಾಗದಲ್ಲಿ ವಲಸಿಗ ರಾಜಕಾರಣಿಗಳಿಗೆ 'ಭವಿಷ್ಯ'ವೇ ಇಲ್ಲ

ರಾಜಕೀಯ ವಲಸೆ ರಾಜ್ಯದಲ್ಲಿ ಸರ್ವೇಸಾಮಾನ್ಯವಾಗಿದೆ, ಪ್ರಸಿದ್ಧ ರಾಜಕಾರಣಿಗಳು ಕೂಡ ಕೆಲವೊಮ್ಮೆ ಸೋಲಿನ ಭಯದಿಂದಾಗಿ ತಮ್ಮ ರಾಜಕೀಯ...
ವೀರಪ್ಪ ಮೊಯ್ಲಿ, ಡಿ,ವಿಸದಾನಂದಗೌಡ, ಶೋಭ ಕರಂದ್ಲಾಜೆ
ವೀರಪ್ಪ ಮೊಯ್ಲಿ, ಡಿ,ವಿಸದಾನಂದಗೌಡ, ಶೋಭ ಕರಂದ್ಲಾಜೆ
ಮಂಗಳೂರು: ರಾಜಕೀಯ ವಲಸೆ ರಾಜ್ಯದಲ್ಲಿ ಸರ್ವೇಸಾಮಾನ್ಯವಾಗಿದೆ, ಪ್ರಸಿದ್ಧ ರಾಜಕಾರಣಿಗಳು ಕೂಡ ಕೆಲವೊಮ್ಮೆ ಸೋಲಿನ ಭಯದಿಂದಾಗಿ ತಮ್ಮ ರಾಜಕೀಯ ಪುನರ್ ಜನ್ಮಕ್ಕೆ ಸುರಕ್ಷಿತ ಕ್ಷೇತ್ರಗಳ ಮೊರೆ ಹೋಗುತ್ತಾರೆ. ಆ ಕ್ಷೇತ್ರ ಅವರಿಗೆ ಪರಿಚಿತ ವಿಲ್ಲದಿದ್ದರೂ ಅಲ್ಲಿ ಚುನಾವಣೆಗೆ ನಿಂತು ಗೆಲ್ಲುತ್ತಾರೆ.
ಆದರೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಜನ ವಲಸಿಗ ರಾಜಕಾರಣಿಗಳಿಗೆ ಮಣೆ ಹಾಕುವುದಿಲ್ಲ, ಕರಾವಳಿಯಲ್ಲಿ  ವಲಸಿಗ ರಾಜಕಾರಣಿಗಳು ಯಶಸ್ಸು ಕಾಣುವುದಿರಲಿ, ಅಲ್ಲಿನ ರಾಜಕೀಯ ನೀರನ್ನು ಪರೀಕ್ಷಿಸಲು ಕೂಡ ಹೋಗುವ ಧೈರ್ಯ ಮಾಡುವುದಿಲ್ಲ.
ಈ ಹಿಂದೆ ಹಲವು ರಾಜಕಾರಣಿಗಳು ಕರಾವಳಿ ಮಣ್ಣಿನಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು, ಆದರೆ ಅವರನ್ನು  ಸ್ವೀಕರಿಸದ ಜನ ಏಕಾ ಏಕಿ ಹೊರ ಹಾಕಿದರು. ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಇಂತವರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ, ಶಾಂತಿನಗರ ಕ್ಷೇತ್ರದಿಂದ ಆಯ್ಕೆ ಯಾಗುವ ಮುನ್ನ, ಮಂಗಳೂರು ಉತ್ತರ ಅಥವಾ ಮಂಗಳೂರು ಕ್ಷೇತ್ರದಿಂದ ಸ್ಪರ್ದಿಸಲು ಬಯಸಿದ್ದರು, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮರು ಇರುವ ಕಾರಣಕ್ಕಾಗಿ ಹಲವು ರಾಜಕೀಯ ರ್ಯಾಲಿಗಳನ್ನು ಹಮ್ಮಿಕೊಂಡಿದ್ದರು. ಆದರೆ ಅವರನ್ನು ಅನ್ಯಗ್ರಹದ ಜೀವಿಯಂತೆ ಕಂಡ ಅಲ್ಲಿನ ಜನ ಆದಷ್ಟು ಬೇಗನೆ ಹೊರ ಹಾಕಿದರು. 
ವಲಸಿಗ ರಾಜಕಾರಣಿಗಳಿಗೆ ಕರಾವಳಿ ಜಿಲ್ಲೆಗಳು ಸೂಕ್ತವಲ್ಲ, ಏಕೆಂದರೆ ಇಲ್ಲಿನ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಭಾಷೆ ಭಿನ್ನವಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ. 
ಒಂದು ಅಥವಾ ಹೆಚ್ಚಿನ ರಾಜಕೀಯ ಪಕ್ಷಗಳು ಇಲ್ಲಿ ಸದಾ ಸಕ್ರಿಯರಾಗಿರುತ್ತಾರೆ, ಇಲ್ಲಿ ರಾಜಕೀಯ ನಾಯಕತ್ವದ ಕೊರತೆಯೂ ಇಲ್ಲ, ರಾಜ್ಯದ ಬೇರೆ ಕ್ಷೇತ್ರಗಳಿಗೆ ಹೋಲಿಸಿದರೇ ಇಲ್ಲಿ ಚುನಾವಣೆ ಸ್ವಲ್ಪ ಭಿನ್ನ ಎನಿಸುತ್ತದೆ. ಇಲ್ಲಿನ ಜನರನ್ನು ತಲುಪಲು ವಲಸಿಗ ರಾಜಕಾರಣಿಗಳಿಗೆ ಭಾಷೆ ಪ್ರಮುಖ ಸಮಸ್ಯೆಯಾಗಿದೆ,  ಇಲ್ಲಿನ ಸ್ಥಳೀಯರು ಹೆಚ್ಚಾಗಿ ತುಳು, ಬ್ಯಾರಿ ಮಾತನಾಡುತ್ತಾರೆ, ಕನ್ನಡ ಮಾತನಾಡುವ ಜನರೂ ಇದ್ದಾರೆ, ಆದರೆ ಅವರ ಕನ್ನಡ ಭಾಷಾ ಶೈಲಿ ತೀರಾ ಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ.
ಒಂದು ವೇಳೆ ಹ್ಯಾರಿಸ್ ಬ್ಯಾರಿ ಮಾತನಾಡಿದ್ದರೂ ಅಲ್ಲಿನ ಮುಸ್ಲಿಮರು ಅವರನ್ನು ಹೊರಗಿನವರೆಂದೇ ಪರಿಗಣಿಸುತ್ತಿದ್ದರು. ಕರ್ನಾಟಕದ ಇತರ ಭಾಗಗಳಲ್ಲಿರುವ ಮುಸ್ಲಿಮರು ಉರ್ದು ಮಾತನಾಡಿದರ್ ಇಲ್ಲಿರುವ ಮುಸ್ಲಿಮರು ಬ್ಯಾರಿ ಮಾತನಾಡುತ್ತಾರೆ,
ಬೇರೆಡೆ ಬೆಳೆದು ಯಶಸ್ಸು ಕಂಡ ಕರಾವಳಿ ನಾಯಕರು
ಈ ಭಾಗದಿಂದ ಬಂದ ಹಲವು ರಾಜಕಾರಣಿಗಳು ಬೇರೆಡೆ ಯಶಸ್ಸು ಕಂಡು ಹಲವು ರಾಜಕೀಯ ಮೈಲುಗಲ್ಲು ಸ್ಥಾಪಿಸಿದ್ದಾರೆ. ಮಾಜಿ ಸಿಎಂ  ಎಂ ವೀರಪ್ಪ ಮೊಯ್ಲಿ  ಕಾರ್ಕಳದಿಂದ ಆರು ಬಾರಿ ಶಾಸಕರಾಗಿ ಆಯ್ಕಾಯಾಗಿದ್ದರು ನಂತರ 2004 ರ ಲೋಕಸಭೆ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಸೋತ ನಂತರ ಚಿಕ್ಕಬಳ್ಳಾಪುರಕ್ಕೆ ಶಿಫ್ಟ್ ಆಗಿದ್ದಾರೆ,
ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಪುತ್ತೂರು ವಿಧಾನಸಭೆ ಕ್ಷೇತ್ರ ಮತ್ತು ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದು ಬಂದಿದ್ದರು, ನಂತರ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬದಲಾದರು.  ಪುತ್ತೂರು ಮೂಲದ ಶೋಭ ಕರಂದ್ಲಾಜೆ ಮೊದಲು ಯಶವಂತಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು, ನಂತರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದೆಯಾಗಿ ಆರಿಸಿ ಬಂದಿದ್ದಾರೆ, ಮಂಗಳೂರಿನಲ್ಲೇ ಹುಟ್ಟಿ ಬೆಳೆದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಬಿಹಾರ ಮತ್ತು ಮುಂಬಯಿಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com