ರಂಗೇರಿದ ವರುಣಾ: ಸಿದ್ದರಾಮಯ್ಯ ಹಾಗೂ ಬಿಎಸ್ ವೈ ಪುತ್ರರ ವಿರುದ್ದ ಜ್ಯೂನಿಯರ್ ವಿಷ್ಣುವರ್ಧನ್ ಸ್ಪರ್ಧೆ

ಯತೀಂದ್ರ ಹಾಗೂ ವಿಜಯೇಂದ್ರ ವಿರುದ್ಧ ಜ್ಯೂ. ವಿಷ್ಣುವರ್ಧನ್ ಕಣಕ್ಕಿಳಿಯುತ್ತಿದ್ದು ವರುಣಾ ಕ್ಷೇತ್ರ ಮತ್ತಷ್ಟು ಪ್ರಚಾರ ಪಡೆದು ಕೊಂಡಿದೆ...
ಯತೀಂದ್ರ, ಜ್ಯೂ.ವಿಷ್ಣುವರ್ಧನ್, ವಿಜಯೇಂದ್ರ
ಯತೀಂದ್ರ, ಜ್ಯೂ.ವಿಷ್ಣುವರ್ಧನ್, ವಿಜಯೇಂದ್ರ
ಮೈಸೂರು: ಹಾಲಿ ಹಾಗೂ ಮಾಜಿ ಸಿಎಂ ಗಳು ಪುತ್ರರ ಸ್ಪರ್ಧೆಯಿಂದಾಗಿ ಮೈಸೂರಿನ ವರುಣಾ ವಿಧಾನಸಭೆ ಕ್ಷೇತ್ರ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಯತೀಂದ್ರ ಹಾಗೂ ವಿಜಯೇಂದ್ರ ವಿರುದ್ಧ ಜ್ಯೂ. ವಿಷ್ಣುವರ್ಧನ್ ಕಣಕ್ಕಿಳಿಯುತ್ತಿದ್ದು ವರುಣಾ ಕ್ಷೇತ್ರಕ್ಕೆ ಮತ್ತಷ್ಟು ಪ್ರಚಾರ ಪಡೆದು ಕೊಂಡಿದೆ,
ಜ್ಯೂನಿಯರ್ ವಿಷ್ಣುವರ್ದನ್ ಎಂದು ಗುರುತಿಸಿಕೊಂಡಿರುವ ಎನ್ ಆರ್ ರಘು ವರುಣಾ ಕ್ಷೇತ್ರದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ, ನೋಡಲು ದಿವಂಗತ ಡಾ. ವಿಷ್ಣುವರ್ಧನ್ ಅವರ ಹೋಲಿಕೆ ಇರುವ ರಘು ಅವರು 2013 ರಲ್ಲಿ ಕೃಷ್ಣರಾಜ ಕ್ಷೇತ್ರದಿಂದ ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನಿಸಿ ವಿಫಲರಾಗಿದ್ದರು, 
ನಂಜನಗೂಡು ನಿವಾಸಿಯಾದ ರಘು, ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ,  ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಪ್ರವಾಸ ನಡೆಸಿದ್ದೇನೆ,  ಜನರು ನನ್ನನ್ನು ಬೆಂಬಲಿಸುತ್ತಿದ್ದಾರೆ. ನನ್ನ ಜೊತೆ ಮಾತನಾಡಿದ ಹಲವು ಮಂದಿ ನನಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಶೇ. 10 ರಿಂದ 15 ರಷ್ಟು ಮತದಾರರು ಹೊಸ ಮುಖ ಬಯಸಿದ್ದಾರೆ, ಹೀಗಾಗಿ ನಾನು ಗೆಲ್ಲುತ್ತೇನೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ನಂಜನಗೂಡು ಮುನಿಸಿಪಾಲಿಟಿ ಅಧ್ಯಕ್ಷರಾಗಿದ್ದ ರಾಜಾ ಅಯ್ಯಂಗಾರ್ ಎಂಬುವರ ಪುತ್ರನಾಗಿರುವ ರಘು. ತಮ್ಮ ತಂದೆಯ ರಾಜಕೀಯ ಆಸೆಗಳನ್ನು ಪೂರೈಸಲು ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. ಎಸ್ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಲು ನನ್ನ ತಂದೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ. ವ್ಯವಸಾಯ ಹಾಗೂ ಕಿರುತೆರೆಯ ನಂತರ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಬಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com