ಮೊಳಕಾಲ್ಮೂರು ಕ್ಷೇತ್ರ: ದ್ವೇಷದ ಅಲೆ ಶ್ರೀರಾಮುಲುಗೆ ವರ?

ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಹಲವು ಮಂದಿಯ ಕಣ್ಣಲ್ಲಿ ಹೊಸ ಭರವಸೆ ಮೂಡಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ಹಲವು ಮಂದಿಯ ಕಣ್ಣಲ್ಲಿ ಹೊಸ ಭರವಸೆ ಮೂಡಿಸಿದೆ.
ಹಲವು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ತಮ್ಮ ಪಟ್ಟಣ ಹಾಗೂ ಹಳ್ಳಿಗಳನ್ನು ಅಂತಿಮವಾಗಿ ಶ್ರೀರಾಮುಲು ಅಭಿವೃದ್ಧಿಯ ಕಡೆ ಕೊಂಡೊಯ್ಯುತ್ತಾರೆ ಎಂಬುದು ಈ ಭಾಗದ ಜವರ ಆಶಯವಾಗಿದೆ. 
ಮೊಳಕಾಲ್ಮೂರು ಕ್ಷೇತ್ರದಲ್ಲಿ 4 ಹೋಬಳಿ ಹಾಗೂ 171 ಗ್ರಾಮಗಳಿವೆ, ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕೂಡ ಈ ಕ್ಷೇತ್ರದಲ್ಲಿದೆ.. ಆದರೆ ದಶಕಗಳಿಂದಲೂ ನೀರಿನ ಕೊರತೆ ಇದೆ. ತುಂಗಭದ್ರ ಮೇಲ್ದಂಡೆ ನೀರಾವರಿ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ, ಆದರೆ ಶ್ರೀರಾಮುಲು ಇದನ್ನು ಪೂರ್ಣಗೊಳಿಸುತ್ತಾರೆ ಎಂದು ಈ ಭಾಗದ ಜನರು ನಂಬಿದ್ದಾರೆ.
ದೇವಸಮುದ್ರ,ಮೊಳಕಾಲ್ಮೂರು ಹಾಗೂ ಕಸಬಾ ಹೋಬಳಿಗಳ ನಡುವೆ ಭಾವನಾತ್ಮಕ ಭಾಂದವ್ಯವಿದೆ, ನಾಯಕನಹಟ್ಟಿ ಹಾಲಿ ಶಾಸಕ ತಿಪ್ಪೇಸ್ವಾಮಿ ತವರು ಕ್ಷೇತ್ರವಾಗಿದ್ದು ಬಳ್ಳಾರಿ ಸಂಸದನ ವಿರುದ್ಧ ಇಲ್ಲಿನ ಜನ ಪ್ರತಿಭಟನೆ ನಡೆಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರ ಆರ್ಥಿಕವಾಗಿ ಹಿಂದುಳಿದಿದೆ ಎಂಬ ಮಾತನ್ನು ನಿರಾಕರಿಸುವಂತಿಲ್ಲ, ಇಲ್ಲಿನ ಜನರ ಪ್ರಮುಖ ಉದ್ಯೊಗ ನೇಕಾರಿಕೆ, ಮೊಳಕಾಲ್ಮೂರು ರೇಷ್ಮೆ ಸೀರೆ ಹಾಗೂ ಹೊದಿಕೆಗಳು ಹೆಚ್ಚು ಫೇಮಸ್, ಆದರೆ ಯಂತ್ರಗಳ ನೇಯ್ಗೆಯಿಂದಾಗಿ ಇಲ್ಲಿನ ಸಾಂಪ್ರಾದಾಯಿಕ ನೇಕಾರರ ಹೊಟ್ಟೆ ಮೇಲೆ ಬರೆ ಎಳೆಯುವ ಭಯದಲ್ಲಿ ಬದುಕು ಸಾಗಿಸುತ್ತಿದ್ದಾರೆ. 
ಜೊತೆಗೆ ಇಲ್ಲಿನ ಮತ್ತೊಂದು ಸಣ್ಣ ಕೈಗಾರಿಕೆಯೆಂದರೇ ಜೀನ್ಸ್ ಮತ್ತು ಗಾರ್ಮೆಂಟ್ಸ್ ಆಗಿದೆ. ಇವುಗಳನ್ನು ಹೊಲಿಯಲು ಪ್ರತಿ ಮನೆಯಲ್ಲೂ ಸುಮಾರು 2 ರಿಂದ3 ಮಿಷನ್ ಗಳಿವೆ, ಆದರೆ ಇದರಿಂದ ಅವರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಜನ ವಲಸೆ ಹೋಗುತ್ತಿದ್ದಾರೆ.
ಶ್ರೀರಾಮುಲು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿದ್ದಾರೆ. ವಿಶೇಷವಾಗಿ ಹಂಪಿ, ಇದು ಕೂಡ ಮೊಳಕಾಲ್ಮೂರು ಕ್ಷೇತ್ರಕ್ಕೆ ಪಾರಂಪರಿಕ ಸ್ಥಾನ ನೀಡಲು ಸಹಾಯವಾಗಲಿದೆ ಎಂಬುದು ಇಲ್ಲಿನ ಜನರ ಅಭಿಪ್ರಾಯ., ಅಶೋಕ ಶಾಸನ,  ಜಟ್ಟಂಗಿ ರಾಮೇಶ್ವರ,ಬ್ರಹ್ಮಗಿರಿ ಬೆಟ್ಟ, ನುಂಕೆಮಲೆ ಸಿದ್ದೇಶ್ವರ ಬೆಟ್ಟ ಹಾಗೂ ನಾಯಕನಹಟ್ಟಿ ತಿಪ್ಪೆರುದ್ರ ಸ್ವಾಮಿ ದೇವಾಲಯಗಳು ಪ್ರಮುಖವಾಗಿವೆ,.
ನಾಯಕ ಸಮುದಾಯದ ಉಪಸ್ಥಿತಿ ಹಾಗೂ ಶ್ರೀರಾಮುಲು ಅವರ ಜನಪ್ರಿಯತೆ ಮೊಳಕಾಲ್ಮೂರಿಗೆ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಳ್ಳಾರಿ ಸಂಸದ ಶ್ರೀರಾಮುಲು ಅವರನ್ನು ಇಲ್ಲಿನ ಅಭ್ಯರ್ಥಿಯನ್ನಾಗಿಸಿರುವು ಚುನವಣಾ ರಣತಂತ್ರದ ಭಾಗವಾಗಿದೆ.  42 ವಿಧಾನಸಭೆ ಕ್ಷೇತ್ರಗಳಿದ್ದು, ರಾಯಚೂರು, ಬಳ್ಳಾರಿ, ಗದಗ, ಕೊಪ್ಪಳ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಶ್ರೀರಾಮಲು ಪ್ರಾಬಲ್ಯವಿದೆ.
2009ರ ಲೋಕಸಭೆ ಚುನಾವಣೆಯಯಲ್ಲಿ ಗೆಲುವುದರ ಮೂಲಕ ಶ್ರೀರಾಮುಲು ತಮ್ಮ ಪ್ರಭಾವ ತೋರಿದ್ದಾರೆ, ವಾಲ್ಮಿಕಿ, ನಾಯಕ, ಹಾಗೂ ಬೇಡ ಸಮುದಾಯದವರಿಗೆ ಶ್ರೀರಾಮುಲು ಪರವರ್ ಪುಲ್ ನಾಯಕರಾಗಿದ್ದಾರೆ, ನಾಯಕನಹಟ್ಟಿಯಲ್ಲಿ ಶ್ರೀರಾಮುಲುಗೆ ತೀವ್ರ ವಿರೋಧ ವ್ಯಕ್ತವಾಗಿದೆ, ಆದರೆ ದೊಡ್ಡ ಉಲ್ಳಾರ್ತಿ, ಗೌರ ಸಮುದ್ರ ರಾಮಪುರ, ಮೊಳಕಾಲ್ಮೂರು, ಕೊಂಡಲಹಳ್ಳಿ ಮತ್ತು ಬೊಮ್ಮ ಗೊಂಡನಕೆರೆ ಗಳಲ್ಲಿ ಶ್ರೀರಾಮುಲು ಅವರನ್ನು ಸ್ವಾಗತಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com