ಪತಿ ಜಗದೀಶ್ ಮತ್ತು ಮಾವನೊಂದಿಗೆ ನಟಿ ಅಮೂಲ್ಯ ಜೆಡಿಎಸ್ ಗೆ ಸೇರ್ಪಡೆ

ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ ಅವರೊಂದಿಗೆ ಮಂಗಳವಾರ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ....
ಅಮೂಲ್ಯ ಹಾಗೂ ಜಗದೀಶ್
ಅಮೂಲ್ಯ ಹಾಗೂ ಜಗದೀಶ್
Updated on
ಬೆಂಗಳೂರು: ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಮತ್ತು ಮಾವ ರಾಮಚಂದ್ರ ಅವರೊಂದಿಗೆ ಮಂಗಳವಾರ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಅಮೂಲ್ಯ ಮಾವ ರಾಮಚಂದ್ರ ರಾಜ ರಾಜೇಶ್ವರಿ ನಗರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿ ಪಕ್ಷದಲ್ಲಿ ನನಗೆ ಅನ್ಯಾಯ ಆಗಿದೆ. ಹೀಗಾಗಿ ನಾನು ಜೆಡಿಎಸ್​ಗೆ ಸೇರಿದ್ದೇನೆ. ಟಿಕೆಟ್ ಕೊಡುವುದು ಬಿಡುವುದು ದೇವೇಗೌಡರಿಗೆ ಬಿಟ್ಟಿದ್ದು. ಎರಡು ಬಾರಿ ಪ್ರಯತ್ನ ಪಟ್ಟರೂ ಬಿಜೆಪಿಯಿಂದ ಟಿಕೆಟ್ ಸಿಕ್ಕಿರಲಿಲ್ಲ. ರಾಜಕೀಯ ಜೀವನವೇ ಬೇಡ ಎಂಬಂತಾಗಿತ್ತು. ಹಾಲಿ ಶಾಸಕರ ದೌರ್ಜನ್ಯದ ವಿರುದ್ಧ ಹೋರಾಡಲು ಜೆಡಿಎಸ್​ಗೆ ಸೇರಿದ್ದೇನೆ ಎಂದು ಹೇಳಿದ್ದಾರೆ. 
ಇನ್ನೂ ಈ ವೇಳೆ ಮಾತನಾಡಿದ ನಟಿ ಅಮೂಲ್ಯ ನನಗೆ ರಾಜಕೀಯದ ಬಗ್ಗೆ ಅಷ್ಟೊಂದು ಗೊತ್ತಿಲ್ಲ, ನನ್ನ ಮಾವನಿಗೆ ಟಿಕೆಟ್ ಸಿಕ್ಕರೇ ಅವರ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದು ಹೇಳಿದ್ದಾರೆ.ನಟಿ ಅಮೂಲ್ಯ ಜೆಡಿಎಸ್​ನ ಸ್ಟಾರ್​ ಕ್ಯಾಂಪೇನರ್​ಆಗಲಿದ್ದಾರೆ. ಸಿ.ವಿ.ರಾಮನ್ ನಗರ ಟಿಕೆಟ್ ಆಕಾಂಕ್ಷಿ ಪಿ.ರಮೇಶ್, ಚಿಕ್ಕಪೇಟೆಯ ಹೇಮಚಂದ್ರಸಾಗರ್, ಆರ್​ಆರ್​ ನಗರದ ರಾಮಚಂದ್ರ, ಬಸವ ಕಲ್ಯಾಣ ಕ್ಷೇತ್ರದ ಡಾ.ಮೂಳೆ ಜೆಡಿಎಸ್​​ಗೆ ಸೇರ್ಪಡೆಯಾದರು.
ದಿನೇ ದಿನೇ ಪಕ್ಷದ ಶಕ್ತಿ ಹೆಚ್ಚುತ್ತಿದೆ. ಇದೆಲ್ಲಾ ದೇವರ ಆಟ. ಬೇರೆ ಪಕ್ಷದ ಹಲವು ಮುಖಂಡರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ನಾಳೆ ಕೂಡ ಮತ್ತಷ್ಟು ಜನ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಜೆಡಿಎಸ್​ ರಾಷ್ಟ್ರಾಧ್ಯಕ್ಷ ಎಚ್​.ಡಿ.ದೇವೇಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com