ರಾಜ್ಯ ವಿಧಾನಸಭೆ ಚುನಾವಣೆ: ಸೋಮಾರಿ ರಾಜಕಾರಣಿಗಳ ಬೆವರಿಳಿಸುವ 'ಬ್ಯಾಡಗಿ' ಮೆಣಸಿನಕಾಯಿ

ಬ್ಯಾಡಗಿ ಹಾವೇರಿ ಜಿಲ್ಲೆಯ ಅತಿ ದೊಡ್ಡ ಕ್ಷೇತ್ರ, ಇಲ್ಲಿ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,. ಆದರೆ ಅವರಿಗೆ ಚುನಾವಣೆ ವೇಳೆ ರಾಜಕಾರಣಿಗಳು ನೀಡಿದ್ದ ...
ಶಾಸಕ ಬಿ.ಎನ್ ಶಿವಣ್ಣನವರ್
ಶಾಸಕ ಬಿ.ಎನ್ ಶಿವಣ್ಣನವರ್
ಹಾವೇರಿ: ಬ್ಯಾಡಗಿ ಹಾವೇರಿ ಜಿಲ್ಲೆಯ ಅತಿ ದೊಡ್ಡ ಕ್ಷೇತ್ರ, ಇಲ್ಲಿ ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ,. ಆದರೆ ಅವರಿಗೆ ಚುನಾವಣೆ ವೇಳೆ ರಾಜಕಾರಣಿಗಳು ನೀಡಿದ್ದ ಯಾವುದೇ ಭರವಸೆ ಈಡೇರಿಲ್ಲ.
ನೀರಿನ ಕೊರತೆ ಹಾಗೂ ಬೆಳೆದ ಬೆಳೆಗಳ ದರದಲ್ಲಿ ಅನಿಶ್ಚಿತತೆ ಸಮಸ್ಯೆ ಯಾವಾಗಲೂ ಕಾಡುತ್ತದೆ. ಈ ಕ್ಷೇತ್ರದ ಹಾಲಿ ಶಾಸಕ ಬಿ.ಎನ್ ಶಿವಣ್ಣನವರ್ ಕಾಂಗ್ರೆಸ್ ನವರು. ಈ ಬಾರಿ ಶಾಸಕರ ವಿರೋಧಿ ಅಲೆ ಮತ್ತಷ್ಟೂ  ಹೆಚ್ಚಾಗಿದೆ, ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.
ಕಾಂಗ್ರೆಸ್ ಸ್ಪರ್ದಿಯಾಗಿರುವ ಎಸ್ ಆರ್ ಪಾಟೀಲ್  ಇದೇ ತಾಲೂಕಿಗೆ ಸೇರಿದವರಾಗಿದ್ದಾರೆ, ನಮ್ಮ ಬೆಳೆಗಳ ಕಟಾವಿನ ಸಮಯದಲ್ಲಿ ಬೆಲೆ ಇಳಿಕೆಯಾಗುತ್ತದೆ. ಕಳೆದ ವರ್ಷ ನಾನು 1 ಕ್ವಿಂಟಾಲ್ ಜೋಳವನ್ನು 1500 ರು ಗೆ ಮಾರಾಟ ಮಾಡಿದ್ದೆ. ಆದರೆ ಈ ವರ್ಷ ಬೆಲೆ ಇಳಿಮುಖವಾಗಿದ್ದು, ಕ್ವಿಂಟಾಲ್ ಗೆ 1.050 ರು. ಆಗಿದೆ. ಜೊತೆಗೆ ಹತ್ತಿಯ ಬೆಲೆಯಲ್ಲೂ ಕೂಡ ಇಳಿಮುಖವಾಗಿದೆ, ಪ್ರತಿ ಕ್ವಿಂಟಾಲ್ ಗೆ ಕಳೆದ ವರ್ಷ 6 ಸಾವಿರ ರು ಇತ್ತು,  ಆದರೆ ಈ ವರ್ಷ 5.500 ರು ಆಗಿದೆ, ಮಳೆಯ ಪ್ರಮಾಣದಲ್ಲೂ ಕಡಿಮೆಯಾಗಿದೆ,  ಹೇಗೆ ನಮ್ಮ ಕುಟುಂಬವನ್ನು ಸಲಹುವುದು ಎಂದು ಕಾಗಿನೆಲೆಯ. ಮೊಹಮದ್ ಗೌಸ್ ಎಂಬ ರೈತ ಪ್ರಶ್ನಿಸಿದ್ದಾರೆ.
10 ಎಕರೆ ಭೂಮಿಯನ್ನು ಲೀಸ್ ಗೆ ತೆಗೆದುಕೊಂಡಿದ್ದೇನೆ, ನನ್ನ ಹಾಗೆ ಹಲವು ರೈತರು ಇದೇ ರೀತಿ ಭೂಮಿಯನ್ನು ಪಡೆದುಕೊಂಡಿದ್ದಾರೆ, ಜೋಳ ಮತ್ತು ಹತ್ತಿ ಕೃಷಿ ಮಾಡುತ್ತಾರೆ, ಸರ್ಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದರ ಜೊತೆಗೆ ಸಂಗ್ರಹಣಾ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.
ಯಾರು ನೀರನ್ನು ಇಲ್ಲಿಗೆ ತರುತ್ತಾರೆ?
ಹಾವೇರಿ ಜಿಲ್ಲೆಯ 8 ತಾಲೂಕುಗಳ ಜನರು ಕೃಷಿಗೆ ಮಳೆಯನ್ನೇ ಆದರಿಸಿದ್ದಾರೆ, ಮಳೆ ಮತ್ತು ಕೊಳವೆ ಬಾವಿಗಳು ನೀರಿನ ಪ್ರಮುಖ ಮೂಲಗಳಾಗಿವೆ, ಆದರೆ ಮಳೆಯ ಕೊರತೆಯಿಂದಾಗಿ ಕೊಳವೆ ಬಾವಿಗಳು ಬತ್ತಿ ಹೋಗಿವೆ.ಕಳೆದ ನಾಲ್ಕು ವರ್ಷಗಳಿಂದಲೂ ಇಲ್ಲಿ ಬರದ ಪರಸ್ಥಿತಿ ನಿರ್ಮಾಣವಾಗಿದೆ.
ಈ ಜಿಲ್ಲೆಯಲ್ಲಿ ನಾಲ್ಕು ನದಿಗಳಿವೆ, ತುಂಗಭದ್ರಾ, ವರದಾ, ಧರ್ಮಾ ಮತ್ತು ಕುಮದ್ವತಿ ಆದರೆ ಸರಿಯಾದ ನೀರಾವರಿ ಯೋಜನೆಗಳಿಲ್ಲ,  ತುಂಗಾ ಮೇಲ್ದಂಡೆ ಯೋಜನೆ ಆರಂಭವಾಗಿ  ದಶಕ ಕಳೆದಿದೆ, ರಾಣಿಬೆನ್ನೂರು ರೈತರ ಜೊತೆಗೆ ಇಲ್ಲಿನ ನದಿ ಹಾಗೂ ಟ್ಯಾಂಕ್ ಗಳಿಗೆ ಅದರಿಂದ ನೀರನ್ನು ತುಂಬಲಾಗುತ್ತದೆ.
ಜಿಲ್ಲೆಯಲ್ಲಿ ಹರಿಯುವ ವರದಾ ನದಿ ಜನವರಿಯಲ್ಲಿ ತಿಂಗಳ ನಂತರ ಬತ್ತಿ ಹೋಗಿದೆ ಬೆಡ್ತಿ ಮತ್ತು ವರದಾ ನದಿ ಜೋಡಣೆ ಮಾಡಲು ದಶಕಗಳ ಹಿಂದೆಯೇ ಯೋಜಿಸಲಾಗಿದೆ, ಆದರೆ ಇನ್ನೂ ಆರಂಭವಾಗಿಲ್ಲ, ಇದರಿಂದ ಹಾವೇರಿ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಗೂ ಲಾಭವಾಗುತ್ತದೆ.
ಸರ್ಕಾರ ಬದಲಾದರೂ ಇಲ್ಲಿನ ರೈತರ ಹಣೆ ಬರಹ ಬದಲಾಗುವುದಿಲ್ಲ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಪಕ್ಷದ ಸರ್ಕಾರವೇ ಬಂದರೂ ಸಮಸ್ಯೆಗೆ ಮುಕ್ತಿಯಿಲ್ಲ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಜನ ಮತ ಹಾಕಿದ್ದಾರೆ, ಯಡಿಯೂರಪ್ಪ ಸರ್ಕಾರದ ವಿರೋಧಿಸಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಲಾಯಿತು, ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಆಡಳಿತ ವಿರೋಧಿ ಅಲೆಯಿದೆ, ಪ್ರತಿ ಚುನಾವಣೆಯಲ್ಲಿಯೂ ಭರವಸೆ ನೀಡಿ ನಂತರ ಅಷ್ಟೇ ಪ್ರಾಮಾಣಿಕವಾಗಿ ಮರೆತು ಬಿಡಲಾಗುತ್ತದೆ  ಎಂದು ರೈತ ಕೇಶಪ್ಪ ಪೂಜಾರ್ ಎಂಬುವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com