ವಿವಾದಗಳೆಲ್ಲ ಮುಗಿದ ಅಧ್ಯಾಯ: ಉಡುಪಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್

ಬಿಜೆಪಿಯ ಅಭಿವೃದ್ಧಿ ಅಜೆಂಡಾ ಆಧಾರದ ಮೇಲೆ ಮತಯಾಚಿಸುವುದಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
ರಘುಪತಿ ಭಟ್ ಸುದ್ದಿಗೋಷ್ಠಿ
ರಘುಪತಿ ಭಟ್ ಸುದ್ದಿಗೋಷ್ಠಿ

ಉಡುಪಿ :  ಬಿಜೆಪಿಯ ಅಭಿವೃದ್ಧಿ ಅಜೆಂಡಾ ಆಧಾರದ ಮೇಲೆ ಮತಯಾಚಿಸುವುದಾಗಿ  ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.

ತಮ್ಮ ವಿರುದ್ಧ ಎದ್ದಿದ್ದ ವಿವಾದಗಳೆಲ್ಲ ಮುಗಿದ ಅಧ್ಯಾಯವಾಗಿದ್ದು, ಜನವರಿ ತಿಂಗಳಿನಿಂದಲೂ ಮತದಾರ ಬಾಗಿಲಿಗೆ ಭೇಟಿ ನೀಡಿ ಮತಯಾಚಿಸುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೆಲ ಸಮೀಕರಣದ ಲೆಕ್ಕಾಚಾರದಿಂದಾಗಿ ನಿಧಾನವಾಗಿ ಟಿಕೆಟ್ ಘೋಷಣೆ ಮಾಡಲಾಗಿದ್ದು ಏ.23 ರಂದು ನಾಮಪತ್ರ ಸಲ್ಲಿಸುವುದಾಗಿ ಹೇಳಿದರು.

ಡಾ. ವಿ.ಎಸ್. ಆಚಾರ್ಯ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. 2004 ಹಾಗೂ 2008ರ ಅವಧಿಯಲ್ಲಿ ಶಾಸಕನಾಗಿದ್ದಾಗ ಹಲವು ಕೆಲಸಗಳನ್ನು ಮಾಡಿರುವುದಾಗಿ ತಿಳಿಸಿದರು.

 ಮೇ 1 ರಂದು ಪ್ರಧಾನಿ ನರೇಂದ್ರಮೋದಿ ಉಡುಪಿಗೆ ಆಗಮಿಸಿದ್ದು, ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.  ಅವರ ಭೇಟಿ ನೀಡುವುದರಿಂದ ಪಕ್ಷಕ್ಕೆ ಅದೃಷ್ಟ ಬಂದಂತಾಗುತ್ತದೆ ಎಂದು ಅವರು, ಉಡುಪಿಯ ಅಷ್ಟಮಠಗಳಿಗೂ ಭೇಟಿ ನೀಡುವುದಾಗಿ ಹೇಳಿದರು.
 
ಶಿರೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆಯಲಾಗುವುದು, ಚುನಾವಣೆಗೆ ಸ್ಪರ್ಧಿಸದಂತೆ ಮನವಿ ಮಾಡಲಾಗುವುದು ಎಂದ ಅವರು, ಬಿಜೆಪಿ ಶ್ರೀ ಕೃಷ್ಣ ಮಠದೊಂದಿಗೆ ಯಾವಾಗಲೂ ಉತ್ತಮ  ಸಂಬಂಧ ವಿದೆ. ಆದರೆ, ಕೆಲ ವ್ಯಕ್ತಿಗಳು ತೊಂದರೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com