ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಬಿಜೆಪಿ ಮೋದಿ ಬ್ರಹ್ಮಾಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ.
ಕರ್ನಾಟಕ ವಿಧಾನಸಭಾ ಚುನವಾಣೆಯ ಚುನವಾಣೆಯಲ್ಲಿ ಆಡಳಿತ ವಿರೋಧಿ ಅಲೆ ಪ್ರತಿಪಕ್ಷಗಳಿಗೆ ವರವಾಗುವ ಸಾಧ್ಯತೆ ಕಡಿಮೆ ಇದೆ. ಇದೇ ವೇಳೆ ಜೆಡಿಎಸ್ ಸಹ ಕಿಂಗ್ ಮೇಕರ್ ಆಗುವ ವಿಶ್ವಾಸ ಹೊಂದಿದ್ದು, ಈ ಎರಡೂ ಅಂಶಗಳು ಅತಂತ್ರ ಫಲಿತಾಂಶವನ್ನು ಸೂಚಿಸುತ್ತಿದೆ.
ಈ ಪರಿಸ್ಥಿತಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಹೆಚ್ಚು ನೆರವಾಗುವ ಅಂಶವೆಂದರೆ ಅದು ಪ್ರಧಾನಿ ನರೇಂದ್ರ ಮೋದಿ ಇಮೇಜ್. ಪ್ರಧಾನಿ ಮೋದಿ ಓರ್ವ ಅದ್ಭುತ ಚುನಾವಣಾ ಪ್ರಚಾರಕ ಎಂಬುದರಲ್ಲಿ ಅನುಮಾನವಿಲ್ಲ. ಪ್ರಚಾರ ಮಾಡಿದ ಬಹುತೇಕ ಪ್ರದೇಶಗಳಲ್ಲಿ ಪಕ್ಷಕ್ಕೆ ವರದಾನವಾಗಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಚುನಾವಣೆ ಗೆಲ್ಲಲು ಮೋದಿ ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಿದ್ದು ಪ್ರಧಾನಿ ಮೋದಿ ಅವರ ಸರಣಿ ರ್ಯಾಲಿಗಳನ್ನು ಹಮ್ಮಿಕೊಂಡಿದೆ.