ಬಳ್ಳಾರಿಯಲ್ಲಿ ಪುನಃ ಅಧಿಕಾರ ಸ್ಥಾಪಿಸಲು ರೆಡ್ಡಿ ಸಹೋದರರನ್ನು ನಂಬಿಕೊಂಡಿರುವ ಬಿಜೆಪಿ

ಕಬ್ಬಿಣದ ಅದಿರು ಗಣಿಗಾರಿಕೆ ಹಗರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದ ರೆಡ್ಡಿ ಸಹೋದರರು ಈಗ ಬಳ್ಳಾರಿಗೆ ಚುನಾವಣಾ ಅಖಾಡಕ್ಕೆ ಪ್ರವೇಶಿಸಿದ್ದಾರೆ.
ಕರುಣಾಕರ ರೆಡ್ಡಿ
ಕರುಣಾಕರ ರೆಡ್ಡಿ
ಬಳ್ಳಾರಿ: ಕಬ್ಬಿಣದ ಅದಿರು ಗಣಿಗಾರಿಕೆ ಹಗರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದ ರೆಡ್ಡಿ ಸಹೋದರರು ಈಗ ಬಳ್ಳಾರಿಗೆ ಚುನಾವಣಾ ಅಖಾಡಕ್ಕೆ ಪ್ರವೇಶಿಸಿದ್ದಾರೆ. 
ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಗೆ ರೆಡ್ಡಿ ಸಹೋದರರ ಪೈಕಿ ಇಬ್ಬರನ್ನು ಬಿಜೆಪಿ ಕಣಕ್ಕಿಳಿಸಿದೆ. ಕೆಲವೇ ವರ್ಷಗಳ ಹಿಂದೆ ಬಿಜೆಪಿಗೆ ಮುಜುಗರ ಉಂಟುಮಾಡಿದ್ದ ರೆಡ್ಡಿ ಸಹೋದರರ ಹಗರಣದ ಆರೋಪ ಈಗ ರೆಡ್ಡಿ ಸಹೋದರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಾಗೇನು ಉಳಿದಿಲ್ಲ. ಆದ್ದರಿಂದಲೇ ಬಿಜೆಪಿ ರೆಡ್ದಿ ಸಹೋದರರನ್ನು ಮತ್ತೊಮ್ಮೆ ಪಕ್ಷಕ್ಕೆ ಸೇರಿಸಿಕೊಂಡಿದ್ದು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನ್ನೂ ನೀಡಿದೆ. ಬಳ್ಳಾರಿ ನಗರದಿಂದ ಜಿ ಸೋಮಶೇಖರ್ ರೆಡ್ಡಿ, ದಾವಣಗೆರೆಯ ಹರಪ್ಪನಹಳ್ಳಿಯಿಂದ ಸ್ಪರ್ಧಿಸುತ್ತಿದ್ದು, ಹಿಂದೆ ತನ್ನ ಭದ್ರ ಕೋಟೆಯಾಗಿದ್ದ ಬಳ್ಳಾರಿಯನ್ನು ಈಗ ಮತ್ತೆ ವಶಪಡಿಸಿಕೊಳ್ಳುವುದಕ್ಕೆ ಈಗ ಬಿಜೆಪಿಗೆ ರೆಡ್ಡಿ ಸಹೋದರರು ಅನಿವಾರ್ಯವಾಗಿದ್ದಾರೆ. 
ಬಿಜೆಪಿ  ರಾಷ್ಟ್ರಾಧ್ಯಕ್ಷರು ಜನಾರ್ದನ ರೆಡ್ಡಿ ಹಾಗೂ ಬಿಜೆಪಿಗೂ ಯಾವುದೆ ಸಂಬಂಧವಿಲ್ಲ ಎಂದು ಈಗಾಗಲೇ ಬಹಿರಂಗವಾಗಿ ಸ್ಪಷ್ಟಪಡಿಸಿದ್ದಾರೆ.  ಆದರೆ ಪಕ್ಷದ ತಳಮಟ್ಟದಲ್ಲಿ ಪರಿಸ್ಥಿಯೇ ಬೇರೆ ಇದ್ದು,  ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿಯಲ್ಲಿಯೇ ಒಂದು ಭಾಗ ಅಮಿತ್ ಶಾ ಅವರ ಹೇಳಿಕೆಯನ್ನು ಕೇವಲ ಸಾರ್ವಜನಿಕ ಹೇಳಿಕೆಯೆಂದು ಪರಿಗಣಿಸುತ್ತಿವೆ. 
ಮೂಲಗಳ ಪ್ರಕಾರ ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆಯಲ್ಲಿರುವ ರೆಡ್ಡಿ ಸಮುದಾಯದ ಮತಗಳನ್ನು ಕ್ರೋಡೀಕರಿಸುವ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗುತ್ತಿದೆ. ಈ ವಿಧಾನಸಭಾ ಚುನಾವಣೆ ಬಿಜೆಪಿಗಷ್ಟೇ ಅಲ್ಲದೇ ರೆಡ್ಡಿ ಸಹೋದರರಿಗೂ ಸತ್ವ ಪರೀಕ್ಷೆಯಾಗಿರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com