ಕರ್ನಾಟಕ ಉತ್ತರ ಪ್ರದೇಶವಲ್ಲ, ಮೋದಿ ಕಂಡರೆ ನಮಗೆ ಭಯವಿಲ್ಲ: ಕೆಸಿ ವೇಣುಗೋಪಾಲ್

ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿ ಹೋಗಿಲ್ಲ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಚುನಾವಣಾ ತಂತ್ರವಾಗಿದೆ, ...
ಕೆ.ಸಿ ವೇಣುಗೋಪಾಲ್
ಕೆ.ಸಿ ವೇಣುಗೋಪಾಲ್
ಬೆಂಗಳೂರು: ಮೇ 12 ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ  ಕೆ.ಸಿ ವೇಣುಗೋಪಾಲ್  ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಚುನಾವಣೆಯಲ್ಲಿ 130 ಸೀಟುಗಳನ್ನು ಗೆಲ್ಲುವ ಮೂಲಕ ಪಕ್ಷ ಮತ್ತೆ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಏರಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ವೇಣುಗೋಪಾಲ್ ಭರವಸೆ ವ್ಯಕ್ತ ಪಡಿಸಿದ್ದಾರೆ.
ಪ್ರ: ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬಗ್ಗೆ ನಿಮ್ಮ ನಿರ್ಧಾರವೇನು?
ಉ: 2019 ರ ಲೋಕಸಭೆಗೆ ಸೆಮಿಫೈನಲ್ ಎಂದೇ ಪರಿಗಣಿಸಲ್ಪಟ್ಟಿರುವ ರಾಜ್ಯ ವಿಧಾನಸಭೆ ಚುನಾವಣೆಗಾಗಿ ನಾವು ಕಳೆದ 1 ವರ್ಷದಿಂದ ಪಕ್ಷವನ್ನು ಮತ್ತಷ್ಟಪ ಬಲಗೊಳಿಸಲು ಪರಿಷ್ಕರಣೆ ನಡೆಸಿದ್ದೇವೆ, ತಳ ಮಟ್ಟದಿಂದ ಪಕ್ಷವನ್ನು ಸದೃಢಗೊಳಿಸಿದ್ದೇವೆ. ರಾಜ್ಯದಲ್ಲಿ ರಾಹುಲ್ ಗಾಂಧಿ 18 ದಿನಗಳ ಕಾಲ ಪ್ರಚಾರ ನಡೆಸಿದ್ದಾರೆ, ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ 130 ಸೀಟುಗಳಲ್ಲಿ ಜಯ ಸಾಧಿಸಲಿದೆ.
ಪ್ರ: ಹಲವು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರದ ಸೂಚನೆ ನೀಡುತ್ತಿವೆಯಲ್ಲ?
ಉ: ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ನನಗೆ ಅನುಮಾನವಿದೆ, ಅವೆಲ್ಲಾ ಪ್ರಾಯೋಜಿತ ಸಮೀಕ್ಷೆಗಳು. ಈ ಮೊದಲ ಸಮೀಕ್ಷೆಗಳು ಬಿಜೆಪಿ 70ರಿಂದ 75 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ ಎಂದು ಹೇಳಿತ್ತು. ಇದ್ದಕಿದ್ದ ಹಾಗೆ 90ರಿಂದ 92 ಸೀಟುಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆಗಳು ತಿಳಿಸಿವೆ, ಹೇಗೆ ಸಂಖ್ಯೆ ಹೆಚ್ಚಾಯ್ತು.
ಪ್ರ: ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದಾರಲ್ಲ?
ಉ: ಚಾಮುಂಡೇಶ್ವರಿಯಿಂದ ಸ್ಪರ್ದಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದರು. ತಮಗೆ ಆ ಕ್ಷೇತ್ರದ ಮೇಲೆ  ಭಾವನಾತ್ಮಕ ಸಂಬಂದವಿದೆ ಎಂದು ಹೇಳಿದ್ದರು. ಆದರೆ ಉತ್ತರ ಕರ್ನಾಟಕ  ಪಕ್ಷದ ಕೆಲವು ಮುಖಂಡರು ಆ ಬಾಗದಿಂದ ಸ್ಪರ್ದಿಸುವಂತೆ ಒತ್ತಡ ಹಾಕುತ್ತಿದ್ದರು. ಪಕ್ಷದ ಬಗ್ಗೆ ಇಉರುವ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ಇದು ಸಾಧ್ಯವಾಗುತ್ತದೆ, ಉಫತ್ತರ ಕರ್ನಾಟಕದಿಂದ ಸ್ಪರ್ದಿಸುವ ಬಗ್ಗೆ ಹೈ ಕಮಾಂಡ್ ನಿರ್ಧರಿಸುತ್ತದೆ.
ಪ್ರ: ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಗೆಲ್ಲುವುದು ಸಾಧ್ಯವಿಲ್ಲ, ಹೀಗಾಗಿ ಸುರಕ್ಷಿತ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ?
ಉ:ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಓಡಿ ಹೋಗಿಲ್ಲ,  ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಚುನಾವಣಾ ತಂತ್ರವಾಗಿದೆ, ಎರಡು ಕ್ಷೇತ್ರಗಳಲ್ಲೂ ಅತ್ಯಧಿಕ ಮತಗಳಿಂದ ಜಯ ಸಾಧಿಸಲಿದ್ದಾರೆ.
ಪ್ರ: ಉತ್ತರ ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುವುದರಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲವೆ?
ಉ: ಹಾಗೇನು ಆಗುವುದಿಲ್ಲ, ಹಳೇಯ ಮೈಸೂರು ಭಾಗದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೇವೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಮಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ. ಈ ಭಾಗದಲ್ಲಿ ಬಿಜೆಪಿ ಅಪಾಯದಲ್ಲಿದೆ, ಮೊದಲಿಗೆ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪುತ್ರನ ಹೆಸರನ್ನು ಹರಿಬಿಟ್ಟು, ಇದ್ದಕ್ಕಿದ್ದ ಹಾಗೆ ವಾಪಾಸ್ ತೆಗೆದುಕೊಂಡಿದ್ದು ಏಕೆ ಎಂಬುದನ್ನು ವಿವರಿಸಲಿ.
ಪ್ರ: ಕಾಂಗ್ರೆಸ್ ಜೊತೆ ಅಂಬರೀಷ್ ಮುನಿಸಿಕೊಂಡಿದ್ದಾರೆ ಏಕೆ?
ಉ: ಪಕ್ಷದೊಂದಿಗೆ ಅವರಿಗೆ ಯಾವುದೇ ಅಸಮಾಧಾನವಿಲ್ಲ, ಪಕ್ಷದ ವಿರುದ್ಧವಾಗಿ ಅವರು ಮಾತನಾಡಿಲ್ಲ, ಅವರಿಗೆ ಸ್ಪರ್ಧಿಸಲು ಇಚ್ಚೆ ಇರಲಿಲ್ಲ, ಅವರ ಆರೋಗ್ಯದ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ,
ಪ್ರ: ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಅಂಬರೀಷ್ ಆಕ್ರೋಶಗೊಂಡಿದ್ದಾರೆ?
: ಕೆಲವರೊಂದಿಗೆ ಪ್ರತಿಯೊಬ್ಬರಿಗೂ  ಭಿನ್ನಾಬಿಪ್ರಾಯಗಳಿರುತ್ತವೆ,.ಅತಿ ದೊಡ್ಡ ಪ್ರಜಾಪ್ರಭುತ್ವ ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬರುವುದು ಸಾಮಾನ್ಯ.
ಪ್ರ: ರೆಡ್ಡಿ ಸಹೋದರರು ಹಾಗೂ ಬಿಜೆಪಿ ಒಡನಾಟದ ಬಗ್ಗೆ  ಕಾಂಗ್ರೆಸ್ ಟೀಕಿಸುತ್ತಿತ್ತು,ಆದರೆ ಆನಂದ್ ಸಿಂಗ್ ಮತ್ತು ನಾಗೇಂದ್ರ ಕಾಂಗ್ರೆಸ್ ನಲ್ಲಿದ್ದಾರಲ್ಲ?
ಉ:  ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರು ನಮ್ಮ ಪಕ್ಷದಲ್ಲಿರುವುದನ್ನು  ರೆಡ್ಡಿ ಸಹೋದರರಿಗೆ ಹೋಲಿಸಬಾರದು, ಅವರಿಬ್ಬರು ಶಾಸಕರಾಗಿದ್ದವರು, ಅವರ ವಿರುದ್ದ ಯಾವುದೇ ಕೇಸುಗಳಿಲ್ಲ, ಅವರು ಪಕ್ಷ ಸೇರುವಾಗ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸೇರಿಸಿಕೊಳ್ಳಲಾಯಿತು.. ರೆಡ್ಡಿ ಸಹೋದರದ್ದು 33ಸಾವಿರ ಕೋಟಿ ಹಗರಣ, ಅಕರ ವಿರುದ್ಧದ ಕೇಸು ಈಗಲೂ ಇದೆ.
ಪ್ರ: ಮುಂದಿನ ದಿನಗಳಲ್ಲಿ ರಾಜ್ಯಕ್ಕೆ  ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರಲ್ಲ?
ಉ: ಮೋದಿ ಒಬ್ಬರು ಬಿಜೆಪಿ ನಾಯಕ, ಅವರು ಈಗಾಗಲೇ ಪ್ರಚಾರ ನಡೆಸಿದ್ದಾರೆ. ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಏನು, ಅದಾದ ನಂತರ ಅವರು ಮತ್ತೆ ಏಕೆ ಕರ್ನಾಟಕಕ್ಕೆ ಬರಲಿಲ್ಲ, ಕರ್ನಾಟಕ ಉತ್ತರ ಪ್ರದೇಶವಲ್ಲ, ಮೋದಿ ಬಗ್ಗೆ ನಮಗೆ ಭಯವಿಲ್ಲ, ನಮ್ಮ ನಾಯಕರುಗಳ ಬಗ್ಗೆ ನಮಗೆ ಆತ್ಮ ವಿಶ್ವಾಸವಿದೆ, ಇಲ್ಲಿ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ವಿಷಯಗಳಿವೆ.
ಪ್ರ: ಕಾಂಗ್ರೆಸ್ ನಾಯಕುಗಳ ಭಿನ್ನಾಭಿಪ್ರಾಯದ ಬಗ್ಗೆ ನಿಮ್ಮ ನಿಲುವೇನು?
ಉ:ನಮ್ಮ ನಾಯಕರುಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಕಾಂಗ್ರೆಸ್ ಎಲ್ಲಾ ಪ್ರಭಾವಿ ನಾಯಕರು ಹಾಗೂ ಕಾಂಗ್ರೆಸ್ ನಾಯಕತ್ವ ಒಟ್ಟಿಗೆ ಕೆಲಸ ಮಾಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com