ದಶಕಗಳ ಕಾಲ ರಾಜ್ಯ ರಾಜಕೀಯ ನಿರ್ಣಾಯಕ ಕೇಂದ್ರವಾಗಿದ್ದ ಕೋಲಾರ ಈಗ ಮಂಕು!

ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ...
ಭಾರತ್ ಚಿನ್ನದ ಗಣಿ (ಸಂಗ್ರಹ ಚಿತ್ರ)
ಭಾರತ್ ಚಿನ್ನದ ಗಣಿ (ಸಂಗ್ರಹ ಚಿತ್ರ)

ಕೋಲಾರ: ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ದಶಕಗಳ ಕಾಲ ಅಲ್ಲಿನ ರಾಜಕೀಯವನ್ನು ನಿರ್ಧರಿಸಿದ್ದ ಕೋಲಾರ ಚಿನ್ನದ ಗಣಿ(ಕೆಜಿಎಫ್) ಇಂದು ಕ್ಷೀಣಿಸಿದೆ. ಇಲ್ಲಿನ ಮಾಜಿ ನೌಕರರಲ್ಲಿ ಅಸಮಾಧಾನ, ನೋವಿನ ಹೊಗೆಯಾಡುತ್ತಿದೆ. ಭಾರತ್ ಚಿನ್ನದ ಗಣಿ ಕಂಪೆನಿ(ಬಿಜಿಎಂಎಲ್) ಎಂದು ಮರುನಾಮಕರಣ ಮಾಡಲಾಗಿರುವ ಕೆಜಿಎಫ್ ಈ ಬಾರಿಯ ಚುನಾವಣೆ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಕೋಲಾರ ಕಾಂಗ್ರೆಸ್ ನ ಹಿರಿಯ ನಾಯಕರಾದ ಸಂಸದ ಕೆ.ಎಚ್.ಮುನಿಯಪ್ಪ, ಭಕ್ತವತ್ಸಲಂ, ರಾಜೇಂದ್ರ ಮೊದಲಾದವರಿಗೆ ರಾಜಕೀಯದಲ್ಲಿ ಭದ್ರ ನೆಲೆ ನೀಡಿದ ಕ್ಷೇತ್ರವಿದು. ಆದರೆ ಇತ್ತೀಚಿಗೆ ಇವರ ಪ್ರಾಬಲ್ಯ, ಪ್ರಭಾವಗಳೆಲ್ಲ ಕುಗ್ಗುತ್ತಿವೆ ಎನ್ನಬಹುದು. ಇವರ ಭರವಸೆಗಳಿಂದ ಸುಸ್ತಾಗಿ ಹೋಗಿದ್ದೇವೆ ಎನ್ನುತ್ತಾರೆ ಮುನಿಸ್ವಾಮಿ ಮತ್ತು ಶಣ್ಮುಗಂ ಎಂಬ ಭಾರತ್ ಚಿನ್ನದ ಗಣಿ ಲಿಮಿಟೆಡ್ ನ ಮಾಜಿ ಉದ್ಯೋಗಿಗಳು. ಇದು ಚುನಾವಣೆಯ ವಿಷಯವಾಗಿಲ್ಲದಿರಬಹುದು. ಆದರೆ ಚಿನ್ನದ ಗಣಿ ಮುಚ್ಚಿರುವುದರಿಂದ ಅಲ್ಲಿನ ಉದ್ಯೋಗಿಗಳಿಗೆ ಪುವರ್ವಸತಿ ಕಲ್ಪಿಸದಿರುವುದು ಮತ್ತು ಆ ಪ್ರದೇಶದಲ್ಲಿ ಆಗಿರುವ ಕುಂಠಿತ ಅಭಿವೃದ್ಧಿ ಜನರಿಗೆ ಅಸಮಾಧಾನ ತಂದಿದೆ.

ಬಿಜಿಎಂಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸ್ತುತ ಮರಿಕುಪ್ಪಮ್ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿರುವ ಮುನಿಸ್ವಾಮಿಗೆ ಇನ್ನೂ ಬಾಕಿ ವೇತನ ಬಂದಿಲ್ಲ. 2011ರಿಂದ ಅದಕ್ಕಾಗಿ ಕಾಯುತ್ತಿದ್ದಾರೆ. ಚಿನ್ನದ ಗಣಿ ಉದ್ಯಮ ಉತ್ತುಂಗದಲ್ಲಿದ್ದಾಗ ಸುಮಾರು 30,000 ಮಂದಿ ನೌಕರರಿದ್ದರು. ಅದು ಮುಚ್ಚುವ ಹೊತ್ತಿಗೆ ನೌಕರರ ಸಂಖ್ಯೆ 3,800 ನೌಕರರಾದರು. ಕೆಜಿಎಫ್ ಮತ್ತು ಬಂಗಾರಪೇಟೆಯ ಆರ್ಥಿಕತೆ ಸಂಪೂರ್ಣವಾಗಿ ಬಿಜಿಎಂಎಲ್ ನ್ನು ನಂಬಿಕೊಂಡಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಮುನಿಸ್ವಾಮಿ.

ಬಿಜಿಎಂಎಲ್ ಟೌನ್ ಷಿಪ್ ನಲ್ಲಿ ವಾಸಿಸುತ್ತಿರುವ ಸುಮಾರು 12,000 ಕುಟುಂಬಗಳಿಗೆ ಸರ್ಕಾರದ ಕೊಡುಗೆಯಾಗಿ ಟೈಟಲ್ ಡೀಡ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಇದುವರೆಗೆ ಸರ್ಕಾರ ಈಡೇರಿಸಿಲ್ಲ. ಇದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎನ್ನುತ್ತಾರೆ ಬಿಜಿಎಂಎಲ್ ನ ಮಾಜಿ ಎಂಜಿನಿಯರ್ ದಾಸ್ ಚಿನ್ನಸವರಿ. ಇವರು ಈಗ ಕೆಜಿಎಫ್ ನಾಗರಿಕ ರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com