ಕರ್ನಾಟಕ ವಿಧಾನಸಭೆ ಚುನಾವಣೆ: ಚಿತ್ರದುರ್ಗದ ಲಂಬಾಣಿ ತಾಂಡಾದವರ ಮುಖದಲ್ಲಿ ನಗು

ಜಿಲ್ಲೆಯ ಕುಗ್ರಾಮದಲ್ಲಿ ವಾಸಿಸುತ್ತಿರುವ ಲಂಬಾಣಿ ನಾಯಕ ಜನಾಂಗದವರ ಬದುಕು ನೋಡಿದರೆ...
ರಸ್ತೆ, ಕುಡಿಯುವ ನೀರಿನಿಂದ ಹಿಡಿದು ವಿದ್ಯಾಭ್ಯಾಸದವರೆಗೆ ಚಿತ್ರದುರ್ಗದ ಲಂಬಾಣಿ ತಾಂಡಾಗಳಿಗೆ ಸರ್ಕಾರ ಸೌಕರ್ಯ ಒದಗಿಸಿದೆ.
ರಸ್ತೆ, ಕುಡಿಯುವ ನೀರಿನಿಂದ ಹಿಡಿದು ವಿದ್ಯಾಭ್ಯಾಸದವರೆಗೆ ಚಿತ್ರದುರ್ಗದ ಲಂಬಾಣಿ ತಾಂಡಾಗಳಿಗೆ ಸರ್ಕಾರ ಸೌಕರ್ಯ ಒದಗಿಸಿದೆ.
Updated on

ಚಿತ್ರದುರ್ಗ: ಜಿಲ್ಲೆಯ ಕುಗ್ರಾಮದಲ್ಲಿ ವಾಸಿಸುತ್ತಿರುವ ಲಂಬಾಣಿ ನಾಯಕ ಜನಾಂಗದವರ ಬದುಕು ನೋಡಿದರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಲ್ಲಿನ ತಾಂಡಾ ಸಮುದಾಯದವರಿಗೆ 40 ಪಕ್ಕಾ ಮನೆಗಳು ಸಿಕ್ಕಿದ್ದು ಶುದ್ಧೀಕರಿಸಿದ ಕುಡಿಯುವ ನೀರು ಮನೆಬಾಗಿಲಿಗೆ ಬರುತ್ತದೆ. ಮಕ್ಕಳು ಹತ್ತಿರದ ಸರ್ಕಾರಿ ಶಾಲೆಗಳಿಗೆ ಹೋಗುತ್ತಾರೆ.

ಇನ್ನು ಕೆಲ ಗ್ರಾಮಗಳಲ್ಲಿ ಜನರಿಗೆ ನೀರಾವರಿ ಭೂಮಿಯಿದೆ. ಕೆಲವರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ಇನ್ನು ಕೆಲವರು ಸರ್ಕಾರದ ಯೋಜನೆಗಳು ಮತ್ತು ತಮಗೆ ಹಂಚಿಕೆಯಾಗುವುದನ್ನು ಅದೃಷ್ಟವನ್ನು ನಂಬಿಕೊಂಡು ಬದುಕುತ್ತಿದ್ದಾರೆ.

ಕರ್ನಾಟಕದ ಬುಡಗಟ್ಟು ಜನಾಂಗದಲ್ಲಿ ಒಂದಾಗಿರುವ ಲಂಬಾಣಿಯರು ಚಿತ್ರದುರ್ಗದಲ್ಲಿ ಶೇಕಡಾ8ರಿಂದ 12ರಷ್ಟು ಮಂದಿಯಿದ್ದಾರೆ. ಇಲ್ಲಿನ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಲಂಬಾಣಿ ಸಮುದಾಯದವರ ಪ್ರಭಾವ ಹೆಚ್ಚಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಲಂಬಾಣಿ ಸಮುದಾಯದವರ ಬದುಕು ಸುಗಮವಾಗುತ್ತಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಸುಶೀಲ ಎನ್ನುವವರು. ಇಲ್ಲಿನ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಟ್ಯೂಬ್ ಲೈಟ್, ಕುಡಿಯುವ ನೀರು, ಶೌಚಾಲಯ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಆದರೆ ನೀರಾವರಿ ಭೂಮಿ ಇಲ್ಲಿನ ಕೊರತೆಯಾಗಿದೆ. ಇಲ್ಲಿನ ಗ್ರಾಮಸ್ಥರು ಹೆಚ್ಚಿನವರು ದಿನಕೂಲಿ ನೌಕರರಾಗಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗಳು ಹಿರಿಯೂರು, ಹೊಸದುರ್ಗ ಮತ್ತು ಚಿತ್ರದುರ್ಗ ತಾಲ್ಲೂಕುಗಳಿಗೆ ಭೇಟಿ ನೀಡಿದ್ದು ಇಲ್ಲಿನ ತಾಂಡಾ ಸಮುದಾಯದವರನ್ನು ಭೇಟಿ ಮಾಡಿದರು. ತಾವರೆಕೆರೆಯಿಂದ ಕಾತನಾಯಕನಹಳ್ಳಿಯವರೆಗೆ ಸುಮಾರು 25 ಕಿಲೋ ಮೀಟರ್ ರಸ್ತೆಯಲ್ಲಿ ಡಾಂಬರು ಹಾಕಿ ಸಂಚಾರಕ್ಕೆ ಸುಗಮವಾಗಿದೆ.

ಹಿರಿಯೂರು ತಾಲ್ಲೂಕಿನ ತಾಂಡಾ ಸಮುದಾಯದವರು ತಮಗೆ ಸಿದ್ದರಾಮಯ್ಯ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದೆ ಎನ್ನುತ್ತಾರೆ.ಆದರೆ ಇತರ ಹಿಂದುಳಿದ ಸಮುದಾಯ ಮತ್ತು ಹಿಂದುಳಿದ ಜಾತಿಯವರಿಗೆ ಅಷ್ಟೊಂದು ಸಹಾಯವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿಲ್ಲ ಎಂದು ಹಿರಿಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಫಲಾನುಭವಿ ಯೋಜನೆಗಳು ಪರಿಶಿಷ್ಟ ಪಂಗಡದ ಪರವಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ. ಇಲ್ಲಿನ ಗೊಲ್ಲರು ಸಹ ಸರ್ಕಾರದ ಬಗ್ಗೆ ಅಷ್ಟು ಉತ್ತಮ ಅಭಿಪ್ರಾಯ ಹೊಂದಿಲ್ಲ. ಎಲ್ಲಾ ಅಭಿವೃದ್ಧಿ ಸೌಕರ್ಯಗಳನ್ನು ಸರ್ಕಾರ ಲಂಬಾಣಿ ತಾಂಡಾಗಳಿಗೆ ನೀಡಿದೆ ಹೊರತು ನಮಗೆ ಏನೂ ಕೊಟ್ಟಿಲ್ಲ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com