ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ತಯಾರಿಸಿದ್ದ ಮೂವು ವೀಡಿಯೋ ಜಾಹೀರಾತುಗಳನ್ನು ಮಾದ್ಯಮ ದೃಢೀಕರಣ ಮತ್ತು ನಿರ್ವಹಣಾ ಸಮಿತಿ (ಎಂಸಿಎಂಸಿ) ಶುಕ್ರವಾರ ನಿಷೇಧಿಸಿದೆ. ಜೆಪಿಸಿಸಿ ನೀಡಿದ್ದ ದೂರಿನ್ನ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಜಾಹೀರಾತು ತಯಾರು ಪ್ರಸಾರ ಮಾಡಲಾಗಿದೆ ಎಂದಿರುವ ಎಂಸಿಎಂಸಿ ಜಾಹೀರಾತು ಪ್ರಸಾರಕ್ಕೆ ತಡೆ ನಿಡಿದೆ.
ಎಂಎಲ್ಸಿ ವಿ ಎಸ್ ಉಗ್ರಪ್ಪ ಕೆಪಿಸಿಸಿ ಪರವಾಗಿ ಸಲ್ಲಿಸಿದ್ದ ದೂರಿನ ಮೇಲೆ ಜಾಹೀರಾತನ್ನು ನಿಷೇಧಿಸಲಾಗಿದ್ದು ಜಾಹೀರಾತುಗಳು ಚುನಾವಣಾ ನೀತಿಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು.
"ಜನ ವಿರೋಧಿ ಸರ್ಕಾರ", "ವಿಫಲ ಸರ್ಕಾರ" ಮತ್ತು "ಮೂರು ಭಾಗ್ಯ" ಎನ್ನುವ 35 ಸೆಕೆಂಡ್ ಹಾಗು '50 ಸೆಕೆಂಡ್ ಗಲ ಜಾಹೀರಾತಿಗೆ ನಿಷೇಧ ಹೇರಲಾಗಿದೆ.
ನಿಷೇಧಕ್ಕೊಳಗಾದ ಮೂರೂ ಜಾಹೀರಾತನ್ನು ಪ್ರಸಾರ ಮಾಡಲು ಬಿಜೆಪಿ ರಾಜ್ಯ ಕಚೇರಿ ಕಾರ್ಯದರ್ಶಿ ಗಣೇಶ್ ಯಾಜಿಯವರಿಗೆ ಏಪ್ರಿಲ್ 22 ರಂದು ಅನುಮತಿ ನೀಡಲಾಗಿತ್ತು.
"ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಈ ಜಾಹೀರಾತು ಮಾಡೊದೆ. ಕರ್ನಾಟಕದ ವಿವಿಧ ಟಿವಿ ಚಾನಲ್ ಗಳಲ್ಲಿ ಈ ಜಾಹೀರಾತು ಸರಣಿ ಪ್ರಸಾರವಾಗುತ್ತಿದ್ದು ಇದನ್ನು ತಕ್ಷಣ ನಿಷೇಧಿಸಬೇಕು" ಉಗ್ರಪ್ಪ ದೂರಿನಲ್ಲಿ ಹೇಳಿದ್ದರು.
ಬರುವ ಮೇ 12 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ.