ಚಿತ್ತಾಪುರ ತಾಲ್ಲೂಕಿನ ದಂಡೊತಿ ಗ್ರಾಮದಲ್ಲಿರುವ ಹಳೆಯ ವಸತಿಹೀನ ಕೋಟೆ ಕಟ್ಟಡ.
ಚಿತ್ತಾಪುರ ತಾಲ್ಲೂಕಿನ ದಂಡೊತಿ ಗ್ರಾಮದಲ್ಲಿರುವ ಹಳೆಯ ವಸತಿಹೀನ ಕೋಟೆ ಕಟ್ಟಡ.

ಚಿತ್ತಾಪುರ ತಾಲ್ಲೂಕು: ಇಲ್ಲಿ ಹನಿ ನೀರು ಕೂಡ ಅಮೂಲ್ಯ

ಬಿಸಿಲ ನಾಡು ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಎಂಬ ಗ್ರಾಮ, ಶತಮಾನಗಳ ...

ಚಿತ್ತಾಪುರ: ಬಿಸಿಲ ನಾಡು ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಎಂಬ ಗ್ರಾಮ, ಶತಮಾನಗಳ ಹಳೆಯ ಮನೆಗಳು, ಕಲ್ಲಿನಿಂದ ಮಾಡಿರುವ ಮನೆಗಳು. ಇಲ್ಲಿ ಝರೀನಾ ಎಂಬ ಇಳಿವಯಸ್ಸಿನ ಅಜ್ಜಿ ತನ್ನ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ 200 ವರ್ಷಗಳ ಹಳೆಯ ಎತ್ತರದ ಮನೆಯಲ್ಲಿ ವಾಸಿಸುತ್ತಿದ್ದಾಳೆ.

ವಿದೇಶದ ಇಂಗ್ಲೆಂಡಿನಲ್ಲಿರುವ ಪರ್ವತದ ಶೀತ ಪ್ರದೇಶದಲ್ಲಿರುವ ಕಲ್ಲುಗಳಿಂದ ನಿರ್ಮಿಸಿರುವ ಬೃಹತ್ ಗೋಡೆಗಳನ್ನು ಹೋಲುವ ಮಾದರಿಯ ಕಟ್ಟಡಗಳಿವೆ.ದಕ್ಷಿಣ ಭಾರತೀಯ ಮನೆಗಳಾದ ದೊಡ್ಡ ದೊಡ್ಡ ಕೋಣೆಗಳು ಮತ್ತು ದುಬಾರಿ ಅಂಗಳಗಳನ್ನು ಈ ಮನೆಗಳು ನೆನಪಿಸುತ್ತವೆ. ಒಂದು ವಾಸ್ತುಶಿಲ್ಪದಂತೆ ಅದ್ಭುತವಾಗಿ ಕಾಣುವ ಈ ಮನೆಗಳಲ್ಲಿ ಜನರು ವಾಸಿಸುತ್ತಾರೆ, ಜೀವನ ಮಾಡುತ್ತಾರೆ. ಆದರೆ ಇವರೆಲ್ಲರ ಚಿಂತೆ ನೀರಿನದ್ದು. ಇಲ್ಲಿನ ಪರಿಸ್ಥಿತಿ, ಸಮಸ್ಯೆಗಳಿಗೆ ಹೊಂದಿಕೊಂಡು ಜನರು ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಕ್ಷೇತ್ರ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಕಂಡುಬಂದ ದೃಶ್ಯವಿದು. ಇಲ್ಲಿ ನೀರು 2-3 ದಿನಕ್ಕೊಮ್ಮೆ ಪೈಪುಗಳಲ್ಲಿ ಬರುತ್ತದೆ ಎಂದು ಅಜ್ಜಿ ಝರೀನಾ ಮತ್ತು ಆಕೆಯ ಸೊಸೆ ಹೇಳುತ್ತಾರೆ. ದೂರು ಸಲ್ಲಿಸಿದವರಿಗೆ ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಆಡಳಿತವಿದೆ.

ಶತಮಾನದಷ್ಟು ಹಳೆಯ ಮನೆಯಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಶೆರ್ ಅಲಿ, ಪ್ರತಿಯೊಬ್ಬರ ಮನೆ ಪ್ರವೇಶದ್ವಾರದಲ್ಲಿ ಪೈಪ್ ಗಳ ಸಂಪರ್ಕವಿದ್ದು, ಪಂಚಾಯತ್ ನಿಂದ ಕುಡಿಯುವ ನೀರು ಬಂದಾಗ ಹಿಡಿದಿಟ್ಟುಕೊಳ್ಳಬೇಕು. ಅದು ಕೂಡ 10ರಿಂದ 15 ನಿಮಿಷಗಳವರೆಗೆ ಮಾತ್ರ ನೀರು ಬರುವುದು. ಇನ್ನು ಬೇರೆ ಕೆಲಸಗಳಿಗೆ ನೀರು ಬಳಸಿಕೊಳ್ಳಲು ಗ್ರಾಮದಲ್ಲಿ ಬೋರ್ ವೆಲ್ ಸಂಪರ್ಕವಿದೆ.

ಮೊಹಮ್ಮದ್ ಮತ್ತು ಝರೀನಾಗೆ ತಮ್ಮ ಕ್ಷೇತ್ರದಲ್ಲಿ ಸದ್ಯದಲ್ಲಿಯೇ ಚುನಾವಣೆಯಿದೆ ಎಂಬುದು ಗೊತ್ತಿದೆ. ಆದರೆ ಯಾರು ಅಭ್ಯರ್ಥಿಗಳಿದ್ದಾರೆ ಎಂಬುದು ಗೊತ್ತಿಲ್ಲ. ಅಲ್ಲದೆ ಶಾಸಕರಾದವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬ ವಿಶ್ವಾಸ ಕೂಡ ಅವರಲ್ಲಿಲ್ಲ. ಚಿತ್ತಾಪುರ ಕ್ಷೇತ್ರದ ಈಗಿನ ಶಾಸಕ ಸಚಿವ ಪ್ರಿಯಾಂಕ ಖರ್ಗೆಯಾಗಿದ್ದು, ಅವರು ವಾಲ್ಮೀಕಿ ನಾಯಕ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಪಂಚಾಯತ್ ಬಹಳ ಪ್ರಬಲವಾಗಿದೆ.

ಪತ್ರಿಕೆಯ ಪ್ರತಿನಿಧಿ ಅಲ್ಲಿನ ಜನರನ್ನು ಮಾತನಾಡಿಸುತ್ತಿದ್ದಾಗ ಆಗಷ್ಟೇ ಹೊಲದ ಕೆಲಸದಿಂದ ಬಂಡಪ್ಪ ಕೆ ಪಂಚೂರ್ ಬಂದಿದ್ದರು. ಇಲ್ಲಿ ಬಹುತೇಕ ಮಂದಿ ಪಂಪ್ ಗೆ ಸ್ವಿಚ್ ಹಾಕಿ ಬೋರ್ ವೆಲ್ ನ ನೀರನ್ನೇ ನಂಬಿಕೊಂಡಿದ್ದಾರೆ. ಇಲ್ಲದಿದ್ದರೆ ಅರ್ಧ ಇಂಚ್ ಪೈಪ್ ನಲ್ಲಿ 15 ನಿಮಿಷಗಳ ಕಾಲ ಬಂದ ನೀರು ಎಲ್ಲಿಗೆ ಸಾಕಾಗುತ್ತದೆ? ಕಾಗಿನ ನದಿಯಿಂದ ಇಲ್ಲಿಗೆ ಹೆಚ್ಚು ದೂರವಿಲ್ಲ. ಆದರೂ ಈ ಗ್ರಾಮಕ್ಕೆ ನೀರಿನದ್ದೇ ಸಮಸ್ಯೆಯಾಗಿದೆ. ನದಿಯ ನೀರು ತರಲು ಪಂಚಾಯತ್ ಹಣ ಖರ್ಚು ಮಾಡಲಿಲ್ಲ ಎಂದು ಬಶೀರ್ ಮಿಯಾ ಮೊಟಿ ಪಟೇಲ್ ಹೇಳುತ್ತಾರೆ. ಪಕ್ಕದ ಬಿಗೊಡಿ ಹಳ್ಳಿಗೆ ದಿನಾ ಪಂಚಾಯತ್ ನಿಂದ ನೀರು ಬರುತ್ತದೆ.

 ಈ ಮಧ್ಯೆ ಹೀಗೆ ತಮ್ಮೂರಿನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಅಲ್ಲಿ ಜನ ಸೇರಿರುವುದನ್ನು ನೋಡಿ ಒಬ್ಬ ವಯೋವೃದ್ಧ ಮತ್ತು ಯುವಕ ಬಂದರು. ನಾವು ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ಹೇಳುತ್ತಿದ್ದೇವೆ ಎಂದರು ಬಂಡಪ್ಪ. ಪಂಚಾಯತ್ ನ ಹಿರಿಯ ವ್ಯಕ್ತಿ ಬಂಡಪ್ಪ ಅವರ ಸೋದರ ಎಂದು ಬಶೀರ್ ಹೇಳಿದರು.

ಇಲ್ಲಿ ನೀರಿನ ಬವಣೆ ಹೆಚ್ಚಾಗಿದೆ ಎನ್ನುತ್ತಾರೆ ಇಲ್ಯಾಸ್ ಪಠಾಣ್ ಎಂಬ ಪಂಚಾಯತ್ ಮಾಜಿ ಸದಸ್ಯ. 15 ವರ್ಷಗಳ ಹಿಂದೆ ಇಲ್ಲಿ ಜನಸಂಖ್ಯೆ ತೀರಾ ಕಡಿಮೆಯಾಗಿತ್ತು. ಆಗ ಜನರಿಗೆಲ್ಲ ಸಾಕಾಗುವಷ್ಟು ನೀರು ಸಿಗುತ್ತಿತ್ತು. ಇಂದು ದೊಡ್ಡ ಪೈಪ್ ಗಳು ಮತ್ತು ಗಟ್ಟಿಯಾದ ಪಂಪ್ ಗಳ ಅವಶ್ಯಕತೆಯಿದೆ ಎನ್ನುತ್ತಾರೆ ಅವರು.



ಇಲ್ಲಿನ ನೀರಿನ ಸಮಸ್ಯೆಯಿಂದಾಗಿ ಕಬ್ಬು, ಭತ್ತ ಬೆಳೆಯಲಾಗದೆ ರೈತರು ತೊಗರಿಬೇಳೆ ಮತ್ತು ಮುಸುಕಿನ ಜೋಳ ಬೆಳೆಯುತ್ತಾರೆ. ಮಾಜಿ ಗ್ರಾಮ ಪಂಚಾಯತ್ ಕೌನ್ಸಿಲ್ ಸಿಮೆಂಟ್ ಫ್ಯಾಕ್ಟರಿಗಳ ನಿರ್ಮಾಣಕ್ಕೆ ಅನುಮತಿ ನೀಡಿರುವುದರಿಂದ ಸಹ ನೀರಿಗೆ ಸಮಸ್ಯೆಯುಂಟಾಗಿದೆ. ಕಾಗಿನ ನದಿಗೆ ಕಟ್ಟಲಾಗಿದ್ದ ಸುಮಾರು 40 ವರ್ಷಗಳ ಹಳೆಯ ಸೇತುವೆ ಮಳೆಗೆ ಕಾಣೆಯಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com