ಚಿಹ್ನೆ ಬದಲಾವಣೆ: ಹಿರೇಕೆರೂರು ಕೆಜಿಪಿ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ

ತಾನು ಕೇಳಿದ್ದ ಚಿಹ್ನೆ ತನಗೆ ದೊರಕಿಲ್ಲ ಎಂದು ಮನನೊಂದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಅಭ್ಯರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಚಿಹ್ನೆ ಬದಲಾವಣೆ: ಹಿರೇಕೆರೂರು ಕೆಜಿಪಿ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ
ಚಿಹ್ನೆ ಬದಲಾವಣೆ: ಹಿರೇಕೆರೂರು ಕೆಜಿಪಿ ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ
Updated on
ಹಾವೇರಿ: ತಾನು ಕೇಳಿದ್ದ ಚಿಹ್ನೆ ತನಗೆ ದೊರಕಿಲ್ಲ ಎಂದು ಮನನೊಂದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಅಭ್ಯರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ಕೆಜೆಪಿ ಅಭ್ಯರ್ಥಿ ಹರೀಶ ಇಂಗಳಗೊಂದಿ(35) ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತಕ್ಷಣವೇ ಹರೀಶ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕೆಜೆಪಿ ಪಕ್ಷದ ಚಿಹ್ನೆ ತೆಂಗಿನಕಾಯಿ ಗುರುತನ್ನು ನೀಡುವ ಬದಲಿಗೆ ಚುನಾವನಾಧಿಕಾರಿಗಳು ತೆಂಗಿನಮರದ ಚಿತ್ರ ನಿಡಿದ್ದಾರೆ. ಎಂದು ಹರೀಶ್ ಶನಿವಾರ  ಪತ್ರಿಕಾಗೋಷ್ಥಿಯಲ್ಲಿ ಆರೋಪಿಸಿದ್ದರು.
ಸೋಮವಾರ ಇದೇ ವಿಚಾರವಾಗಿ ಬೇಸರಗೊಂಡ ಹರಿಶ್ ನಿದ್ರೆ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇತ್ತ ವಿವಾದಕ್ಕೊಳಗಾಗಿರುವ ಚಿಹ್ನೆಯನ್ನು ನೀಡಲು ಬರುವುದಿಲ್ಲ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com