ಅತಿಯಾದ ಗೋಮಾಂಸ ಭಕ್ಷಣೆಯಿಂದಾಗಿ ಕೇರಳದಲ್ಲಿ ಪ್ರವಾಹ: ಬಿಜೆಪಿ ಶಾಸಕ ಬಸನಗೌಡ

ಕೇರಳದಲ್ಲಿ ಮಹಾ ಜಲಪ್ರಳಯ ಸಂಭವಿಸಲು ಅಲ್ಲಿ ಅತಿಯಾದ ಗೋಮಾಂಸ ಭಕ್ಷಣೆ ಕಾರಣ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ: ಕೇರಳದಲ್ಲಿ ಮಹಾ ಜಲಪ್ರಳಯ ಸಂಭವಿಸಲು ಅಲ್ಲಿ ಅತಿಯಾದ ಗೋಮಾಂಸ ಭಕ್ಷಣೆ ಕಾರಣ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಹಿಂದೂ ಭಾವನೆಗಳನ್ನು ಕೆರಳಿಸಿದರೆ ಧರ್ಮವು ಅವರನ್ನು ಶಿಕ್ಷಿಸುತ್ತದೆ. ಉದಾಹರಣೆಗೆ ಕೇರಳದಲ್ಲಿ ಏನಾಯಿತು ನೋಡಿ. ದೇವರ ನಾಡು ಎಂದು ಕರೆಯಲ್ಪಡುವ ಪ್ರದೇಶದಲ್ಲಿ ಬಹಿರಂಗವಾಗಿ ದನವನ್ನು ಕತ್ತರಿಸಲಾಗುತ್ತದೆ. ಗೋಮಾಂಸ ಹಬ್ಬ ಆಚರಿಸಿದ ಒಂದು ವರ್ಷದೊಳಗೆ ಆ ರಾಜ್ಯದಲ್ಲಿ ಪ್ರವಾಹ ತಲೆದೋರಿದೆ ಎಂದು ಯತ್ನಾಳ್ ಹೇಳಿದ್ದಾರೆ. 
ಕಳೆದ ವರ್ಷ ಜೂನ್ ತಿಂಗಳಲ್ಲಿ ಕೇರಳದ ಶಾಸಕರು, ಅಕ್ರಮ ಗೋ ಸಾಗಣೆ ಮತ್ತು ಹತ್ಯೆಯನ್ನು ನಿಷೇಧಿಸುವ ಕೇಂದ್ರ ಅಧಿಸೂಚನೆಯ ವಿರುದ್ಧ ಪ್ರತಿಭಟಿಸಲು ವಿಧಾನಸಭೆಯ ಕ್ಯಾಂಟೀನ್ ನಲ್ಲಿ ಬೀಫ್ ಫೆಸ್ಟಿವಲ್ ಆಯೋಜಿಸಿದ್ದರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com