ಸತೀಶ್ ಕಾಲು ಕಸ ಆಗಲು ಹೆಬ್ಬಾಳ್ಕರ್ ಲಾಯಕ್ಕಿಲ್ಲ-ರಮೇಶ್ ಜಾರಕಿಹೊಳಿ: ಸತೀಶ್ ನನ್ನ ಮಹಾಗುರು ಲಕ್ಷ್ಮಿ ತಿರುಗೇಟು!

ಮಾಜಿ ಸಚಿವ ಹಾಗೂ ಸಹೋದರ ಶಾಸಕ ಸತೀಶ್ ಜಾರಕಿ ಹೊಳಿ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ...
ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ
ಬೆಳಗಾವಿ: ಮಾಜಿ ಸಚಿವ ಹಾಗೂ ಸಹೋದರ ಶಾಸಕ ಸತೀಶ್ ಜಾರಕಿ ಹೊಳಿ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ತಿರುಗಿ ಬಿದ್ದಿರುವ  ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸಹೋದರರು ಹರಿಹಾಯ್ದಿದ್ದಾರೆ. ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಂದೂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್  ತಹಶೀಲ್ದಾರ್ ಕಚೇರಿ ಎದುರು ರಾತ್ರಿ ಧರಣಿ ನಡೆಸಿದ್ದರು.
ಈ ಸಂಬಂಧ ಕಿಡಿ ಕಾರಿದ್ದ ರಮೇಶ್ ಜಾರಕಿಹೊಳಿ,  ನೀವು ಹೊಸ ಶಾಸಕರು, ಬಹಳ ಜನರು ನೋಡುತ್ತಿರುತ್ತಾರೆ, ಅದನ್ನು ಮರೆಯಬೇಡಿ, ಸತೀಶ್ ಜಾರಕಿಹೊಳಿ ಅವರ ಕಾಲಿನ ಕಸ ಆಗಲು ಲಕ್ಷ್ಮಿ ಹೆಬ್ಬಾಳ್ಕರ್ ಲಾಯಕ್ಕಿಲ್ಲ ಎಂದು ಹರಿಹಾಯ್ದಿದ್ದಾರೆ.
ಪಿಎಲ್‍ಡಿ ಬ್ಯಾಂಕ್‍ಗೆ 20 ವರ್ಷದಿಂದ ರಾಜಕೀಯ ಮುಕ್ತ ಚುನಾವಣೆ ನಡೆದಿದೆ. ಸಚಿವರು, ಶಾಸಕರು ಯಾರೊಬ್ಬರು ಪಾಲ್ಗೊಂಡಿಲ್ಲ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ನಿರ್ದೇಶಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಗೊಂದಲ ವಿಚಾರದಲ್ಲಿ ಪ್ರತಿಕ್ರಿಯಿಸಿ ಪಿಎಲ್‍ಡಿ ಬ್ಯಾಂಕ್ ಚುನಾವಣೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ, ಅಧಿಕಾರಿಗಳ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ತಿಳಿಸಿದ್ದಾರೆ.
ಇನ್ನೂ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್ , ಶಾಸಕ ಸತೀಶ್ ಜಾರಕಿಹೊಳಿ ದೊಡ್ಡವರು ಅವರಿಂದ ತುಂಬ ಕಲಿಯಬೇಕು, ಅವರೇ ನನಗೆ ಆದರ್ಶ, ಮಹಾ ಗುರು ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ..
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ವಿಚಾರದಲ್ಲಿ ಕೆಲ ಶಕ್ತಿಗಳು ಪ್ರತಿಭಟನೆ ವೇಳೆ ಗಲಾಟೆಗೆ ಯತ್ನ ನಡೆಸಿದವು. ತಹಶೀಲ್ದಾರ್ ಏಕಾಏಕಿ ಚುನಾವಣೆ ಮುಂದೂಡಿದ್ದಾರೆ. ಈ ಮೂಲಕ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ನ 9 ಜನ ನಿರ್ದೇಶಕರು ನನ್ನ ಜೊತೆಗಿದ್ದಾರೆ. ತಹಶೀಲ್ದಾರ್ ತಪ್ಪು ಮಾಡಿದ್ರೆ ಅವರನ್ನು ಅಮಾನತು ಮಾಡಬೇಕು, ಅಲ್ಲಿಯವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ. ನ್ಯಾಯ ಸಿಗದಿದ್ರೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com