ಸಂಪುಟ ವಿಸ್ತರಣೆ: ರಾಮಲಿಂಗಾರೆಡ್ಡಿ, ಎಂ.ಬಿ ಪಾಟೀಲ್ ಗೆ ಸ್ಥಾನ?

ಡಿಸೆಂಬರ್ 22 ರಂದು ನಡೆಯುವ ಸಂಪುಟ ವಿಸ್ತರಣೆಗೆ ಈಗಾಗಲೇ ಆಕಾಂಕ್ಷಿಗಳ ಲಾಭಿ ಶುರುವಾಗಿದೆ, ಕಾಂಗ್ರೆಸ್ ನ ಆರು.ಜೆಡಿಎಸ್ ನ ಎರಡು ಸ್ಥಾನಗಳು ...
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ
ಬೆಂಗಳೂರು: ಡಿಸೆಂಬರ್ 22 ರಂದು ನಡೆಯುವ ಸಂಪುಟ ವಿಸ್ತರಣೆಗೆ ಈಗಾಗಲೇ ಆಕಾಂಕ್ಷಿಗಳ ಲಾಭಿ ಶುರುವಾಗಿದೆ, ಕಾಂಗ್ರೆಸ್ ನ ಆರು.ಜೆಡಿಎಸ್ ನ ಎರಡು ಸ್ಥಾನಗಳು ಖಾಲಿಯಿವೆ,
ಮಾಜಿ ನೀರಾವರಿ ಸಚಿವ ಎಂಬಿ ಪಾಟೀಲ್, ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ,  ಆದರೆ ಕುರುಬ ಸಮುದಾಯದವರಾದ ಸಿಎಸ್ ಶಿವಳ್ಳಿ, ಮತ್ತು ಎಂಟಿಬಿ ನಾಗರಾಜ್ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಇವರಲ್ಲದೇ ಬಿ,ಸಿ ಪಾಟೀಲ್, ಅಮರೇಗೌಡ ಬಯ್ಯಾಪುರ, ರಹೀಂ ಖಾನ್, ತುಕಾರಾಂ ಮತ್ತು ಪರಮೇಶ್ವರ್ ನಾಯಕ್ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್ ತನ್ನ ಬಳಿ ಖಾಲಿ ಇರುವ ಎರಡು ಸ್ಥಾನಗಳನ್ನು ದಲಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ನೀಡಲು ಚಿಂತಿಸಿದೆ. ದಲಿತ ಸಮುದಾಯದ ಎಚ್.ಕೆ ಕುಮಾರ ಸ್ವಾಮಿ ಮತ್ತು ಅನ್ನದಾನಿ ಜೆಡಿಎಸ್ ನ ಪ್ರಮುಖ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ,  ಮುಸ್ಲಿಂ ಸಮುದಾಯದ ಬಿಎಂ ಫಾರೂಕ್ ಹೆಸರು ಕೇಳಿ ಬರುತ್ತಿವೆ, ಶಿರಾ ಶಾಸಕ ಸತ್ಯನಾರಾಯಣ ಕೂಡ ಕಣದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com