ವಿಧಾನಸಭೆ ಚುನಾವಣೆ ಸೋಲಿನ ನಂತರ ಎಚ್ಚೆತ್ತ ಬಿಜೆಪಿ: ಕಾಲ್ ಸೆಂಟರ್ ಆರಂಭ

ಪಂಚರಾಜ್ಯಗಳಲ್ಲಿ ಅನಿರೀಕ್ಷಿತ ಫಲಿತಾಂಶದಿಂದ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮವಾಗದಂತೆ ಕಾಳಜಿ ವಹಿಸಿರುವ ಬಿಜೆಪಿ, ಫಲಿತಾಂಶ ಹೊರಬಂದ ...
ನರೇಂದ್ರ ಮೋದಿ ರ್ಯಾಲಿಯಲ್ಲಿ ಬಿಜೆಪಿ ಬೆಂಬಲಿಗರು
ನರೇಂದ್ರ ಮೋದಿ ರ್ಯಾಲಿಯಲ್ಲಿ ಬಿಜೆಪಿ ಬೆಂಬಲಿಗರು
Updated on
ಬೆಂಗಳೂರು: ಪಂಚರಾಜ್ಯಗಳಲ್ಲಿ ಅನಿರೀಕ್ಷಿತ ಫಲಿತಾಂಶದಿಂದ ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮವಾಗದಂತೆ ಕಾಳಜಿ ವಹಿಸಿರುವ ಬಿಜೆಪಿ, ಫಲಿತಾಂಶ ಹೊರಬಂದ 24 ಗಂಟೆಯಲ್ಲೇ ತಯಾರಿ ನಡೆಸಿದೆ.
ಸೋಲಿನ ಅವಲೋಕನಕ್ಕೆ ಕೂರುವ ಸಮಯ ಇದಲ್ಲ ಎಂದು ರಾಜ್ಯ ಘಟಕಗಳಿಗೂ ಸೂಚನೆ ನೀಡಿರುವ ರಾಷ್ಟ್ರೀಯ ನಾಯಕರು, ಡಿ.15ರಿಂದ ದೇಶಾದ್ಯಂತ 100ಕ್ಕೂ ಹೆಚ್ಚು ಕಾಲ್​ಸೆಂಟರ್​ಗಳನ್ನು ತೆರೆದು ಸಂಘಟನೆ ಬಲವರ್ಧನೆ ಕೆಲಸ ಆರಂಭಿಸಲು ತಿಳಿಸಿದ್ದಾರೆ.
ರಾಜ್ಯದಲ್ಲಿ ಐದು ಕಾಲ್​ಸೆಂಟರ್​ಗಳ ಮೂಲಕ 54 ಸಾವಿರ ಬೂತ್​ಗಳಲ್ಲಿರುವ ಸುಮಾರು 4.5 ಲಕ್ಷ ಸದಸ್ಯರು, ರಾಜ್ಯ ಮಟ್ಟದವರೆಗೆ ಸುಮಾರು 5 ಸಾವಿರ ಪದಾಧಿಕಾರಿಗಳ ಕಾರ್ಯದ ಮೇಲುಸ್ತುವಾರಿ ನೋಡಲಾಗುತ್ತದೆ.
ಸಂಘಟನೆ ಮೂಲಮಂತ್ರ: ಯಾವುದೇ ಚುನಾವಣೆಯಲ್ಲಿ ಬಿಜೆಪಿ ಮೂರು ಅಂಶಗಳ ಸೂತ್ರ ಅನುಸರಿಸುತ್ತಿದೆ. ಮೊದಲನೆಯದು ಕೇಡರ್ (ಕಾರ್ಯಕರ್ತರು), ಎರಡನೆಯದ್ದು ಕ್ಯಾಂಪೇನ್ (ಪ್ರಚಾರ), ಮೂರನೇಯದು ಪ್ರಧಾನಿ ಮೋದಿ ಅಲೆ.
ಪ್ರತಿ ಚುನಾವಣೆಯಲ್ಲೂ ಬಿಜೆಪಿ ಕಾಲ್​ಸೆಂಟರ್ ಆರಂಭಿಸುತ್ತದೆ. ಬೆಂಗಳೂರಿನಲ್ಲಿ ಇರುತ್ತಿದ್ದ ಕಾಲ್​ಸೆಂಟರ್ ವ್ಯವಸ್ಥೆಯನ್ನು 5 ಕ್ಲಸ್ಟರ್​ಗಳಾಗಿ ವಿಕೇಂದ್ರೀಕರಿಸಿದೆ. ಬೆಂಗಳೂರಿನ ಜತೆಗೆ ಶಿವಮೊಗ್ಗ, ಕಲಬುರಗಿ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಕಾಲ್​ಸೆಂಟರ್ ಆರಂಭವಾಗಲಿವೆ.
 4-5 ಲೋಕಸಭೆ ಕ್ಷೇತ್ರಕ್ಕೆ ಒಂದು ಕಾಲ್​ಸೆಂಟರ್ ಇರಲಿದೆ. ಪ್ರತಿ ಕೇಂದ್ರದಲ್ಲೂ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ಎರಡು ಪಾಳಿಯಲ್ಲಿ ಐದೂ ಕೇಂದ್ರ ಸೇರಿ ಒಟ್ಟು 600 ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. ಬಿಜೆಪಿ ಐಟಿ ಸೆಲ್, ಸಾಮಾಜಿಕ ಜಾಲತಾಣ ವಿಭಾಗ, ಯುವ ಮೋರ್ಚಾ ಕಾರ್ಯಕರ್ತರು, ಟೆಕ್ಕಿಗಳು ಡಿ.15ರಿಂದ 2019ರ ಜೂನ್ 15ರವರೆಗೆ ಸ್ವಯಂಸೇವಕರಾಗಿ ಶ್ರಮಿಸಲಿದ್ದಾರೆ.
ಕಾಲ್​ಸೆಂಟರ್​ಗಳಿಂದ ಪ್ರಮುಖವಾಗಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೇಂದ್ರದಿಂದ ಬಂದ ಸೂಚನೆಗಳನ್ನು ತಿಳಿಸುವ ಕೆಲಸ ಮಾಡಲಾಗುತ್ತದೆ. ಚುನಾವಣೆ ಇನ್ನೆರಡು ತಿಂಗಳು ಇರುವಂತೆ ಕೇಂದ್ರದ ಉಜ್ವಲಾ, ಉಜಾಲಾ, ಸ್ಟಾರ್ಟಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಜನಧನ್, ಮುದ್ರಾದಂತಹ ಯೋಜನೆ ಫಲಾನುಭವಿಗಳ ಜಿಲ್ಲಾವಾರು ಸಮಾವೇಶಗಳ ಫಾಲೋಅಪ್ ಮಾಡಲಾಗುತ್ತದೆ.
2 ವರ್ಷ ಹಿಂದೆ ನಡೆದ ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕದ 80 ಲಕ್ಷ ಜನ ನೋಂದಣಿಯಾಗಿದ್ದು, ಪ್ರದೇಶ, ಉದ್ಯೋಗ, ವಯೋಮಾನವಾರು ಆಯ್ಕೆ ಮಾಡಿ ಅಂಥವರನ್ನು ಸಂರ್ಪಸಿ ಕೇಂದ್ರ ಸರ್ಕಾರದ ಕುರಿತು ಅಭಿಪ್ರಾಯ ಪಡೆಯಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com