ಕುದಿಯುತ್ತಿರುವ ಸಚಿವ ಸ್ಥಾನ ವಂಚಿತರು: ಬಿ.ಸಿ ಪಾಟೀಲ್ ಗೆ ಸುತ್ತೂರು ಮಠಗಳ ಬೆಂಬಲ!

ಸಚಿವ ಸಂಪುಟ ಪುನಾರಚನೆ ಬಳಿಕ ದೋಸ್ತಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡಿರುವ ಅತೃಪ್ತಿ ಬೇಗುದಿಯಿಂದ ಮುಂದೆ ಏನಾಗಬಹುದು ...
ಬಿ.ಸಿ ಪಾಟೀಲ್
ಬಿ.ಸಿ ಪಾಟೀಲ್
ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಬಳಿಕ ದೋಸ್ತಿ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್ ನಲ್ಲಿ ಕಾಣಿಸಿಕೊಂಡಿರುವ  ಅತೃಪ್ತಿ ಬೇಗುದಿಯಿಂದ ಮುಂದೆ ಏನಾಗಬಹುದು ಎಂಬ  ಆತಂಕ ಕೈ ನಾಯಕರ ತಳಮಳಕ್ಕೆ ಕಾರಣವಾಗಿದೆ.
ಸಂಪುಟದಿದಂದ ಕೈ ಬಿಟ್ಟಿರುವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತನಾಡಿದ್ದಾರೆ, ಸಚಿವ ಸ್ಥಾನ ಸಿಗದ ಬಿ,ಸಿ ಪಾಟೀಲ್ ಮತ್ತು ರೋಷನ್ ಬೇಗ್, ರಾಜ್ಯ ನಾಯಕರ ವಿರುದ್ಧ ಕೊತಕೊತ ಕುದಿಯುತ್ತಿದ್ದಾರೆ,
ಸಚಿವ ಸ್ಥಾನಕ್ಕೆ ಎಂಬಿ ಪಾಟೀಲ್ ಮತ್ತು ಬಿಸಿ ಪಾಟೀಲ್ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಬಿಸಿ ಪಾಟೀಲ್ ಟ್ವೀಟ್ ಮಾಡಿ ಅಸಮಾಧಾನ ಹೊರ ಹಾಕಿದ್ದರು. ನನಗೆ ಸಮುದಾಯದ ಹಾಗೂ ದಾರ್ಮಿಕ ಮುಖಂಡರ ಬೆಂಬಲವಿದೆ ಎಂದು ಹೇಳಿದ್ದರು.
ಸುತ್ತೂರು ಮಠದ ಶ್ರೀಗಳು ನನ್ನ ಜೊತೆ ಮಾತನಾಡಿದ್ದಾರೆಸ, ನನಗೆ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಶ್ರೀಗಳು ಬೇಸರ ಗೊಂಡಿದ್ದಾರೆ, ನನ್ನ ಹೋರಾಟಕ್ಕೆ ಅವರು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಅಂತಹ ಸ್ವಾಮೀಜಿಗಳು ಬೇಕು ಎಂದು ಬಿಸಿ ಪಾಟೀಲ್  ಟ್ವೀಟ್ ಮಾಡಿದ್ದಾರೆ,
ರಾಮಲಿಂಗಾ ರೆಡ್ಡಿ ಮತ್ತು ರೋಷನ್ ಬೇಗ್ ಅವರನ್ನು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಮ್ಮನ್ನು ನಿರ್ಲಕ್ಷ್ಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
ರೆಡ್ಡಿ ಮತ್ತು ಬೇಗ್ ಅವರನ್ನು ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸಂಪುಟ ವಿಸ್ತರಣೆ ಮಾಡುವಾಗ ಹಿರಿಯರು ಹಾಗೂ ಹಿಂದಿನ ಸರ್ಕಾರದಲ್ಲಿ ಅವರ ಕಾರ್ಯಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು ರೆಡ್ಡಿ ದೂರಿದ್ದಾರೆ.
ಅಸಮಾಧಾನಿತರ ಜೊತೆ ನಾನು ಸಂಪರ್ಕದಲ್ಲಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಡಾ. ಸುಧಾಕರ್, ಮತ್ತು ಎನ್ ಎಸ ಹ್ಯಾರಿಸ್ ಅವರನ್ನು ನಿಗಮ- ಮಂಡಳಿಗಳಿಗೆ ನೇಮಕ ಮಾಡಲಾಗಿದೆ, ಎಚ್. ಕೆ  ಪಾಟೀಲ್ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಕಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com