ದೇವೇಗೌಡರ ರಾಜಕೀಯ ಲೆಕ್ಕಾಚಾರದಿಂದ ಸಿದ್ದರಾಮಯ್ಯ ಮತಗಳಿಗೆ ಕುತ್ತು?

ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಮತ್ತೆ ಸದ್ದು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಮತ ಬ್ಯಾಂಕ್ ಅನ್ನು ದುರ್ಬಲಗೊಳಿಸಲು ನೂತನ ತಂತ್ರವೊಂದಕ್ಕೆ ......
ಎಚ್ ಡಿ ದೇವೇಗೌಡ
ಎಚ್ ಡಿ ದೇವೇಗೌಡ
ಮೈಸೂರು: ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಮತ್ತೆ ಸದ್ದು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ಅಹಿಂದ ಮತ ಬ್ಯಾಂಕ್ ಅನ್ನು ದುರ್ಬಲಗೊಳಿಸಲು ನೂತನ ತಂತ್ರವೊಂದಕ್ಕೆ ಅವರು ಮುಂಡಾಗಿದ್ದು ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್ ಪಿ) ಒಟ್ಟಾಗಿ ಸ್ಪರ್ಧಿಸಲಿದೆ.. ಈ ಮೂಲಕ ಒಕ್ಕಲಿಗ ಹಾಗೂ ದಲಿತರನ್ನು ಒಂದಾಗಿಸಿ ಹೊಸ ಜಾತಿ ಲೆಕ್ಕಾಚಾರ ರೂಪಿಸಿ ರಾಜಕೀಯವಾಗಿ ಲಾಭ ಗಳಿಸಿಕೊಳ್ಳುವ ಇರಾದೆ ಗೌಡರಿಗಿದೆ ಎಂದು ಹೇಳಲಾಗುತ್ತಿದೆ.
ದಶಕದ ಬಳಿಕ ಮತ್ತೆ ಅಧಿಕಾರಕ್ಕೆ ಮರಳುವುದಕ್ಕಾಗಿ ಸತತ ಪ್ರಯತ್ನ ನಡೆಸುತ್ತಿರುವ ಜೆಡಿಎಸ್, ಮಾಯಾವತಿ ನೇತೃತ್ವದ ಬಿಎಸ್ ಪಿಯೊಡನೆ ಮೈತ್ರಿ ಮಾಡಿಕೊಳ್ಳುವ ಮೂಲಕ ದಲಿತರ ಮತಗಳನ್ನು ಹೆಚ್ಚಾಗಿ ತನ್ನತ್ತ ಸೇಳೆದುಕೊಳ್ಳಲಿದೆ. ಇದು ಕಾಂಗ್ರೆಸ್ ಗೆ ಹೊಡೆತ ನೀಡುವುದು ಖಚಿತ ಎನ್ನಲಾಗುತ್ತಿದೆ.
ಹಿಂದಿನ ಚುನಾವಣೆಯಲ್ಲಿ 173 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಎಸ್ ಪಿ ಕೆಳ್ಳೆಗಾಲ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ 37,000 ಮತಗಳನ್ನು ಪಡೆದುಕೊಂಡಿತ್ತು. ಪಕ್ಷದ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ 10,000 ಕ್ಕೂ ಹೆಚ್ಚು ಮತಗಳನ್ನು ಮತ್ತು 8 ಸ್ಥಾನಗಳಲ್ಲಿ 5,000 ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಒಟ್ಟು 2.6 ಲಕ್ಷ ಮತಗಳನ್ನು ಮತ್ತು 2013ರ ಚುನಾವಣೆಯಲ್ಲಿ ಸುಮಾರು 2.8 ಲಕ್ಷ ಮತಗಳನ್ನು ಪಡೆದಿತ್ತು.. ಹೀಗಾಗಿ ಈ ಬಾರಿಉ ಜೆಡಿಎಸ್ ಸಹ ಬೆಂಬಲ ನೀಡಿದ ಪಕ್ಷದಲ್ಲಿ ಇನ್ನಶಃಟು ಉತ್ತಮ ಸಾಧನೆ ಮಾಡುವುದು ನಿಸ್ಸಂಶಯ. ಇದರ ಮೂಲಕ ಸಿದ್ದರಾಮಯ್ಯ ಅವರ ಅಹಿಂದ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಬಹುದು ಎನ್ನುವುದು ದೇವೇಗೌಡರ ಎಣಿಕೆಯಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com