ಜೆಡಿಎಸ್ ಮೆಗಾ ರ್ಯಾಲಿ ಚುನಾವಣೆಯ ದಿಕ್ಕನ್ನು ಬದಲಾಯಿಸಲಿದೆ: ಹೆಚ್ ಡಿಕೆ

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಷ್ಟ್ರಮಟ್ಟದ ನಾಯಕರ ರ್ಯಾಲಿಗಳಿಂದ ವಿಧಾನಸಭೆ ಚುನಾವಣಾ...
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಷ್ಟ್ರಮಟ್ಟದ ನಾಯಕರ ರ್ಯಾಲಿಗಳಿಂದ ವಿಧಾನಸಭೆ ಚುನಾವಣಾ ಕಣಕ್ಕೆ ಇಳಿದು ರಂಗೇರುತ್ತಿದ್ದರೆ ಸ್ಥಳೀಯ ಪಕ್ಷವಾದ ಜೆಡಿಎಸ್ ಕೂಡ ತನ್ನ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇದೇ 17ರಂದು ಯಲಹಂಕದಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಂಡಿದೆ.  ಇಲ್ಲಿ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಮತ್ತು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ಬಗ್ಗೆ ವಿವರ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ರಾಷ್ಚ್ರೀಯ ಪಕ್ಷಗಳು ಆಯೋಜಿಸುವ ಮೆಗಾ ರ್ಯಾಲಿಗಳಲ್ಲಿ 2ರಿಂದ 3 ಲಕ್ಷ ಜನರು ಆಗಮಿಸುತ್ತಾರೆ. ನಮ್ಮ ರ್ಯಾಲಿಗಳಲ್ಲಿ ಕನಿಷ್ಠ 10 ಲಕ್ಷ ಜನ ಸೇರಲಿದ್ದಾರೆ.

ಜೆಡಿಎಸ್ ನ್ನು ಚುನಾವಣೆ ಸ್ಪರ್ಧೆಯಲ್ಲಿ ಮೂರನೇ ಪಕ್ಷವಾಗಿ ಮಾಧ್ಯಮಗಳು ಬಿಂಬಿಸುತ್ತಿವೆ ಎಂದು ಬೇಸರ  ವ್ಯಕ್ತಪಡಿಸಿದ ಕುಮಾರಸ್ವಾಮಿ, ಮೆಗಾ ರ್ಯಾಲಿಯನ್ನು ನೋಡಿದ ನಂತರ ಜೆಡಿಎಸ್ ತನ್ನ ಸ್ವಂತ ಬಲದಿಂದ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಮಾಧ್ಯಮಗಳಿಗೆ ಅರಿವಾಗಲಿದೆ. ನಮ್ಮ ರ್ಯಾಲಿ ರಾಷ್ಟ್ರೀಯ ಪಕ್ಷಗಳಿಗೆ ಗಟ್ಟಿ ಸಂದೇಶವನ್ನು ಸಾರಲಿದೆ ಮತ್ತು ರಾಜ್ಯದಲ್ಲಿನ ಚುನಾವಣೆಯ ದಿಕ್ಕನ್ನು ಬದಲಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಪಕ್ಕದಲ್ಲಿ 100 ಎಕರೆ ಜಮೀನಿನಲ್ಲಿ ಜೆಡಿಎಸ್ ರ್ಯಾಲಿ ನಡೆಯಲಿದೆ. ನಗರದೊಳಗೆ ಮಾಡಿದರೆ ಸಂಚಾರದಟ್ಟೆಯುಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ನಗರದ ಹೊರವಲಯದಲ್ಲಿ ಮಾಡುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಜೆಡಿಎಸ್ ವತಿಯಿಂದ 100 ಎಲ್ ಸಿಡಿ ಪ್ರಚಾರ ವಾಹನ ಉದ್ಘಾಟನೆಗೊಳ್ಳಲಿದೆ.ರ್ಯಾಲಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ 140 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com