ಅಕ್ರಮ ಹಣಕಾಸು ವಹಿವಾಟು: ಇಂಧನ ಸಚಿವ ಡಿ.ಕೆ ಶಿವಕುಮಾರ್ ಗೆ ಸಮನ್ಸ್

ಅಕ್ರಮ ಹಣಕಾಸು ವಹಿವಾಟು ನಡೆಸಿದ ಆರೋಪದ ಮೇಲೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗೆ ಸಮನ್ಸ್ ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on: 
ಬೆಂಗಳೂರು: ಅಕ್ರಮ ಹಣಕಾಸು ವಹಿವಾಟು ನಡೆಸಿದ ಆರೋಪದ ಮೇಲೆ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗೆ ಸಮನ್ಸ್ ನೀಡಿದೆ. ಗುಜರಾತಿನ ಶಾಸಕರು ತಂಗಿದ್ದ ಈಗಲ್‌ಟನ್‌ ರೆಸಾರ್ಟ್‌ ಮೇಲೆ 2017ರ ಆಗಸ್ಟ್ 2 ರಂದು ದಾಳಿ ನಡೆಸಿದಾಗ ಅಲ್ಲಿಯೇ ಇದ್ದ ಶಿವಕುಮಾರ್ ತಮ್ಮ ಪರ್ಸ್‌ನಲ್ಲಿದ್ದ ಚೀಟಿಯೊಂದನ್ನು ಹರಿದು ಹಾಕಿದ್ದರು, ಇದನ್ನು ಅಧಿಕಾರಿಗಳು ಗಮನಿಸಿದ್ದರು.
ತೆರಿಗೆ ವಂಚನೆ ಹಾಗೂ ಈಗಲ್‌ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದಾಗ ಶಿವಕುಮಾರ್‌ ಹಲವು ಮಹತ್ವದ ಚೀಟಿ ಹರಿದು ಹಾಕಿದ್ದಾರೆ. ಅಕ್ರಮವಾಗಿ ಸಾಲ ನೀಡಿ ತೆರಿಗೆ ವಂಚನೆ ಮಾಡಿದ್ದಾರೆ’ ಎಂಬ ಆರೋಪದಡಿ ಸಮನ್ಸ್  ನೀಡಲಾಗಿದ್ದು ಮಾರ್ಚ್ 22ರ ವೇಳೆಗೆ  ಕೋರ್ಟ್ ಗೆ ವಯಕ್ತಿಕವಾಗಿ ಹಾಜರಾಗಬೇಕು ಇಲ್ಲವೇ ತಮ್ಮ ಪರ ವಕೀಲರು ಹಾಜರಿರಬೇಕು ಎಂದು ಸಮನ್ಸ್ ನೀಡಲಾಗಿದೆ.
ದೂರಿನ ಪ್ರಕಾರ ಶಿವಕುಮಾರ್ ದಾಖಲೆಯಿಲ್ಲದ  12.40 ರು ಕೋಟಿ  ಹಣವನ್ನು ಸಾಲವಾಗಿ ನೀಡಿದ್ದಾರೆ,  ಜೊತೆಗೆ ಖಾಸಗಿ ಕಂಪುನಿ ಮತ್ತು ವ್ಯಕ್ತಿಗಳಿಂದ ರು. 10 ಕೋಟಿ ಹಣವನ್ನು ಬಡ್ಡಿಯಾಗಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ, 
ಇನ್ನೂ ಆದಾಯ ತೆರಿಗೆ ಇಲಾಖೆ  ಡಿ,ಕೆ ಶಿವಕುಮಾರ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸಾಕ್ಷಿ ನಾಶ ಮಾಡಲು ಯತ್ನಿಸಿದ್ದು, ಪೇಪರ್ ಗಳನ್ನು ಹರಿದು ಹಾಕಿದ್ದಾರೆ, ಈ ಕಾಗದದ ತುಂಡುಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com