ಸುಳ್ಳು, ವಿಕೃತ ಸುದ್ದಿ ಹರಡುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಬೆಂಬಲ: ಅನಂತ್ ಕುಮಾರ್ ಹೆಗಡೆ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದು, ಸುಳ್ಳು, ವಿಕೃತ ಸುದ್ದಿ ಹರಡಿ ಸಮಾಜದ ಸಾಮರಸ್ಯ ಕೆಡಿಸುತ್ತಿರುವವರ ಬೆನ್ನಿಗೆ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ
Updated on
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದು, ಸುಳ್ಳು, ವಿಕೃತ ಸುದ್ದಿ ಹರಡಿ ಸಮಾಜದ ಸಾಮರಸ್ಯ ಕೆಡಿಸುತ್ತಿರುವವರ ಬೆನ್ನಿಗೆ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 
ಜನತೆಯನ್ನು ದಾರಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಸಾಮರಸ್ಯ ಕೆಡಿಸುತ್ತಿರುವವರ ಹಿಂದಿದ್ದಾರೆ. ಸಾಮರಸ್ಯ ಕದಡುತ್ತಿರುವ ಮೂರ್ಖ ಶಿಖಾಮಣಿಗಳಿಗೆ ಕಾನೂನಿನ ರುಚಿ ತೋರಿಸಬೇಕಿದೆ. ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ಸಾಮರಸ್ಯ ಕೆಡಿಸುತ್ತಿರುವ ಕೆಲವರ ವಿವರ ಸಿಕ್ಕಿದೆ ಇಂತಹ ಎಡಬಿಡಂಗಿಗಳನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ ಎಂದು ಅನಂತ್ ಕುಮಾರ್ ಹೆಗಡೆ ತಮ್ಮ ವೆಬ್ ಸೈಟ್ ನಲ್ಲಿ ತಿಳಿಸಿದ್ದಾರೆ. 
"ನಾನು ಎಂದು ಚಿಂತಿಸದ, ಎಲ್ಲಿಯೂ  ಹೇಳದ, ಎಲ್ಲಿಯೂ ಬಳಸದ ಪದಗಳನ್ನು ಸೃಷ್ಟಿಸಿ, ಅದಕ್ಕೊಂದು ವ್ಯವಸ್ಥಿತ ರೂಪ ನೀಡಿ ವಿಷ ಹರಡುವ ವಿಕೃತ ಮನೋಸ್ಥಿತಿಗಳ ತಂಡವೊಂದು ಸಾಮಾಜಿಕ  ಜಾಲ ತಾಣಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ, ವಿಕೃತ ಅವಹೇಳನಕಾರಿ ಮತ್ತು ಅಸಭ್ಯ ರೂಪದಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು, ಈ ವ್ಯಕ್ತಿಗಳು ಮಾಡುತ್ತಿರುವುದು ಕಂಡು ಬಂದಿದೆ. ಜನತೆಯನ್ನು ದಾರಿ ತಪ್ಪಿಸಲು ಸೋಗಲಾಡಿ ಸಿದ್ಧ ಸರಕಾರವೇ ಇಂತಹ ವ್ಯಕ್ತಿಗಳ ಹಿಂದೆ ನಿಲ್ಲುತ್ತಿರುವುದರಿಂದ ನಾನು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಸರ್ಕಾರವೇ ನಮ್ಮದು ಎಂದು ಅಹಂನಿಂದ ವರ್ತಿಸುತ್ತಿರುವ ಈ ಮೂರ್ಖಶಿಖಾಮಣಿಗಳಿಗೆ ಕಾನೂನಿನ ರುಚಿ ತೋರಿಸಲೇಬೇಕಾದ ಅನಿವಾರ್ಯತೆ ಇದ್ದು, ಸುಳ್ಳು ಸುದ್ದಿ ಬಿತ್ತರಿಸುತ್ತಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ" ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ. 
"ಸಾಮಾಜಿಕ ಜಾಲ-ತಾಣಗಳಲ್ಲದೆ  ಬೇರೆ-ಬೇರೆ ವೇದಿಕೆಗಳಲ್ಲಿ, ಜನತೆಯನ್ನು ದಾರಿ ತಪ್ಪಿಸುತ್ತಿರುವ ಎಡ-ಬಿಡಂಗಿಗಳನ್ನು ಸಹ ನ್ಯಾಯಾಲಯಕ್ಕೆ ಎಳೆಯುತ್ತಿದ್ದೇನೆ.  ಜನರ  ತೆರಿಗೆ ಹಣವನ್ನು ನೆಕ್ಕುತ್ತಿರುವ ಸಿದ್ಧನ ಕೃಪಾ-ಪೋಷಿತ ಗಂಜಿ ಗಿರಾಕಿಗಳಿಗೆ ಸಮಾಜ ಒಡೆಯುವ ಕೃತ್ಯಕ್ಕೆ ತಡೆ ಹಾಕಲೇಬೇಕಿದೆ".  ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗುವವರಿಗೆ ಇದೊಂದು ಎಚ್ಚರಿಕೆಯೂ ಆಗಿದೆ ಎಂದು ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com