ರಾಹುಲ್ ಗಾಂಧಿ
ರಾಜಕೀಯ
ವಿಧಾನಸಭೆ ಚುನಾವಣೆ: 70 ಸದಸ್ಯರ ಪ್ರಚಾರ ಸಮಿತಿಗೆ ರಾಹುಲ್ ಗಾಂಧಿ ಅನುಮೋದನೆ
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯದ ಇಂಧನ ಸಚಿವ ಡಿ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಿರುವ 70 ಸದಸ್ಯರ ಪ್ರಚಾರ ಸಮಿತಿಗೆ........
ನವದೆಹಲಿ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯದ ಇಂಧನ ಸಚಿವ ಡಿ. ಶಿವಕುಮಾರ್ ನೇತೃತ್ವದಲ್ಲಿ ರಚನೆಯಾಗಿರುವ 70 ಸದಸ್ಯರ ಪ್ರಚಾರ ಸಮಿತಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನುಮೋದಿಸಿದ್ದಾರೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಶೇಷವೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರನ್ನು ಈ ಸಮಿತಿ ಒಳಗೊಂಡಿದೆ. ಲೋಕಸಭಾ ಸದಸ್ಯರಾದ ಎಂ.ಮಲ್ಲಿಕಾರ್ಜುನ ಖರ್ಗೆ ಸಹ ಈ ಸಮಿತಿ ಸದಸ್ಯರಾಗಿರುತ್ತಾರೆ. ಇನ್ನು ಬಹುತೇಕ ಕಾಂಗ್ರೆಸ್ ನ ಮಾಜಿ ಕೇಂದ್ರ ಮಂತ್ರಿಗಳು, ಕೆಪಿಸಿಸಿ ಮಾಜಿ ಅಧ್ಯಕ್ಷರುಗಳು, ಪಕ್ಷ ಸಂಘಟನೆಗಳ ಮುಖ್ಯಸ್ಥರು, ಎಐಸಿಸಿ ಕಛೇರಿ ಮತ್ತು ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಂತೆ ಈ ಸಮಿತಿ ರಚನೆಯಾಗಿದೆ.
ಮೇ 2018ಕ್ಕೆ ಕರ್ನಾಟಕ ವಿಧಾನಸಭೆ ಆಡಳಿತ ಅವಧಿ ಕೊನೆಗೊಳ್ಳಲಿದ್ದು ಬಹುತೇಕವಾಗಿ ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ವಿಧಾನ ಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ.


