ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿ ನಿಯಮಾವಳಿ ರೂಪಿಸಲು ಎಂಎಲ್ ಸಿ ತಾರಾ ಅನುರಾಧ ಒತ್ತಾಯ

ಕನ್ನಡ ಚಿತ್ರರಂಗದ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ "ಕನ್ನಡ ಚಲನಚಿತ್ರ ನೀತಿ' ಜಾರಿಯಲ್ಲಿದ್ದು, ಅದಕ್ಕೆ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಬಿಜೆಪಿ ...
ತಾರಾ ಅನುರಾಧ
ತಾರಾ ಅನುರಾಧ
ಬೆಂಗಳೂರು: ಕನ್ನಡ ಚಿತ್ರರಂಗದ ಅಭಿವೃದ್ಧಿ ಹಾಗೂ ಉತ್ತೇಜನಕ್ಕಾಗಿ "ಕನ್ನಡ ಚಲನಚಿತ್ರ ನೀತಿ' ಜಾರಿಯಲ್ಲಿದ್ದು, ಅದಕ್ಕೆ ನಿಯಮಾವಳಿ ರೂಪಿಸಿ ಅನುಷ್ಠಾನಗೊಳಿಸಬೇಕೆಂದು ಬಿಜೆಪಿ ಎಂಎಲ್ ಸಿ ತಾರಾ ಅನುರಾಧ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಮುಖ್ಯಮಂತ್ರಿ ಎಚ್ .ಡಿ ಕುಮಾರ ಸ್ವಾಮಿ ಅವರು ಸಿನಿಮಾ ಹಿನ್ನೆಲೆ ಹೊಂದಿದ್ದಾರೆ, ಅವರು ನಿರ್ಮಾಪಕರು ಕೂಡ, ನಟಿ ಜಯಮಾಲಾ  ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿದ್ದಾರೆ , ಅವರಿಗೆ ಸಿನಿಮಾ ರಂಗದ ಸಮಸ್ಯೆಗಳ ಬಗ್ಗೆ ಅರಿವಿದೆ ಎಂದು ತಾರಾ ತಿಳಿಸಿದರು. 
ವಾರ್ಷಿಕವಾಗಿ 175ಕ್ಕೂ ಹೆಚ್ಚು ಕನ್ನಡ ಚಿತ್ರಗಳು ತೆರೆ ಕಾಣುತ್ತವೆ. ಕಳೆದ ಆರು ತಿಂಗಳಲ್ಲೇ 100ಕ್ಕೂ ಹೆಚ್ಚು ಕನ್ನಡ ಚಿತ್ರ ಬಿಡುಗಡೆಯಾಗಿವೆ. ನಿರ್ಮಾಣ, ವಿತರಣೆ, ಪ್ರಸಾರ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ತಂತ್ರ  ಜ್ಞಾನ ಬಳಕೆ ಹೆಚ್ಚಾಗಿದ್ದು, ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ. ಕನ್ನಡದಲ್ಲೂ ಪ್ರತಿಭಾವಂತರಿದ್ದು, ಭಾರಿ ಹೂಡಿಕೆ ಚಿತ್ರಗಳು ನಿರ್ಮಾಣವಾಗುತ್ತಿದ್ದರೂ ಲಾಭ ಗಳಿಸುತ್ತಿರುವ ಚಿತ್ರಗಳು ಬೆರಳೆಣಿಕೆ ಮಾತ್ರ ಎಂದು ಹೇಳಿದರು.
ಚಿತ್ರೀಕರಣ ನಡೆಸಬೇಕಾದರೆ ಹತ್ತಾರು ಇಲಾಖೆಗಳ ಅನುಮತಿ ಪಡೆಯುವುದು ಸವಾಲೆನಿಸಿದೆ. ಏಕ ಗವಾಕ್ಷಿ ವ್ಯವಸ್ಥೆಯಡಿ ಅನುಮತಿ ಸಿಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಾರಾ ಅನುರಾಧ ಮನವಿ ಮಾಡಿದರು.  ಜೊತೆಗೆ ಸಿನಿಮಾ ರಂಗದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಇಎಸ್ ಐ, ಪಿಎಫ್, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತ ಕೆಲಸ ಆಗಬೇಕು ಎಂದರು.ಯ
ಗಂಟೆ ಲೆಕ್ಕದಲ್ಲಿ ವಿಮಾನಯಾನ ದರ ಹೆಚ್ಚಾಗುವಂತೆ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ ವಿಪರೀತ ಏರಿಕೆಯಾಗುತ್ತದೆ. ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ವೀಕ್ಷಕರೇ ಬಾರದ ಬೆಳಗ್ಗೆ, ಮಧ್ಯರಾತ್ರಿ ವೇಳೆ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಅದಕ್ಕೆ ಕಡಿವಾಣ ಹಾಕಬೇಕು ಎಂದು ತಾರಾ  ಪ್ರಸ್ತಾಪಿಸಿದ್ದಾರೆ.
ಬಿಜೆಪಿಯ ತಾರಾ ಅನುರಾಧ ಪ್ರಸ್ತಾಪಿಸಿದ ವಿಷಯಕ್ಕೆ ಮುಖ್ಯಮಂತ್ರಿಗಳ ಪರ ಉತ್ತರಿಸಿದ ಸಚಿವೆ ಜಯಮಾಲಾ,, ಕನ್ನಡ ಚಲನಚಿತ್ರ ನೀತಿಯಡಿ ನಿಯಮಾವಳಿ ರಚನೆಯಾಗುತ್ತಿದ್ದು, ಇದು ಎಲ್ಲ ಅಂಶ ಒಳಗೊಂಡಿರಲಿದೆ ಎಂದರು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com