ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಅಂಕಪಟ್ಟಿ ಹಗರಣ: ಕಾಲಮಿತಿ ಆಧಾರದಲ್ಲಿ ತನಿಖೆ- ಡಿಕೆಶಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿ ತಿದ್ದುಪಡಿ ಹಗರಣದ ಬಗ್ಗೆ ಕಾಲಮಿತಿ ಆಧಾರದಲ್ಲಿ ಸಿಐಡಿ ತನಿಖೆ ಪೂರ್ಣಗೊಳಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಡಿ. ಕೆ. ಶಿವಕುಮಾರ್
ಡಿ. ಕೆ. ಶಿವಕುಮಾರ್
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿನ ಅಂಕಪಟ್ಟಿ ತಿದ್ದುಪಡಿ  ಹಾಗೂ  ಪ್ಯಾರಾ ಮೆಡಿಕಲ್ ಕೋರ್ಸ್ ನಲ್ಲಿನ  ವಂಚನೆ ಹಗರಣದ ಬಗ್ಗೆ ಕಾಲಮಿತಿ ಆಧಾರದಲ್ಲಿ  ಸಿಐಡಿ ತನಿಖೆ ಪೂರ್ಣಗೊಳಿಸಲಿದೆ ಎಂದು  ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್  ಹೇಳಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಸದಸ್ಯ ರಿಜ್ವನ್ ಅರ್ಷದ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನರ್ಸಿಂಗ್  ಹಾಗೂ  ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗಾಗಿ ಹೊಸ ನೀತಿ ರಚಿಸಲು ಇಲಾಖೆ ಉದ್ದೇಶಿಸಿರುವುದಾಗಿ  ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com