ದರ್ಶನ್ ಪುಟ್ಟಣ್ಣಯ್ಯ
ರಾಜಕೀಯ
ವಿದೇಶದಲ್ಲಿ ಕೋಟಿ ಸಂಪಾದಿಸಬಹುದು, ಆದರೆ ರೈತ ಚಳುವಳಿಯಲ್ಲಿ ಸಿಗುವ ತೃಪ್ತಿ ಇರುವುದಿಲ್ಲ: ದರ್ಶನ್ ಪುಟ್ಟಣ್ಣಯ್ಯ
ವಿಧಾನಸಭೆ ಚುನಾವಣೆ ಸೋಲಿನ ನಂತರ ವಿದೇಶದಲ್ಲಿದ್ದ ದರ್ಶನ್ ಭಾನುವಾರ ಮೈಸೂರಿಗೆ ಆಗಮಿಸಿದ್ದಾರೆ.. ಇನ್ನು ಮುಂದೆ ರೈತ ಚಳುವಳಿಗಳಲ್ಲಿ ಮತ್ತು ಹೋರಾಟಗಳಲ್ಲಿ ...
ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಸ್ವರಾಜ್ ಇಂಡಿಯಾ ಪಕ್ಷ ಸಹಯೋಗದಲ್ಲಿ ಜುಲೈ 21 ರಂದು ಬಳ್ಳಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಹಮ್ಮಿಕೊಂಡಿದ್ದು, ಬಂದ್ ನಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಮುಖ್ಯಸ್ಥ ದರ್ಶನ್ ಪುಟ್ಟಣ್ಣಯ್ಯ ಕೂಡ ಭಾಗವಹಿಸಲಿದ್ದಾರೆ.
ವಿಧಾನಸಭೆ ಚುನಾವಣೆ ಸೋಲಿನ ನಂತರ ವಿದೇಶದಲ್ಲಿದ್ದ ದರ್ಶನ್ ಭಾನುವಾರ ಮೈಸೂರಿಗೆ ಆಗಮಿಸಿದ್ದಾರೆ. ಇನ್ನು ಮುಂದೆ ರೈತ ಚಳುವಳಿಗಳಲ್ಲಿ ಮತ್ತು ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ರೈತ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವುದಾಗಿ ಮಾಜಿ ಶಾಸಕ ದಿವಂಗತ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ತಿಳಿಸಿದ್ದಾರೆ,
ವಿಧಾನಸಭೆ ಚುನಾವಣೆ ನಂತರ ನಾನುವಿದೇಶದಲ್ಲಿದ್ದೆ,ಅಲ್ಲಿ ನನ್ನ ಕಂಪನಿ ವ್ಯವಹಾರ ನೋಡಿಕೊಳ್ಳಬೇಕಿತ್ತು, ಅಲ್ಲಿನ ಕಂಪೆನಿ ಮಾರಾಟ ಮಾಡಲು ನಿರ್ಧರಿಸಿದ್ದೇನೆ, ಇನ್ನು ಸ್ವಲ್ಪ ದಿನಗಳಲ್ಲಿ ಅಲ್ಲಿನ ವ್ಯವಹಾರಗಳನ್ನು ಪೂರ್ಣಗೊಳಿಸಿ ತಂದೆಯವರ ಹಾದಿಯಲ್ಲಿ ರೈತ ಚಳುವಳಿ ಮತ್ತು ಹೋರಾಟಗಳನ್ನ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ನನಗೆ ಅಭೂತಪೂರ್ವ ಬೆಂಬಲ ನೀಡಿದರೂ ನಾನು ಸೋಲು ಕಾಣಬೇಕಾಯಿತು. ಯಾಕೆ ಸೋತೆ ಎನ್ನುವುದಕ್ಕಿಂತ ಜನರಿಗೆ ಹೇಗೆ ಹತ್ತಿರವಾಗಬೇಕು ಎಂದು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮಂಡ್ಯದ ಮೇಲುಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ 73,779 ಮತ ಪಡೆದು ಜೆಡಿಎಸ್ ನ ಸಿ.ಎಸ್ ಪುಟ್ಟರಾಜು ವಿರುದ್ಧ ಸೋತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ